ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಮುಖರ್ಜಿ ನಗರವು ಐಎಎಸ್ ಅಧಿಕಾರಿಗಳನ್ನು ಸಿದ್ಧಪಡಿಸುವ ಪ್ರದೇಶವಾಗಿದೆ. UPSC, SSC ಅಥವಾ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಹೆಚ್ಚಿನ ಜನರು ಇಲ್ಲಿ ವಾಸಿಸುತ್ತಿದ್ದಾರೆ. ಮುಖರ್ಜಿ ನಗರವು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಪ್ರಮುಖ ಕೇಂದ್ರವಾಗಿದೆ. ಈ ಮುಖರ್ಜಿ ನಗರದ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಆಕಾಂಕ್ಷಿಯೊಬ್ಬರು ತಾನು 11 ವರ್ಷಗಳಿಂದ ತಯಾರಿ ನಡೆಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಈ 11 ವರ್ಷಗಳಲ್ಲಿ ನಾನು 5 ಬಾರಿ UPSC ಪರೀಕ್ಷೆಯಲ್ಲಿ ಫೇಲ್ ಆಗಿದ್ದೇನೆಂದು ನೋವು ತೋಡಿಕೊಂಡಿದ್ದಾರೆ.
ಅಧಿಕಾರಿಯಾದ ಯುವಕನ ಗೆಳತಿ
UPSC ಪರೀಕ್ಷೆ ತಯಾರಿಯ ತನ್ನ ಅನುಭವ ಹಂಚಿಕೊಂಡಿರುವ ವ್ಯಕ್ತಿ, ತನ್ನ ಗೆಳತಿ ಈಗ ಅಧಿಕಾರಿಯಾಗಿದ್ದಾಳೆ ಎಂದು ಹೇಳಿದ್ದಾನೆ. ಅವರ ಈ ವಿಡಿಯೋವನ್ನು ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಯುಪಿಎಸ್‌ಸಿ ಆಕಾಂಕ್ಷಿ ಬಿಹಾರದ ಗೋಪಾಲಗಂಜ್ ನಿವಾಸಿ ಹರೇಂದ್ರ ಪಾಂಡೆ ಎಂಬುವುರೊಂದಿಗೆ ಯೂಟ್ಯೂಬರ್ ಮಾತನಾಡಿದ್ದಾರೆ. ಯಶಸ್ವಿಯಾದ ನಂತರ ಜಗತ್ತು ಬದಲಾಗುತ್ತದೆ ಎಂದು ಹರೇಂದ್ರ ಹೇಳಿಕೊಂಡಿದ್ದಾರೆ. ಏಕೆಂದರೆ ಈ ಜಗತ್ತು ಸೋಲನ್ನು ಎಂದಿಗೂ ಸ್ವೀಕರಿಸುವುದಿಲ್ಲ, ಜನರು ಬರೀ ಯಶಸ್ಸನ್ನಷ್ಟೇ ಪರಿಗಣಿಸುತ್ತಾರೆ ಅಂತಾ ಹರೇಂದ್ರ ತಮ್ಮ ಪ್ರೇಮ ಜೀವನ, ಬದುಕಿನ ಏರಿಳಿತ, ವೈಫಲ್ಯದ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ: Viral News: ಹೆಂಡತಿಯ ತೂಕ ಹೆಚ್ಚಾಗಿದ್ದಕ್ಕೆ ಕೋಪಗೊಂಡು ವಿಚ್ಛೇದನ ನೀಡಿದ ಪತಿ!
ಮುಖರ್ಜಿ ನಗರದಲ್ಲಿ ವಾಸಿಸುವ ಅನೇಕ ಆಕಾಂಕ್ಷಿಗಳು ಹೊಸ ಜೀವನ ಕಲಿಯುತ್ತಾರೆ. ಅದೇ ರೀತಿ ಹರೇಂದ್ರ ಕಳೆದ 11 ವರ್ಷಗಳಿಂದ ಯುಪಿಎಸ್‍ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ. 5 ಬಾರಿ ಪರೀಕ್ಷೆ ಎದುರಿಸಿದರೂ ಫಲ ಸಿಕ್ಕಿಲ್ಲ. 4 ಬಾರಿ ಅವರ ಉತ್ತಮ ಪ್ರಯತ್ನ ಮಾಡಿದ್ದರು. ಆದರೆ ಅದೃಷ್ಟ ಅವರ ಕೈ ಹಿಡಿದಿಲ್ಲ. ಇವರ ಜೊತೆಗೆ ಪರೀಕ್ಷೆಗೆ ಸಿದ್ಧತೆ ನಡೆಸಿದ್ದ ಅನೇಕರು ಇಂದು ಐಎಎಸ್, ಐಪಿಎಸ್ ಸೇರಿದಂತೆ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಿದ್ದರೆ. ಈ ಪೈಕಿ ಹಲವರು ಟಾಪರ್ ಕೂಡ ಆಗಿದ್ದಾರೆ. ಬಿಹಾರದಲ್ಲಿ ತಮ್ಮ ಶಾಲಾ ಶಿಕ್ಷಣದ ಪೂರೈಸಿರುವ ಹರೇಂದ್ರ ಉನ್ನತ ದರ್ಜೆಯ ವಿದ್ಯಾರ್ಥಿಯಾಗಿದ್ದರಂತೆ.
