ಅಮೆರಿಕ ನೇತೃತ್ವದ ಕಮಾಂಡೋ ದಾಳಿಯಲ್ಲಿ ಅಬೂಬಕರ್ ಅಲ್-ಬಾಗ್ದಾದಿ ಸಾವಿನ ನಂತರ ಐಸಿಸ್ ಹೊಸ ನಾಯಕ ಯಾರೆಂದು ಅಮೆರಿಕಕ್ಕೆ ತಿಳಿದಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದಾರೆ.
"ಅಮೆರಿಕಾದಾದ್ಯಂತ ದೀಪಾವಳಿಯನ್ನು ಆಚರಿಸುವುದು ನಮ್ಮ ರಾಷ್ಟ್ರದ ಪ್ರಮುಖ ಸಿದ್ಧಾಂತಗಳಲ್ಲಿ ಒಂದಾದ ಧಾರ್ಮಿಕ ಸ್ವಾತಂತ್ರ್ಯದ ಮಹತ್ವವನ್ನು ನೆನಪಿಸುತ್ತದೆ" ಎಂದು ಡೊನಾಲ್ಡ್ ಟ್ರಂಪ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮೋದಿಯನ್ನು ರಾಷ್ಟ್ರದ ಪಿತಾಮಹ ಎಂದು ಕರೆದಿರುವ ಟ್ರಂಪ್ ಅವರನ್ನು 'ಅನಕ್ಷರಸ್ಥ' ಎಂದಿದ್ದು, ಅವರಿಗೆ ಭಾರತದ ಇತಿಹಾಸದ ಬಗ್ಗೆ ಅರಿವಿಲ್ಲ. ಮಹಾತ್ಮ ಗಾಂಧಿ ಬಗ್ಗೆ ಟ್ರಂಪ್ ಗೆ ಏನೂ ತಿಳಿದಿಲ್ಲ ಎಂದು ಒವೈಸಿ ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಡಿ ಹೊಗಳಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೋದಿ ಅವರು ಭಾರತವನ್ನು ಒಗ್ಗೂಡಿಸಿದ್ದಾರೆ. ನಾವು ಅವರನ್ನು 'ಭಾರತದ ಪಿತಾಮಹ' ಎಂದು ಕರೆಯುತ್ತೇವೆ ಎಂದು ಹೇಳಿದ್ದಾರೆ.
ವಾಸ್ತವವಾಗಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪಾಕಿಸ್ತಾನಿ ಪ್ರಧಾನಿ ಇಮ್ರಾನ್ ಖಾನ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಈ ಸಮಯದಲ್ಲಿ, ಪತ್ರಕರ್ತರು ಉಭಯ ದೇಶಗಳ ನಾಯಕರಿಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು.
Howdy Modi: 'ಹೌಡಿ ಮೋದಿ' ಕಾರ್ಯಕ್ರಮದ ಬಗ್ಗೆ ಪ್ರಪಂಚದಾದ್ಯಂತ ಚರ್ಚಿಸಲಾಗುತ್ತಿದೆ. ಏತನ್ಮಧ್ಯೆ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದ್ದು ಆ ಬಾಲಕನನ್ನು ಸ್ಮಾರ್ಟ್ ಬಾಯ್ ಇಂದು ಕರೆಯುತ್ತಿದ್ದಾರೆ.
ಭಾರತ ಬಯಸದಿದ್ದರೆ ಕಾಶ್ಮೀರ ವಿಚಾರವಾಗಿ ನಾನು ಮಧ್ಯಸ್ಥಿಕೆ ವಹಿಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದು, ಇದರಿಂದಾಗಿ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ಗೆ ಭಾರೀ ಮುಖಭಂಗವಾಗಿದೆ.
