ಬಳಕೆದಾರರ ದೊಡ್ಡ ಸಮಸ್ಯೆಗೆ ಪರಿಹಾರ ನೀಡಿದ ವಾಟ್ಸಾಪ್

ಬಳಕೆದಾರರ ಬಹು ದಿನಗಳ ಬೇಡಿಕೆಗೆ ಸ್ಪಂದಿಸಿರುವ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದರಿಂದ ಬಳಕೆದಾರರ ದೊಡ್ಡ ಸಮಸ್ಯೆಗೆ ಪರಿಹಾರ ದೊರೆತಂತಾಗಿದೆ.

Written by - Yashaswini V | Last Updated : Jul 21, 2022, 02:38 PM IST
  • ವಾಟ್ಸಾಪ್‌ನಲ್ಲಿ ಆಗಾಗ್ಗೆ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಲಾಗುತ್ತದೆ
  • ಇದೀಗ ವಾಟ್ಸಾಪ್ ಬಳಕೆದಾರರ ದೊಡ್ಡ ಸಮಸ್ಯೆಗೆ ಪರಿಹಾರ ನೀಡಿದೆ
  • ಏನಿದು ಹೊಸ ವಾಟ್ಸಾಪ್ ವೈಶಿಷ್ಟ್ಯ ತಿಳಿಯಿರಿ
ಬಳಕೆದಾರರ ದೊಡ್ಡ ಸಮಸ್ಯೆಗೆ ಪರಿಹಾರ ನೀಡಿದ ವಾಟ್ಸಾಪ್  title=
Whatsapp Latest Update

ವಾಟ್ಸಾಪ್ ಹೊಸ ವೈಶಿಷ್ಟ್ಯ:  ಬಳಕೆದಾರರ ಬಹು ದಿನಗಳ ಬೇಡಿಕೆಗೆ ಸ್ಪಂದಿಸಿರುವ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇನ್ನು ಮುಂದೆ ನಿಮ್ಮ ಸಂಪೂರ್ಣ ಚಾಟ್ ಇತಿಹಾಸವನ್ನು ಐಫೋನ್‌ನಿಂದ Android ಗೆ ವರ್ಗಾಯಿಸುವುದು ಸುಲಭವಾಗಲಿದೆ.  ಇತ್ತೀಚಿನವರೆಗೂ, ಈ ಕಾರ್ಯವು ಬೀಟಾದಲ್ಲಿ ಪ್ರತ್ಯೇಕವಾಗಿ ಲಭ್ಯವಿತ್ತು. ಆದರೆ, ಈಗ ಅದನ್ನು ಸಾರ್ವಜನಿಕಗೊಳಿಸಲಾಗಿದೆ. 

ವಾಟ್ಸಾಪ್ ಹೊಸ ವೈಶಿಷ್ಟ್ಯದ ಮೂಲಕ ನಿಮ್ಮ ಖಾತೆಯ ಮಾಹಿತಿ, ಪ್ರೊಫೈಲ್ ಫೋಟೋ, ಗುಂಪು ಚಾಟ್, ಚಾಟ್ ಇತಿಹಾಸ, ಮಾಧ್ಯಮ ಮತ್ತು ಸೆಟ್ಟಿಂಗ್‌ಗಳನ್ನು ವರ್ಗಾಯಿಸಲಾಗುತ್ತದೆ. ಇದರರ್ಥ ನಿಮ್ಮ ಯಾವುದೇ ಡೇಟಾವನ್ನು ನೀವು ಮಿಸ್ ಮಾಡಿಕೊಳ್ಳುವುದಿಲ್ಲ ಎಂದು ಇದು ಖಚಿತಪಡಿಸುತ್ತದೆ.

