Howdy Modi: 'ಭಾರತ-ಅಮೆರಿಕದ ಸಂಬಂಧ ಮೊದಲಿಗಿಂತಲೂ ಬಲವಾಗಿದೆ' ಎಂದ ಟ್ರಂಪ್

"ಅಮೆರಿಕ ಮತ್ತು ಭಾರತದ ನಡುವಿನ ಸಂಬಂಧ ಮೊದಲಿಗಿಂತ ಬಲವಾಗಿದೆ. ನಮ್ಮ ಸಂಬಂಧಗಳು ನಮ್ಮ ಸಾಮಾನ್ಯ ಮೌಲ್ಯಗಳನ್ನು ಆಧರಿಸಿವೆ" ಎಂದು ಡೊನಾಲ್ಡ್ ಟ್ರಂಪ್ ಹೇಳಿದರು.  

Last Updated : Sep 23, 2019, 09:41 AM IST
Howdy Modi: 'ಭಾರತ-ಅಮೆರಿಕದ ಸಂಬಂಧ ಮೊದಲಿಗಿಂತಲೂ ಬಲವಾಗಿದೆ' ಎಂದ ಟ್ರಂಪ್   title=
Pic courtesy@Scavino45

ಹ್ಯೂಸ್ಟನ್: 'ಹೌಡಿ ಮೋದಿ' ಕಾರ್ಯಕ್ರಮದಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದರು. ಭಾರತ ಮತ್ತು ಅಮೆರಿಕದ ಸಂವಿಧಾನಗಳು we the people ಎಂಬ ಮೂರು ಪದಗಳಿಂದ ಪ್ರಾರಂಭವಾಗುತ್ತವೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಚ್ಚರಿಸಿದರು.

"ಅಮೆರಿಕ ಮತ್ತು ಭಾರತದ ನಡುವಿನ ಸಂಬಂಧ ಹಿಂದೆಂದಿಗಿಂತಲೂ ಪ್ರಬಲವಾಗಿದೆ. ನಮ್ಮ ಸಂಬಂಧಗಳು ನಮ್ಮ ಸಾಮಾನ್ಯ ಮೌಲ್ಯಗಳನ್ನು ಆಧರಿಸಿವೆ. ನಾವು ಸ್ವತಂತ್ರ ದೇಶಗಳು. ನಮ್ಮ ರಾಷ್ಟ್ರದ ಸ್ವಾತಂತ್ರ್ಯವನ್ನು ನಾವು ತುಂಬಾ ಪ್ರಿಯವೆಂದು ಪರಿಗಣಿಸುತ್ತೇವೆ" ಎಂದು ಟ್ರಂಪ್ ಹೇಳಿದರು.

"ನಾವು ಸ್ವಾತಂತ್ರ್ಯವನ್ನು ಬಹಳ ಇಷ್ಟಪಡುತ್ತೇವೆ. ನಮ್ಮ ರಾಷ್ಟ್ರೀಯ ಸಂವಿಧಾನವು ಒಂದೇ ಪದಗಳಿಂದ ಪ್ರಾರಂಭವಾಗುತ್ತಿದೆ, ನಮ್ಮಿಬ್ಬರ ಸಂವಿಧಾನವು ಒಂದನ್ನೇ ತಿಳಿಸುತ್ತವೆ. ಉಭಯ ದೇಶಗಳ ಸಂವಿಧಾನದ ಮೊದಲ ಮೂರು ಪದಗಳು ಒಂದೇ" ಎಂದು ಯು.ಎಸ್. ಅಧ್ಯಕ್ಷರು ಬಣ್ಣಿಸಿದರು.

ಅಮೆರಿಕ ಮತ್ತು ಭಾರತ 'ಬಲವಾದ ರಕ್ಷಣಾ ಪಾಲುದಾರಿಕೆ' ಸ್ಥಾಪಿಸುತ್ತಿದ್ದು, ಶೀಘ್ರದಲ್ಲೇ ಹೊಸ ರಕ್ಷಣಾ ಒಪ್ಪಂದಗಳನ್ನು ಅಂತಿಮಗೊಳಿಸಲು ಉಭಯ ದೇಶಗಳು ಸಿದ್ಧರಾಗಿದ್ದಾರೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಎನ್‌ಆರ್‌ಜಿ ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ 50,000ಕ್ಕೂ ಅಧಿಕ ಭಾರತೀಯ-ಅಮೆರಿಕನ್ನರ ಸಮ್ಮುಖದಲ್ಲಿ, ಅಧ್ಯಕ್ಷ ಟ್ರಂಪ್, "ಭಾರತದಲ್ಲಿ ಯುಎಸ್ ರಕ್ಷಣಾ ಮಾರಾಟವು ಕಳೆದ ದಶಕದಲ್ಲಿ 18 ಬಿಲಿಯನ್ ತಲುಪಿದೆ" ಎಂದು ತಿಳಿಸಿದರು.  'ನಾವು ಶೀಘ್ರದಲ್ಲೇ ಅನೇಕ ಹೊಸ ರಕ್ಷಣಾ ಒಪ್ಪಂದಗಳನ್ನು ಪೂರ್ಣಗೊಳಿಸಲು ಬಯಸುತ್ತೇವೆ. ಈ ಸಂಬಂಧ ಹಲವು ಕೆಲಸಗಳು ನಡೆಯುತ್ತಿವೆ' ಎಂದು ಟ್ರಂಪ್ ತಿಳಿಸಿದರು.

"ನಾವು ಅಮೆರಿಕದ ಬಾಹ್ಯಾಕಾಶ ಪಡೆಯನ್ನು ನಿರ್ಮಿಸುತ್ತಿದ್ದೇವೆ ಮತ್ತು ಬಾಹ್ಯಾಕಾಶ ಸಹಕಾರದಲ್ಲಿ ಕೈಜೋಡಿಸಲು ಭಾರತದೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ". ನವೆಂಬರ್ನಲ್ಲಿ, ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ನಮ್ಮ ರಕ್ಷಣಾ ಒಪ್ಪಂದದ ಪ್ರಗತಿಯನ್ನು ಪ್ರದರ್ಶಿಸಲಿದ್ದು, ಅದರ ಅಡಿಯಲ್ಲಿ ಮಿಲಿಟರಿ ವ್ಯಾಯಾಮ 'ಟೈಗರ್ ಟ್ರಯಂಫ್' ನಡೆಯಲಿದೆ. 'ತಮ್ಮ ರಾಷ್ಟ್ರಗಳನ್ನು ಎಂದಿಗಿಂತಲೂ ಶ್ರೀಮಂತವಾಗಿಸಲು' ಉಭಯ ದೇಶಗಳು ಪ್ರಯತ್ನಿಸುತ್ತಿವೆ. ಇದು ಒಳ್ಳೆಯ ಬೆಳವಣಿಗೆ ಎಂದು ಟ್ರಂಪ್ ಹರ್ಷ ವ್ಯಕ್ತಪಡಿಸಿದರು.

Trending News