ವಿಶ್ವಸಂಸ್ಥೆ ಸಾಮಾನ್ಯ ಸಭೆ 74 ನೇ ಅಧಿವೇಶನದಲ್ಲಿ ಸೆಪ್ಟೆಂಬರ್ 27 ರಂದು ಭಾಷಣ ಮಾಡಲಿರುವ ಇಮ್ರಾನ್ ಖಾನ್ ಅದಕ್ಕೂ ಮುನ್ನ ಸೋಮವಾರದಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಲಿದ್ದಾರೆ.
ಸಮಯದ ಅಭಾವದಿಂದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕವಿತೆಯನ್ನು ಪೂರ್ಣವಾಗಿ ಓದದಿದ್ದರೂ, ಕೇವಲ ಎರಡು ಸಾಲುಗಳನ್ನು ಮಾತ್ರ ಹೇಳಿದರು. ಆದರೆ ಅವರ ಎರಡು ಸಾಲುಗಳು ಪ್ರೇಕ್ಷಕರನ್ನು ಮೋಡಿಮಾಡಿದವು.
ಚೀನಾದ ಬೆಳೆಯುತ್ತಿರುವ ಮಿಲಿಟರಿ ಸಾಮರ್ಥ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಜಗತ್ತಿಗೆ ಅಪಾಯವಾಗಿದೆ ಎಂದು ಹೇಳಿದ್ದಾರೆ. ಚೀನಾ ದೇಶ ಅಮೇರಿಕಾದ ಬೌದ್ದಿಕ ಆಸ್ತಿಯನ್ನು ಕಡಿಯುವುದರ ಮೂಲಕ ತನ್ನ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಲು ಮುಂದಾಗಿದೆ ಎಂದು ಟ್ರಂಪ್ ದೂರಿದ್ದಾರೆ.
ಸೆಪ್ಟೆಂಬರ್ 22 ರಂದು ಹೂಸ್ಟನ್ ನಲ್ಲಿ ನಡೆಯಲಿರುವ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಕೆಲವು ಮೆಗಾ ಘೋಷಣೆಗಳು ಹೊಮ್ಮುವ ಸಾಧ್ಯತೆ ಬಗ್ಗೆ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳಿವು ನೀಡಿದ್ದಾರೆ. ಈ ಸಂದರ್ಭದಲ್ಲಿ ಯುಎಸ್ ಮತ್ತು ಭಾರತದ ಅಧಿಕಾರಿಗಳು ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಮೆಗಾ "'ಹೌಡಿ, ಮೋದಿ!" ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧರಿಸಿದ್ದಾರೆ ಎಂದು ಅಮೆರಿಕದ ಭಾರತ ರಾಯಭಾರಿ ಹರ್ಷವರ್ಧನ್ ಶ್ರೀಂಗ್ಲಾ ಹೇಳಿದ್ದಾರೆ.
ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿಯಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಅಲ್ ಖೈದಾ ಸಂಸ್ಥಾಪಕ ಒಸಾಮಾ ಬಿನ್ ಲಾಡೆನ್ ಅವರ ಪುತ್ರ ಹಾಗೂ ಉತ್ತರಾಧಿಕಾರಿ ಹಮ್ಜಾ ಬಿನ್ ಲಾಡೆನ್ ಸಾವನ್ನಪ್ಪಿದ್ದಾರೆ ಎಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಖಚಿತಪಡಿಸಿದ್ದಾರೆ ಎಂದು ಎಎಫ್ಪಿ ಸುದ್ದಿ ಸಂಸ್ಥೆ ತಿಳಿಸಿದೆ.
ರಾಸ್ಮುಸ್ಸೆನ್ ನಡೆಸಿದ ಸಮೀಕ್ಷೆಯಲ್ಲಿ, ಅಮೆರಿಕದ ಸುಮಾರು 52 ಪ್ರತಿಶತದಷ್ಟು ಮತದಾರರು ಡೊನಾಲ್ಡ್ ಟ್ರಂಪ್ ಅವರನ್ನು ಮತ್ತೆ ಅಧ್ಯಕ್ಷರನ್ನಾಗಿ ನೋಡಲು ಬಯಸುವುದಿಲ್ಲ ಎಂದು ತಿಳಿದುಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.