ಇದನ್ನೂ ಓದಿ- ಅಗ್ಗದ ಬೆಲೆಯಲ್ಲಿ ಬೊಂಬಾಟ್ ಯೋಜನೆ ಪರಿಚಯಿಸಿದ ಜಿಯೋ

ನಿಮ್ಮ ವಾಟ್ಸಾಪ್ ಡೇಟಾವನ್ನು ಐಒಎಸ್ ನಿಂದ Android ಗೆ ವರ್ಗಾಯಿಸುವುದು ಹೇಗೆ?
ವಾಟ್ಸಾಪ್ FAQ ಪ್ರಕಾರ, ನೀವು ಈ ವೈಶಿಷ್ಟ್ಯದ ಸೌಲಭ್ಯವನ್ನು ಪಡೆಯಲು ನಿಮಗೆ ಐಒಎಸ್ 15.5 ಅಥವಾ ನಂತರದ ಆವೃತ್ತಿಯಲ್ಲಿ ಚಾಲನೆಯಲ್ಲಿರುವ ಐಫೋನ್ ಮತ್ತು ಕನಿಷ್ಠ Android 5.0 ಹೊಂದಿರುವ Android ಸ್ಮಾರ್ಟ್‌ಫೋನ್ ಅಗತ್ಯವಿದೆ. ಹೆಚ್ಚುವರಿಯಾಗಿ, ನಿಮ್ಮ Android ಸಾಧನವು WhatsApp ಆವೃತ್ತಿ 2.22.7.74 ಅಥವಾ ಹೆಚ್ಚಿನದನ್ನು ಸ್ಥಾಪಿಸಿರಬೇಕು ಮತ್ತು ನಿಮ್ಮ ಐಒಎಸ್ ಸಾಧನವು  ವಾಟ್ಸಾಪ್ ಆವೃತ್ತಿ 2.22.10.70 ಅಥವಾ ಹೆಚ್ಚಿನದನ್ನು ಸ್ಥಾಪಿಸಿರಬೇಕು ಎಂಬುದನ್ನು ನೆನಪಿನಲ್ಲಿಡಿ.

ವಾಟ್ಸಾಪ್ ಡೇಟಾ ವರ್ಗಾವಣೆಗಾಗಿ ನಿಮಗೆ ಹೊಚ್ಚ ಹೊಸ ಅಥವಾ ಫ್ಯಾಕ್ಟರಿ ರೀಸೆಟ್ ಮೂಲಕ ಹೋಗಿರುವ ಐಫೋನ್, ಹಾಗೆಯೇ ಮೂವ್ ಟು ಐಒಎಸ್ ಸಾಫ್ಟ್‌ವೇರ್ ಡೌನ್‌ಲೋಡ್ ಮಾಡಲಾದ Android ಫೋನ್ ಅಗತ್ಯವಿದೆ.  ನಿಮ್ಮ ಹೊಸ ಐಒಎಸ್ ಸಾಧನದಲ್ಲಿ ನೀವು ಒಂದೇ ಫೋನ್ ಸಂಖ್ಯೆಯನ್ನು ಬಳಸಬೇಕು, ಎರಡೂ ಸಾಧನಗಳು ಒಂದೇ ವೈ-ಫೈ ನೆಟ್‌ವರ್ಕ್ ಮತ್ತು ಪವರ್ ಸೋರ್ಸ್‌ಗೆ ಸಂಪರ್ಕಗೊಂಡಿರಬೇಕು ಎಂಬುದನ್ನು ಗಮನಿಸಿ.

ಇದನ್ನೂ ಓದಿ- Amazon Prime Day 2022: ಜುಲೈ 23 ರಿಂದ ಗೃಹ ಬಳಕೆ ವಸ್ತುಗಳ ಮೇಲೆ ಆಫರ್ ಗಳ ಸುರಿಮಳೆ, ಈ ವಸ್ತುಗಳ ಮೇಲೆ ಬಂಪರ್ ಡಿಸ್ಕೌಂಟ್

ವಾಟ್ಸಾಪ್ ಡೇಟಾ ವರ್ಗಾವಣೆಗಾಗಿ ನೀವು ಸ್ವಲ್ಪ ಸಮಯ ನೀಡಿ ಮತ್ತು ಸೂಚನೆಗಳನ್ನು ಅನುಸರಿಸಿ. ನಿಮ್ಮ ಡೇಟಾವನ್ನು ವರ್ಗಾಯಿಸಲಾಗುತ್ತದೆ. ನೀವು ವರ್ಗಾಯಿಸುವ ಡೇಟಾದ ಮಾಹಿತಿಯು ಗೌಪ್ಯವಾಗಿರುತ್ತದೆ. ಡೇಟಾವನ್ನು ವರ್ಗಾಯಿಸಿದ ನಂತರ, ನಿಮ್ಮ ಹಳೆಯ ಫೋನ್‌ನಿಂದ ನೀವು ಡೇಟಾವನ್ನು ಅಳಿಸಬಹುದು. ಆದಾಗ್ಯೂ, ಈ ವೈಶಿಷ್ಟ್ಯದಲ್ಲಿ ಕೆಲವು ವಿಷಯಗಳನ್ನು ವರ್ಗಾಯಿಸಲಾಗುವುದಿಲ್ಲ. ಇವುಗಳಲ್ಲಿ ಕರೆ ಇತಿಹಾಸ ಮತ್ತು ಸಂಪರ್ಕ ಹೆಸರುಗಳು ಸಹ ಸೇರಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News