Google's Action: ಸುಮಾರು 9 ಲಕ್ಷ ಆ್ಯಪ್‌ಗಳನ್ನು ತೆಗೆದುಹಾಕಲು ಗೂಗಲ್ ನಿರ್ಧಾರ, ನೀವೂ ಇನ್‌ಸ್ಟಾಲ್ ಮಾಡಿದ್ದರೆ ಹುಷಾರ್

Google's Action: ಸುಮಾರು 9 ಲಕ್ಷ ಆಪ್‌ಗಳನ್ನು ತೆಗೆದುಹಾಕಲು ಗೂಗಲ್ ನಿರ್ಧರಿಸಿದೆ. ಗೂಗಲ್ ಶೀಘ್ರದಲ್ಲೇ ತನ್ನ ಪ್ಲೇ ಸ್ಟೋರ್‌ನಿಂದ ಅಪ್ಲಿಕೇಶನ್‌ಗಳನ್ನು ತೆಗೆದು ಹಾಕಲು ಕ್ರಮ ಮುಂದಾಗಿದೆ. ಅಂತಹ ನಿರ್ಧಾರವನ್ನು ಏಕೆ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಯಿರಿ...

Written by - Yashaswini V | Last Updated : May 16, 2022, 02:18 PM IST
  • ಗೂಗಲ್ ಪ್ಲೇ ಸ್ಟೋರ್‌ನಿಂದ ಸುಮಾರು ಒಂಬತ್ತು ಲಕ್ಷ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಲು ಸಿದ್ಧತೆ ನಡೆಸುತ್ತಿದೆ
  • ಆಂಡ್ರಾಯ್ಡ್ ಅಥಾರಿಟಿ ಪ್ರಕಾರ, ಇದನ್ನು ಮಾಡುವುದರಿಂದ ಗೂಗಲ್ ಆಪ್ ಸ್ಟೋರ್‌ನಲ್ಲಿನ ಅಪ್ಲಿಕೇಶನ್‌ಗಳ ಸಂಖ್ಯೆಯನ್ನು ಮೂರನೇ ಒಂದು ಭಾಗದಷ್ಟು ಕಡಿಮೆ ಮಾಡುತ್ತದೆ
  • ಈ ಹಿಂದೆ, ಆಪಲ್ ತನ್ನ ಪ್ಲೇ ಸ್ಟೋರ್‌ನಿಂದ ಅಂತಹ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಲು ನಿರ್ಧರಿಸಿತ್ತು
Google's Action: ಸುಮಾರು 9 ಲಕ್ಷ ಆ್ಯಪ್‌ಗಳನ್ನು ತೆಗೆದುಹಾಕಲು ಗೂಗಲ್ ನಿರ್ಧಾರ, ನೀವೂ ಇನ್‌ಸ್ಟಾಲ್ ಮಾಡಿದ್ದರೆ ಹುಷಾರ್  title=
Google has decided to remove about 9 lakh apps

ಗೂಗಲ್ ಪ್ಲೇ ಸ್ಟೋರ್‌ನಿಂದ ಸುಮಾರು 9 ಲಕ್ಷ ಅಪ್ಲಿಕೇಶನ್‌ಗಳನ್ನು ತೆಗೆಯಲು ಮುಂದಾದ ಗೂಗಲ್: ಇತ್ತೀಚಿಗೆ ಗೂಗಲ್ ಕೆಲವು ಆಪ್ ಗಳನ್ನು ಬ್ಯಾನ್ ಮಾಡಿತ್ತು. ಇದೀಗ ಸುಮಾರು 9 ಲಕ್ಷ ಆಪ್‌ಗಳನ್ನು ತೆಗೆದುಹಾಕಲು ಗೂಗಲ್ ಮುಂದಾಗಿದ್ದು ಬಳಕೆದಾರರ ಸುರಕ್ಷತೆಗಾಗಿ ಕಂಪನಿಯು ಇಂತಹ ನಿರ್ಧಾರವನ್ನು ತೆಗೆದುಕೊಳ್ಳುತ್ತಿದೆ ಎಂದು ಗೂಗಲ್ ತಿಳಿಸಿದೆ. ನೀವೂ ಸಹ ಈ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿದ್ದರೆ ಜಾಗರೂಕರಾಗಿರಿ.

