Whatsapp New Feature: ಪ್ರಪಂಚದ ಅತಿ ದೊಡ್ಡ ಮೆಸೇಜಿಂಗ್ ಪ್ಲಾಟ್ಫಾರ್ಮ್ ಆಗಿರುವ ವಾಟ್ಸಾಪ್ ಆಗಾಗ್ಗೆ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಬಳಕೆದಾರರ ಅನುಭವವನ್ನು ಹೆಚ್ಚಿಸಲು ವಾಟ್ಸಾಪ್ ಇದೀಗ ತನ್ನ ಡ್ರಾಯಿಂಗ್ ಎಡಿಟರ್ ಅನ್ನು ಸುಧಾರಿಸಬಲ್ಲ ಮೂರು ವೈಶಿಷ್ಟ್ಯಗಳ ಮೇಲೆ ಕಾರ್ಯ ನಿರ್ವಹಿಸುತ್ತಿದೆ. ಈ ವೈಶಿಷ್ಟ್ಯಗಳು ವಾಟ್ಸಾಪ್ ಚಾಟಿಂಗ್ ಶೈಲಿಯನ್ನೇ ಬದಲಾಯಿಸಲಿದ್ದು ಬಳಕೆದಾರರಿಗೆ ಹೊಸ ಅನುಭವವನ್ನು ನೀಡುತ್ತದೆ ಎಂದು ಹೇಳಲಾಗುತ್ತಿದೆ.
ವಾಟ್ಸಾಪ್ ಅಪ್ಡೇಟ್ಸ್ ಬಗ್ಗೆ ವರದಿ ಮಾಡುವ Betainfo, ವಾಟ್ಸಾಪ್ ತನ್ನ ಡ್ರಾಯಿಂಗ್ ಟೂಲ್ಗಳನ್ನು ಸುಧಾರಿಸುತ್ತಿದೆ. ವಾಟ್ಸಾಪ್ ಪ್ರಸ್ತುತ ಡ್ರಾಯಿಂಗ್ ಟೂಲ್ಗಳಲ್ಲಿ ಟೆಕ್ಸ್ಟ್ ಎಡಿಟ್ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ವೈಶಿಷ್ಟ್ಯಗಳು ವಾಟ್ಸಾಪ್ ಚಾಟಿಂಗ್ ವೈಶಿಷ್ಟ್ಯವನ್ನು ಇನ್ನೂ ಅದ್ಭುತಗೊಳಿಸಲಿವೆ ಎಂದು ಮಾಹಿತಿ ನೀಡಿದೆ.
ಇದನ್ನೂ ಓದಿ- Flipkart Electronics Sale: ಕೈಗೆಟುಕುವ ಬೆಲೆಯಲ್ಲಿ ಇಂದೇ ಖರೀದಿಸಿ 5G ಸ್ಮಾರ್ಟ್ಫೋನ್
ವಾಟ್ಸಾಪ್ನಲ್ಲಿ ಬರಲಿರುವ ಆ ಮೂರು ಬ್ಯಾಂಗಿಂಗ್ ವೈಶಿಷ್ಟ್ಯಗಳೆಂದರೆ:
ಹೊಸ ಫಾಂಟ್ನಲ್ಲಿ ಟೈಪ್ ಮಾಡಬಹುದು:
ವಾಟ್ಸಾಪ್ನಲ್ಲಿ ಬರಲಿರುವ ಮೊದಲ ಬ್ಯಾಂಗಿಂಗ್ ವೈಶಿಷ್ಟ್ಯವೆಂದರೆ ಫಾಂಟ್. ಈ ವೈಶಿಷ್ಟ್ಯವು ಬಳಕೆದಾರರಿಗೆ ವಿವಿಧ ಫಾಂಟ್ಗಳಲ್ಲಿ ಟೈಪ್ ಮಾಡಲು ಅವಕಾಶ ಕಲ್ಪಿಸಲಿದೆ. ಇದಕ್ಕಾಗಿ ಕೀಬೋರ್ಡ್ ಮೇಲೆ ಹಲವಾರು ಫಾಂಟ್ ಆಯ್ಕೆಗಳನ್ನು ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಪಠ್ಯ ಜೋಡಣೆ:
ವಾಟ್ಸಾಪ್ ತರಲಿರುವ ಎರಡನೇ ವೈಶಿಷ್ಟ್ಯವೆಂದರೆ ಪಠ್ಯ ಜೋಡಣೆ. ಈ ಪಠ್ಯ ಜೋಡಣೆ ವೈಶಿಷ್ಟ್ಯದ ಸಹಾಯದಿಂದ, ಬಳಕೆದಾರರು ಪಠ್ಯವನ್ನು ಎಡ, ಮಧ್ಯ ಅಥವಾ ಬಲಕ್ಕೆ ಜೋಡಿಸಲು ಸಾಧ್ಯವಾಗುತ್ತದೆ. ಇದಲ್ಲದೆ, ಫೋಟೋಗಳು ಮತ್ತು ವೀಡಿಯೊಗಳಲ್ಲಿ ಕೂಡ ಪಠ್ಯವನ್ನು ಫಾರ್ಮ್ಯಾಟ್ ಮಾಡಲು ಇದು ಸಹಾಯಕವಾಗಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ- ಯೂಟ್ಯೂಬ್ನಲ್ಲಿ ವೀಡಿಯೊ ಲೈಕ್ ಮಾಡಿದರೂ ಹಣ ಸಿಗುತ್ತಾ?
ಬ್ಯಾಕ್ ಗ್ರೌಂಡ್ ಬದಲಾವಣೆ:
ಮೂರನೇ ವೈಶಿಷ್ಟ್ಯವು ಬಳಕೆದಾರರಿಗೆ ಪಠ್ಯದ ಬ್ಯಾಕ್ ಗ್ರೌಂಡ್ ಅನ್ನು ಬದಲಾಯಿಸಲು ಅನುಮತಿಸುತ್ತದೆ ಎನ್ನಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.