'ನನ್ನ ಪ್ರಯತ್ನ ಮುಂದುವರೆಸಿದ್ದೇನೆ’
ಯುಪಿಎಸ್‍ಸಿ ಪರೀಕ್ಷೆಗೆ ತಯಾರಿ ನಡೆಸುವ ಉದ್ದೇಶದಿಂದ 2011ರಲ್ಲಿ ಹರೇಂದ್ರ ದೆಹಲಿಗೆ ಬಂದಿದ್ದರು. ಪ್ರಾಥಮಿಕ ಮತ್ತು ಮುಖ್ಯ ಪರೀಕ್ಷೆಯ ಸುತ್ತಿನಲ್ಲಿಯೂ ಅವರು ಸಾಕಷ್ಟು ಬದಲಾವಣೆ ಕಂಡಿದ್ದಾರೆ. ಹರೇಂದ್ರ ತಮ್ಮ ತಯಾರಿಯ ಸಮಯದಲ್ಲಿ ಮಾಡಿದ ತಪ್ಪನ್ನು ಸಹ ಹೇಳಿಕೊಂಡಿದ್ದಾರೆ. ‘UPSC ಪರೀಕ್ಷೆಯ ಬಗ್ಗೆಯೇ ಅನೇಕರಿಗೆ ಸ್ಪಷ್ಟತೆ ಇಲ್ಲ. ನೀವು ಏನು ಮಾಡುತ್ತಿದ್ದೀರಾ ಅನ್ನೋ ಸಾಮಾನ್ಯ ಪ್ರಶ್ನೆಗೆ ಅನೇಕರು ನಾನು ಯುಪಿಎಸ್‍ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದೇನೆ ಅಂತಾ ಉತ್ತರಿಸುತ್ತಾರೆ. ಆದರೆ UPSCಯಲ್ಲಿ IAS 1 ಶ್ರೇಣಿಯ ಸೇವೆಯಾಗಿದೆ. ಇದನ್ನು ಹೊರತುಪಡಿಸಿ 26 ವಿವಿಧ ರೀತಿಯ ಸೇವೆಗಳಿವೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನಗೆ ಆರಂಭದಲ್ಲಿ ಈ ಬಗ್ಗೆ ಅರಿವಿರಲಿಲ್ಲ, ಮಾರ್ಗದರ್ಶಕರೂ ಇರಲಿಲ್ಲ. ಜೀವನದಲ್ಲಿ ಸೋಲು ಕಾಣುವ ವ್ಯಕ್ತಿಯಿಂದ ಜನರು ಅಂತರ ಕಾಯ್ದುಕೊಳ್ಳುತ್ತಾರೆ. ಇದೇ ರೀತಿ ನನ್ನ ಜೀವನದಲ್ಲಿಯೂ ಆಗಿದೆ. ನಾನು ನನ್ನ ಪ್ರಯತ್ನವನ್ನು ಮುಂದುವರೆಸಿದ್ದೇನೆ’ ಅಂತಾ ಹೇಳಿದ್ದಾರೆ.
ಇದನ್ನೂ ಓದಿ: Central Vista : ಸೆಂಟ್ರಲ್ ವಿಸ್ತಾ ಯೋಜನೆಯ ಬಗ್ಗೆ ಬಿಗ್ ನ್ಯೂಸ್ ನೀಡಿದ PMO ಕಚೇರಿ
ಅಧಿಕಾರಿಯಾದ ಬಳಿಕ ಗುಡ್ ಬೈ ಹೇಳಿದ ಗೆಳತಿ
ತಮ್ಮ ಪ್ರೇಮ ಜೀವನದ ಬಗ್ಗೆ ಮಾತನಾಡಿದ ಹರೇಂದ್ರ, ‘ನಾನು ಒಬ್ಬ ಯುವತಿಯನ್ನು ಪ್ರೀತಿಸುತ್ತಿದ್ದೆ. ನನ್ನ ಹೃದಯ ಆಕೆಗೋಸ್ಕರ ಮಿಡಿಯುತ್ತಿತ್ತು. ಆಕೆ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಅಧಿಕಾರಿಯಾಗಿದ್ದಾಳೆ. ಅಧಿಕಾರಿಯಾದ ಬಳಿಕ ಆಕೆ ನನ್ನ ಸಂಪರ್ಕಕ್ಕೆ ಸಿಗಲೇ ಇಲ್ಲ’ ಅಂತಾ ನೋವಿನಿಂದ ಹೇಳಿಕೊಂಡಿದ್ದಾರೆ. ಹರೇಂದ್ರ ಅವರ ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅನೇಕರು ಅವರಿಗೆ ಧೈರ್ಯ ತುಂಬುತ್ತಿದ್ದು, ಪ್ರಯತ್ನ ಮುಂದುವರೆಸಿ ಯಶಸ್ವಿಯಾಗಿ ಎಂದು ಹಾರೈಸುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.