ಗೂಗಲ್ ಪ್ಲೇ ಸ್ಟೋರ್‌ನಿಂದ ಸುಮಾರು 9 ಲಕ್ಷ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಲಾಗುತ್ತದೆ:
ವಾಸ್ತವವಾಗಿ ಗೂಗಲ್ ತನ್ನ ಗೂಗಲ್ ಪ್ಲೇ ಸ್ಟೋರ್‌ನಿಂದ ಸುಮಾರು ಒಂಬತ್ತು ಲಕ್ಷ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಲು ಸಿದ್ಧತೆ ನಡೆಸುತ್ತಿದೆ,  ಅದರ ನವೀಕರಣಗಳು ಇನ್ನಷ್ಟೇ ಬಿಡುಗಡೆ ಆಗಬೇಕಿದೆ. ಆಂಡ್ರಾಯ್ಡ್ ಅಥಾರಿಟಿ ಪ್ರಕಾರ, ಇದನ್ನು ಮಾಡುವುದರಿಂದ ಗೂಗಲ್ ಆಪ್ ಸ್ಟೋರ್‌ನಲ್ಲಿನ ಅಪ್ಲಿಕೇಶನ್‌ಗಳ ಸಂಖ್ಯೆಯನ್ನು ಮೂರನೇ ಒಂದು ಭಾಗದಷ್ಟು ಕಡಿಮೆ ಮಾಡುತ್ತದೆ. ಈ ಹಿಂದೆ, ಆಪಲ್ ತನ್ನ ಪ್ಲೇ ಸ್ಟೋರ್‌ನಿಂದ ಅಂತಹ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಲು ನಿರ್ಧರಿಸಿದೆ ಆ್ಯಪಲ್ ಕೂಡ ಈ ಬಗ್ಗೆ ಎಲ್ಲಾ ಆಪ್ ತಯಾರಕರಿಗೆ ಇಮೇಲ್ ಕಳುಹಿಸುವ ಮೂಲಕ ಮಾಹಿತಿ ನೀಡಿತ್ತು.

ಬಳಕೆದಾರರಿಗೆ ಡೌನ್‌ಲೋಡ್ ಮಾಡಲು ಸಾಧ್ಯವಾಗುವುದಿಲ್ಲ:
ಸೆನೆಟ್ ಪ್ರಕಾರ, ಗೂಗಲ್ ಮತ್ತು ಆಪಲ್ ತಮ್ಮ ಬಳಕೆದಾರರನ್ನು ರಕ್ಷಿಸಲು ಈ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಗೂಗಲ್ ತನ್ನ ಪ್ಲೇಸ್ಟೋರ್‌ನಲ್ಲಿ ಆ ಅಪ್ಲಿಕೇಶನ್‌ಗಳನ್ನು ಮರೆಮಾಡುತ್ತದೆ, ಅದರ ನವೀಕರಣಗಳನ್ನು ಬಿಡುಗಡೆ ಮಾಡಲಾಗಿಲ್ಲ. ಇದನ್ನು ಮಾಡುವುದರಿಂದ, ಬಳಕೆದಾರರು ಅದನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ- ಶೀಘ್ರದಲ್ಲೇ ಸ್ಮಾರ್ಟ್‌ಫೋನ್‌ಗಳ ಬೆಲೆ ಏರಿಕೆ! ನೀವು ಹೊಸ ಮೊಬೈಲ್ ಖರೀದಿಸಲು ಬಯಸಿದರೆ ಈಗಲೇ ಖರೀದಿಸಿ

ವರದಿಯ ಪ್ರಕಾರ, ಹಳೆಯ ಅಪ್ಲಿಕೇಶನ್‌ಗಳು  ಆಂಡ್ರಾಯ್ಡ್ ಮತ್ತು ಐಒಎಸ್ ನಲ್ಲಿನ ಬದಲಾವಣೆಗಳು, ಹೊಸ ಎಪಿಐಗಳು ಮತ್ತು ಸುರಕ್ಷತೆಯನ್ನು ಹೆಚ್ಚಿಸಲು ಹೊಸ ವಿಧಾನಗಳ ಲಾಭವನ್ನು ಪಡೆಯುವುದಿಲ್ಲ. ಈ ಕಾರಣಕ್ಕಾಗಿ, ಹಳೆಯ ಅಪ್ಲಿಕೇಶನ್‌ಗಳು ಸುರಕ್ಷತೆಯ ದೃಷ್ಟಿಯಿಂದ ದುರ್ಬಲವಾಗಿರುತ್ತವೆ, ಆದರೆ ಹೊಸ ಅಪ್ಲಿಕೇಶನ್‌ಗಳು ಈ ಕೊರತೆಯನ್ನು ಹೊಂದಿರುವುದಿಲ್ಲ ಎಂದು ತಿಳಿದುಬಂದಿದೆ.

