ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬುಲ್ನಲ್ಲಿ ಸೋಮವಾರ ಬೆಳಿಗ್ಗೆ ನಡೆದ ಅವಳಿ ಬಾಬ್ ಸ್ಪೋಟ ಸಂಭವಿಸಿದ್ದು, ಈ ಘಟನೆಯಲ್ಲಿ 25 ಮಂದಿ ಮೃತಪಟ್ಟಿದ್ದು, 45 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೊದಲ ಸ್ಪೋಟ ಸಂಭವಿಸಿದ 20 ನಿಮಿಷಗಳ ನಂತರ ನಡೆದ ಎರಡನೇ ಸ್ಫೋಟದಲ್ಲಿ ಅತಿ ಹೆಚ್ಚು ಜನ ಸಾವನ್ನಪ್ಪಿದ್ದು, ಇವರಲ್ಲಿ 6 ಮಂದಿ ಪತ್ರಕರ್ತರೂ ಸೇರಿದ್ದಾರೆ ಎನ್ನಲಾಗಿದೆ.
ಅಫ್ಘಾನಿಸ್ತಾನದ ಪ್ರಾಥಮಿಕ ಗುಪ್ತಚರ ಸಂಸ್ಥೆ ರಾಷ್ಟ್ರೀಯ ಭದ್ರತಾ ನಿರ್ದೇಶನಾಲಯ (ಎನ್ಡಿಎಸ್) ನ ಪ್ರಧಾನ ಕಚೇರಿ ಸಮೀಪದಲ್ಲಿರುವ ಕಾಬೂಲ್ ಷಶದರಕ್ ಪ್ರದೇಶದಲ್ಲಿ ಮೊದಲ ಸ್ಫೋಟ ಸಂಭವಿಸಿದೆ. ನಂತರ ತುರ್ತು ಸೇವೆಗಾಗಿ ಆಗಮಿಸಿದ್ದ ಆಸ್ಪತ್ರೆ ಸಿಬ್ಬಂದಿ ಹಾಗೂ ಪತ್ರಕರ್ತರನ್ನು ಗುರಿಯಾಗಿರಿಸಿಕೊಂಡು ಎರಡನೇ ಆತ್ಮಾಹುತಿ ದಾಳಿ ನಡೆದಿದೆ.
ಇದರಲ್ಲಿ ಎಪಿಎಫ್ ಸುದ್ದಿ ಸಂಸ್ಥೆಯ ಮುಖ್ಯ ಛಾಯಾಚಿತ್ರಗಾರ ಷಾ ಮರಾಯಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.