Snake Viral Video: ಹಾವುಗಳ ಭಯವು ಜಗತ್ತಿನಾದ್ಯಂತ ಸಾಮಾನ್ಯ ಫೋಬಿಯಾಗಳಲ್ಲಿ ಒಂದಾಗಿದೆ. ಹಾವು ಕಾಣಿಸಿಕೊಂಡರೆ ಸಾಕು ಬಹುತೇಕರು ಎದ್ದುಬಿದ್ದು ಓಡಿಹೋಗುತ್ತಾರೆ. ಚೀನಾದಿಂದ ವಿಯೆಟ್ನಾಂವರೆಗೆ ಅನೇಕ ದೇಶಗಳಲ್ಲಿ ವಿಷಕಾರಿ ಹಾವುಗಳನ್ನೇ ಆಹಾರವನ್ನಾಗಿ ಸೇವಿಸಲಾಗುತ್ತದೆ. ಅದರಂತೆ ಸೋಷಿಯಲ್ ಮೀಡಿಯಾದಲ್ಲಿ ಯುವತಿಯೊಬ್ಬಳು ಜೀವಂತ ಹಾವೊಂದನ್ನು ಸೇವಿಸುತ್ತಿರುವ ವಿಡಿಯೋ ಸಖತ್ ಸೌಂಡ್ ಮಾಡುತ್ತಿದೆ.
ಈ ವೈರಲ್ ಆಗಿರುವ ವಿಡಿಯೋದಲ್ಲಿ ಯುವತಿಯೊಬ್ಬಳು ಜೀವಂತ ಹಾವನ್ನೇ ಜಗಿದು ತಿನ್ನುತ್ತಿರುವ ದೃಶ್ಯವನ್ನು ನೀವು ಕಾಣಬಹುದು. ಈ ವಿಡಿಯೋವನ್ನು asmrmukbangworld ಎಂಬ Instagram ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಕ್ಲಿಪ್ನಲ್ಲಿ ಯುವತಿಯ ಮುಂದೆ ಹಲವಾರು ಹಾವುಗಳಿರುವುದನ್ನು ಕಾಣಬಹುದು. ಹಾವಿನ ಜೊತೆಗೆ ಹಸಿರು ತರಕಾರಿಗಳು ಇವೆ. ಯುವತಿ ಒಂದು ಹಾವನ್ನು ತನ್ನ ಕೈಗೆ ತೆಗೆದುಕೊಂಡು ಅದನ್ನು ಹಸಿ ಹಸಿಯಾಗಿಯೇ ತಿನ್ನಲು ಪ್ರಾರಂಭಿಸುತ್ತಾಳೆ.
ಇದನ್ನೂ ಓದಿ: ನೈಜೀರಿಯಾ: ಇಂಧನ ಟ್ಯಾಂಕರ್ ಸ್ಫೋಟಗೊಂಡು ಸುಮಾರು 94 ಜನರ ಸಾವು
ಹಾವಿನ ಮಾಂಸವನ್ನು ಆರಾಮವಾಗಿ ತಿಂದ ಯುವತಿ ಅದರ ರುಚಿಯನ್ನು ಸವಿಸುತ್ತಿರುವುದನ್ನು ನೀವು ಕಾಣಬಹುದು. ದಕ್ಷಿಣ ಕೊರಿಯಾದಲ್ಲಿ ಮುಕ್ಬಾಂಗ್(Mukbang) ಹೆಸರಿನ ವಿಚಿತ್ರ ಆಹಾರದ ಬಗ್ಗೆ ಟಿವಿ ಕಾರ್ಯಕ್ರಮವಿದೆ. ಇದು ಅತ್ಯಂತ ಜನಪ್ರಿಯ ಕಾರ್ಯಕ್ರಮವಾಗಿದ್ದು, ಈ ವಿಡಿಯೋ ಬಹುಶಃ ಅದೇ ಕಾರ್ಯಕ್ರಮದ ಭಾಗವಾಗಿದೆ ಎಂದು ಹೇಳಲಾಗಿದೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ ತಕ್ಷಣ ವೈರಲ್ ಆಗಿದೆ.
ಈ ಕ್ಲಿಪ್ಅನ್ನು 'Snakee' ಶೀರ್ಷಿಕೆ ಮತ್ತು ಹಾವಿನ ಎಮೋಜಿಯೊಂದಿಗೆ ಹಂಚಿಕೊಳ್ಳಲಾಗಿದೆ. ಇಲ್ಲಿಯವರೆಗೆ ಈ ವಿಡಿಯೋವನ್ನು Instagramನಲ್ಲಿ 16 ಮಿಲಿಯನ್ಗೂ ಹೆಚ್ಚು ವೀಕ್ಷಿಸಲಾಗಿದೆ. ಒಂದು ಲಕ್ಷಕ್ಕೂ ಹೆಚ್ಚು ಜನರು ಇದನ್ನು ಲೈಕ್ ಮಾಡಿದ್ದಾರೆ, ಏಳು ಸಾವಿರಕ್ಕೂ ಹೆಚ್ಚು ಜನರು ಈ ವಿಡಿಯೋ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ೧೩ ಸಾವಿರಕ್ಕೂ ಹೆಚ್ಚು ಕಾಮೆಂಟ್ಗಳು ಬಂದಿವೆ. ಹುಡುಗಿಯೊಬ್ಬಳು ಹಾವು ತಿಂದಿರುವ ಈ ವಿಡಿಯೋವನ್ನು ಹೆಚ್ಚಿನವರು ಟೀಕಿಸಿದ್ದಾರೆ. ಇಂಥವರಿಂದಾಗಿಯೇ ಜಗತ್ತಿನಲ್ಲಿ ಹೊಸ ಹೊಸ ವೈರಸ್ಗಳು ಬರುತ್ತಿವೆ ಎಂದು ಕೆಲವರು ಕಿಡಿಕಾರಿದೆ, ಈ ವಿಡಿಯೋ ನೋಡಿದ್ರೆ ನನಗೆ ವಾಂತಿ ಬರುತ್ತದೆ ಅಂತಾ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಈ ಚಿತ್ರದಲ್ಲಿ ಅಡಿಗರುವ ಐಸ್ಕ್ರೀಮ್ ಅನ್ನು 12 ಸೆಕೆಂಡುಗಳಲ್ಲಿ ಕಂಡುಹಿಡಿಯಬಹುದೇ? ಮೆದುಳು ಇದ್ದವರಿಗೆ ಮಾತ್ರ ಸಾಧ್ಯ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.