Viral Video of monitor lizards : ಎರಡು ಉಡಗಳು ಸಮುದ್ರತೀರದಲ್ಲಿ ಎರಡು ಕಾಲುಗಳ ಮೇಲೆ ನಿಂತು ಪರಸ್ಪರ ತಬ್ಬಿಕೊಳ್ಳುತ್ತಿರುವ ವಿಡಿಯೋ ಸಖತ್ ವೈರಲ್ ಆಗಿದೆ. ದಡದಲ್ಲಿ ಮಿನುಗುವ ಅಲೆಗಳ ನಡುವೆ ಮುದ್ದಾದ ಕ್ಷಣವನ್ನು ಸೆರೆಹಿಡಿಯಲಾಗಿದೆ. ತೇರೆ ಮೇರೆ ಬೀಚ್ ಮೇ ಕೈಸಾ ಹೈ ಯೇ ಬಂಧನ್... ಎಂಬ ಭಾವದಲ್ಲಿ ಈ ಎರಡು ಉಡಗಳು ತಬ್ಬಿಕೊಂಡಿವೆ. ಭಾವನೆಗಳು ನಮ್ಮ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಮನುಷ್ಯರು ಸಾಮಾನ್ಯವಾಗಿ ತಮ್ಮ ಭಾವನೆಗಳನ್ನು ಒಬ್ಬರಿಗೊಬ್ಬರು ಹೇಳುವುದರ ಮೂಲಕ ವ್ಯಕ್ತಪಡಿಸುತ್ತಾರೆ ಆದರೆ ಪ್ರಾಣಿಗಳು ತಮ್ಮ ಭಾವನೆಯನ್ನು ಹೇಗೆ ವ್ಯಕ್ತಪಡಿಸುತ್ತವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಪ್ರಾಣಿಗಳು ತಮ್ಮ ಅಭಿನಯದ ಮೂಲಕ ಭಾವನೆಯನ್ನ ಹಂಚಿಕೊಳ್ಳುತ್ತವೆ.
ಇದನ್ನೂ ಓದಿ: Viral Video: ಮಡಿಲಲ್ಲಿ ಮಗು ಹೊತ್ತು ಫುಡ್ ತಲುಪಿಸುವ Zomato ಡೆಲಿವರಿ ಏಜೆಂಟ್
ಭಾರತೀಯ ಅರಣ್ಯ ಸೇವೆಯ (ಐಎಫ್‌ಎಸ್) ಅಧಿಕಾರಿ ಸುಸಂತ ನಂದಾ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅಲ್ಲಿ ಎರಡು ಉಡಗಳು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದನ್ನು ಕಾಣಬಹುದು. ಟ್ವಿಟರ್‌ನಲ್ಲಿ, ಐಎಫ್‌ಎಸ್ ಅಧಿಕಾರಿ ನಂದಾ ಪ್ರಾಣಿಗಳು ತಮ್ಮ ಭಾವನೆಗಳನ್ನು ಹಂಚಿಕೊಳ್ಳುವ ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ, ಎರಡು ಉಡಗಳು ಎರಡು ಕಾಲುಗಳ ಮೇಲೆ ನಿಂತಿರುವಂತೆ ಮತ್ತು ಸಮುದ್ರತೀರದಲ್ಲಿ ಪರಸ್ಪರ ತಬ್ಬಿಕೊಳ್ಳುತ್ತಿರುವುದನ್ನು ಕಾಣಬಹುದು. ದಡದಲ್ಲಿ ಸಮುದ್ರದ ಅಲೆಗಳ ನಡುವೆ ಮುದ್ದಾದ ಕ್ಷಣವನ್ನು ಸೆರೆಹಿಡಿಯಲಾಗಿದೆ.
Tere Mere Beech Mein Kaisa Hai Yeh Bandhan…
Animals have emotions. They deserve our respect & empathy 💕 pic.twitter.com/rXV2vJZn1g
— Susanta Nanda IFS (@susantananda3) August 3, 2022
“ತೇರೆ ಮೇರೆ ಬೀಚ್ ಮೇ ಕೈಸಾ ಹೈ ಯೇ ಬಂಧನ್... ಪ್ರಾಣಿಗಳಿಗೆ ಭಾವನೆಗಳಿರುತ್ತವೆ. ಅವರು ನಮ್ಮ ಗೌರವ ಮತ್ತು ಸಹಾನುಭೂತಿಗೆ ಅರ್ಹರು”ಎಂದು ಪೋಸ್ಟ್‌ಗೆ ಶೀರ್ಷಿಕೆ ನೀಡಲಾಗಿದೆ. ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ, ಈ ವಿಡಿಯೋ ಸುಮಾರು 10,000 ವೀಕ್ಷಣೆಗಳನ್ನು ಮತ್ತು 600 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿವೆ. ಒಬ್ಬ ಬಳಕೆದಾರರು ಇದೊಂದು ಅದ್ಭುತ ಎಂದು ಕರೆದರೆ ಮತ್ತೊಬ್ಬರು 'ವಾವ್' ಎಂದು ಹೇಳಿದರು. ಉಡಗಳು ಭಾವನೆಗಳನ್ನು ವ್ಯಕ್ತಪಡಿಸುತ್ತಿಲ್ಲ ಆದರೆ ತಮ್ಮ ಪ್ರದೇಶಕ್ಕಾಗಿ ಹೋರಾಟಕ್ಕೆ ಸಿದ್ಧವಾಗುತ್ತಿವೆ ಎಂದು ಕೆಲವರು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: Viral Video: ಮಂಗನಿಗೆ ಶರೇ ಕುಡಿಸಿದ್ರೆ ಏನಾಗಬಹುದು? ಎಣ್ಣೆ ಹೊಡಿದ ಕೋತಿ ಮಾಡಿದ ಕಿತಾಪತಿ ನೀವೇ ನೋಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.