ನವದೆಹಲಿ: ಕೊರೊನಾ ವೈರಸ್ ಮಹಾಮಾರಿಯ ವಿರುದ್ಧ ಹೋರಾಟ ನಡೆಸಲಿ ಇದೀಗ ಇಡೀ ವಿಶ್ವಾದ್ಯಂತದ ವಿಜ್ಞಾನಿಗಳು ಒಗ್ಗಟ್ಟಾಗಿ ಪ್ರಯತ್ನ ಆರಂಭಿಸಿದ್ದಾರೆ. ಏತನ್ಮಧ್ಯೆ ಒಂದು ಉತ್ತಮ ಬೆಳವಣಿಗೆಯ ಕುರಿತು ಸುದ್ದಿ ಪ್ರಕಟಗೊಂಡಿದೆ. ಕೊರೊನಾ ವೈರಸ್ ಅನ್ನು ಹತ್ತಿಕ್ಕಲು ಇಂಗ್ಲೆಂಡ್ ಹಾಗೂ ರಷ್ಯಾ ದೇಶಗಳೂ ಕೂಡ ಲಸಿಕೆ ಸಿದ್ಧಪಡಿಸಿವೆ ಎನ್ನಲಾಗಿದೆ. ಎರಡೂ ದೇಶಗಳು ಸಿದ್ಧಪಡಿಸಿರುವ ಈ ಲಸಿಕೆಗಳ ಪರಿಣಾಮಗಳೂ ಕೂಡ ತುಂಬಾ ಸಕಾರಾತ್ಮಕವಾಗಿವೆ ಎಂದು ತಿಳಿದುಬಂದಿದೆ.
ಆಕ್ಸ್ಫರ್ಡ್ ಹಾಗೂ ರಷ್ಯಾ ದೇಶದಲ್ಲಿ ನಡೆಯುತ್ತಿದೆ ಕ್ಲಿನಿಕಲ್ ಟ್ರಯಲ್
ಇಂಗ್ಲೆಂಡ್ ನ ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಕೊರೊನಾ ವೈರಸ್ ಗೆ ಲಸಿಕೆ ಸಿದ್ಧಪಡಿಸಿದ್ದು, 18-55 ವರ್ಷ ವಯಸ್ಸಿನವರ ಮೇಲೆ ಇದರ ಕ್ಲಿನಿಕಲ್ ಟ್ರಯಲ್ ಕೂಡ ಆರಂಭಗೊಂಡಿದೆ. ChAdOx nCoV-19 ಹೆಸರಿನ ಈ ಔಷಧಿಗೆ ಇಂಗ್ಲೆಂಡ್ ನ ಔಷಧಿ ಪ್ರಾಧಿಕಾರ ಒಪ್ಪಿಗೆ ಕೂಡ ನೀಡಿದೆ ಎನ್ನಲಾಗಿದೆ. ಇದೆ ರೀತಿ ರಷ್ಯಾದಲ್ಲಿಯೂ ಕೂಡ ವಿಜ್ಞಾನಿಗಳು ಈ ಮಾರಕ ವೈರಸ್ ನ ದಮನಕ್ಕೆ ಔಷಧಿ ಕಂಡುಹಿಡಿದಿದ್ದಾರೆ ಎನ್ನಲಾಗಿದೆ. ರಷ್ಯಾದ ವೆಕ್ಟರ್ ಸ್ಟೇಟ್ ವಿರೋಲಾಜಿ ಅಂಡ್ ಬಯೋಟೆಕ್ ಸೆಂಟರ್ ಈ ಲಸಿಕೆಯನ್ನು ಸಿದ್ಧಪಡಿಸಿದ್ದು, ಸದ್ಯ ಜಾನುವಾರುಗಳ ಮೇಲೆ ಈ ಔಷಧಿಯನ್ನು ಪ್ರಯೋಗಿಸಲಾಗುತ್ತಿದ್ದು, ಶೀಘ್ರವೇ ಇದು ಬಿಡುಗಡೆಯಾಗುವ ನಿರೀಕ್ಷೆ ಇದೆ ಎನ್ನಲಾಗಿದೆ.
ಸಾಮಾನ್ಯ ನಾಗರಿಕರ ಬಳಿ ಯಾವಾಗ ತಲುಪಲಿವೆ ಈ ಲಸಿಕೆಗಳು
ಡ್ಯೂಕ್ ವಿವಿ ಮುಖ್ಯಸ್ಥ ಜೊನಾಥನ್ ಕಿಕ್ ಪ್ರಕಾರ ಈ ಲಸಿಕೆಗಳಿಗೆ ಸರ್ಕಾರಿ ಒಪ್ಪಿಗೆ ದೊರೆತ ಬಳಿಕವೂ ಕೂಡ ಇವುಗಳ ರಿಯಾಕ್ಷನ್ ಕುರಿತು ಗಮನಹರಿಸುವುದು ಅಗತ್ಯವಾಗಿದೆ. ಆದರೆ, ವಿಶ್ವದ ಹಲವು ದೇಶಗಳಲ್ಲಿ ಲಸಿಕೆ ತಯಾರಿಸುವ ಕಾರ್ಯ ಪ್ರಗತಿಯಲ್ಲಿದೆ. ಆದರೆ, ಸುರಕ್ಷತೆಯ ಎಲ್ಲ ಮಾನದಂಡಗಳ ಮೇಲೆ ಸಿದ್ಧವಾದ ಬಳಿಕ ಮಾತ್ರವೇ ಈ ಲಸಿಕೆಯನ್ನು ಸಾಮಾನ್ಯ ಜನರ ಬಳಿಗೆ ತಲುಪಿಸಲಾಗುತ್ತದೆ ಎಂದು ಹೇಳಿದ್ದಾರೆ. ಜೊತೆಗೆ ಈ ಲಸಿಕೆಯ ಬೆಲೆ ಕೂಡ ಒಂದು ಪ್ರಮುಖ ಪಾತ್ರ ವಹಿಸುತ್ತದೆ. ಒಂದು ವೇಳೆ ಈ ಲಸಿಕೆ ತುಂಬಾ ದುಬಾರಿಯಾದಲ್ಲಿ ಸಾಮಾನ್ಯ ಜನರ ಬಳಿ ಇದನ್ನು ತಲುಪಿಸುವುದು ದೊಡ್ಡ ಸವಾಲಿನ ಪ್ರಶ್ನೆಯಾಗಿದೆ ಎಂದೂ ಕೂಡ ಅವರು ಹೇಳಿದ್ದಾರೆ.
ಸದ್ಯ ವಿಶ್ವಾದ್ಯಂತ ಕೊರೊನಾ ವೈರಸ್ ಕಾರಣದಿಂದ ಸುಮಾರು 5.97 ಲಕ್ಷ ಜನರು ಸೊಂಕಿತರಗಿದ್ದಾರೆ. ಇದುವರೆಗೆ ಈ ಮಾರಕ ವೈರಸ್ ಗೆ ಸುಮಾರು 27,364 ಮಂದಿ ಅಸುನೀಗಿದ್ದಾರೆ.