ಸ್ವಲ್ಪ ಸಮಯದ ಹಿಂದೆ, ಗೂಗಲ್ ಮತ್ತು ಆಪಲ್ ಎರಡು ವರ್ಷಗಳಿಂದ ನವೀಕರಿಸದ ಅಪ್ಲಿಕೇಶನ್‌ಗಳನ್ನು ತೆಗೆದುಹಾಕುವುದಾಗಿ ಘೋಷಿಸಿದವು. ಅದರಂತೆ, ಗೂಗಲ್ ಪ್ಲೇ ಸ್ಟೋರ್‌ನಿಂದ 869,000 ಅಪ್ಲಿಕೇಶನ್‌ಗಳನ್ನು ತೆಗೆದುಹಾಕುತ್ತಿದ್ದರೆ, ಆಪಲ್ 650,000 ಅಪ್ಲಿಕೇಶನ್‌ಗಳನ್ನು ಆಪ್ ಸ್ಟೋರ್‌ನಿಂದ ತೆಗೆದುಹಾಕುತ್ತಿದೆ.

ಗೂಗಲ್ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲು ನಿರ್ಧರಿಸಲಾಗಿರುವ ಅಪ್ಲಿಕೇಶನ್‌ಗಳಲ್ಲಿ ಮೊದಲ ಹಂತದಲ್ಲಿ ಅಪ್‌ಡೇಟ್ ಆಗದ ಆ್ಯಪ್‌ಗಳನ್ನು ಸ್ವಲ್ಪ ಸಮಯದವರೆಗೆ ಮರೆಮಾಡುವುದಾಗಿ ಗೂಗಲ್ ಹೇಳಿದೆ. ಹೊಸ ನವೀಕರಣ ಬಂದಾಗ ಬಳಕೆದಾರರು ಅಪ್ಲಿಕೇಶನ್ ಅನ್ನು ಬಳಸಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಅಪ್ಲಿಕೇಶನ್ ಅನ್ನು ತೆಗೆದುಹಾಕಲಾಗುತ್ತದೆ.

ಇದನ್ನೂ ಓದಿ- OTT ವೇದಿಕೆಗಳ ಚಂದಾದಾರಿಕೆಯ ಮೇಲೆ ಬಂಪರ್ ರಿಯಾಯ್ತಿ ಸಿಗುತ್ತಿದೆ, ತ್ವರೆ ಮಾಡಿ ಲಾಭ ನಿಮ್ಮದಾಗಿಸಿಕೊಳ್ಳಿ

ಎರಡೂ ಕಂಪನಿಗಳು ತಮ್ಮ ಬಳಕೆದಾರರ ಸುರಕ್ಷತೆಗಾಗಿ ಈ ನಿರ್ಧಾರವನ್ನು ತೆಗೆದುಕೊಂಡಿವೆ. ಆಂಡ್ರಾಯ್ಡ್ ಮತ್ತು ಐಒಎಸ್‌ನಲ್ಲಿನ ಹಳೆಯ ಅಪ್ಲಿಕೇಶನ್, ಹೊಸ ಎಪಿಐಗಳು ಅಥವಾ ಅತ್ಯಾಧುನಿಕ ಭದ್ರತಾ ನವೀಕರಣಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲವಾದ್ದರಿಂದ ಈ ಕಂಪನಿಗಳು ಅಪ್ಲಿಕೇಶನ್ ಅನ್ನು ತೆಗೆದುಹಾಕಲು ನಿರ್ಧರಿಸಿವೆ ಎಂದು ಮಾಹಿತಿ ಲಭ್ಯವಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News