ನವದೆಹಲಿ: ಉದ್ಯಮಿ ಆನಂದ್ ಮಹೀಂದ್ರಾ ತಮ್ಮ ಟ್ವಿಟರ್‌ನಲ್ಲಿ ಆಗಾಗ ಹಂಚಿಕೊಳ್ಳುವ ಪೋಸ್ಟ್ ಹಾಗೂ ವಿಡಿಯೋಗಳ ಮೂಲಕ ಗಮನ ಸೆಳೆಯುತ್ತಾರೆ.ಈಗ ಅವರು ಹಂಚಿಕೊಂಡಿರುವ ವಿಡಿಯೋ ಸಾಕಷ್ಟು ಸದ್ದು ಮಾಡುತ್ತಿದೆ.
ಈ ವಿಡಿಯೋ ಕ್ಲಿಪ್‌ನಲ್ಲಿ ಗ್ರಾಮೀಣ ಪ್ರದೇಶದ ಯುವಕನೊಬ್ಬ ಮಲ್ಟಿ ರೈಡರ್ ಸೈಕಲ್ ಇ-ರಿಕ್ಷಾ ತೋರಿಸುತ್ತಿರುವುದನ್ನು ಕಾಣಬಹುದಾಗಿದೆ. ಈ ಆರು ಆಸನಗಳ ವಾಹನವು ವಿದ್ಯುತ್‌ನಲ್ಲಿ ಚಲಿಸುತ್ತದೆ ಮತ್ತು ಒಂದೇ ಚಾರ್ಜ್‌ನಲ್ಲಿ ಅದು 150 ಕಿಮೀ ವರೆಗೆ ಚಲಿಸುತ್ತದೆ ಎಂದು ವೀಡಿಯೊದಲ್ಲಿರುವ ವ್ಯಕ್ತಿ ಹೇಳಿದ್ದಾರೆ. ಈ ವಾಹನವನ್ನು ನಿರ್ಮಿಸಲು ಬಳಸಲಾದ ಮೊತ್ತ 10,000 ರಿಂದ 12,000 ರೂ. ಕೇವಲ 10 ರೂ.ಗೆ ವಾಹನವನ್ನು ಚಾರ್ಜ್ ಮಾಡಬಹುದು ಎಂದು ಅವರು ಹೇಳುತ್ತಾರೆ.
With just small design inputs, (cylindrical sections for the chassis @BosePratap ?) this device could find global application. As a tour ‘bus’ in crowded European tourist centres? I’m always impressed by rural transport innovations, where necessity is the mother of invention. pic.twitter.com/yoibxXa8mx
— anand mahindra (@anandmahindra) December 1, 2022
ಈಗ ಈ ವಿಡಿಯೋವನ್ನು ಅವರು ಹಂಚಿಕೊಂಡು “ಕೇವಲ ಸಣ್ಣ ವಿನ್ಯಾಸದ ಒಳಹರಿವುಗಳೊಂದಿಗೆ ಈ ಸಾಧನವು ಜಾಗತಿಕ ಅಪ್ಲಿಕೇಶನ್ ಅನ್ನು ಕಂಡುಹಿಡಿಯಬಹುದು. ಕಿಕ್ಕಿರಿದ ಯುರೋಪಿಯನ್ ಪ್ರವಾಸಿ ಕೇಂದ್ರಗಳಲ್ಲಿ ಪ್ರವಾಸ 'ಬಸ್' ಆಗಿ ಚಾಲನೆ ನೀಡಬಹುದು ? ಗ್ರಾಮೀಣ ಸಾರಿಗೆ ನಾವೀ ನ್ಯತೆಗಳಿಂದ ನಾನು ಯಾವಾಗಲೂ ಪ್ರಭಾವಿತನಾಗಿದ್ದೇನೆ, ಅದು ಅವಶ್ಯಕತೆಯ ಆವಿಷ್ಕಾರದ ತಾಯಿ ಎಂದು ಅವರು ಬರೆದುಕೊಂಡಿದ್ದಾರೆ. ಈ ವಿಡಿಯೋ ಸುಮಾರು 781k ವೀಕ್ಷಣೆಗಳೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.