ನವದೆಹಲಿ: ರಷ್ಯಾದ ದಾಳಿಕೋರರು ಮತ್ತು ಉಕ್ರೇನಿಯನ್ ಪಡೆಗಳ ನಡುವೆ ಕಾದಾಟ ನಡೆಯುತ್ತಿದ್ದು, ಕೀವ್ ನಲ್ಲಿ ರಾತ್ರೋರಾತ್ರಿ ಬಹುಮಹಡಿ ಅಪಾರ್ಟ್‌ಮೆಂಟ್ ಬ್ಲಾಕ್‌ಗೆ ಕ್ಷಿಪಣಿ ಅಪ್ಪಳಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.ಇದೆ ಸಂದರ್ಭದಲ್ಲಿ ಅಲ್ಲಿರುವ ಜನರನ್ನು ತುರ್ತಾಗಿ ಸ್ಥಳಾಂತರ ಮಾಡಲಾಗುತ್ತಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ.
ಕೀವ್ ನ ಮೇಯರ್ ವಿಟಾಲಿ ಕ್ಲಿಟ್ಸ್ಕೊ ಕಟ್ಟಡವು ಕ್ಷಿಪಣಿಯಿಂದ ಹೊಡೆದಿದೆ.ರಾಜಧಾನಿಯಲ್ಲಿ ರಷ್ಯಾದ ವಿಧ್ವಂಸಕ ಗುಂಪುಗಳು ಆಕ್ರಮಿಸಿವೆ, ರಾತ್ರಿ ನಿಜಕ್ಕೂ ಕಷ್ಟಕರವಾಗಿರುತ್ತದೆ' ಎಂದು ಅವರು ಹೇಳಿದ್ದಾರೆ.ಕೀವ್‌ನಲ್ಲಿ ಯಾವುದೇ ನಿಯಮಿತ ರಷ್ಯಾದ (Russia Ukraine Crisis) ಪಡೆಗಳಿಲ್ಲ, ಆದರೆ ಅವರು ಹಲವಾರು ದಿಕ್ಕುಗಳಿಂದ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
Kyiv, our splendid, peaceful city, survived another night under attacks by Russian ground forces, missiles. One of them has hit a residential apartment in Kyiv. I demand the world: fully isolate Russia, expel ambassadors, oil embargo, ruin its economy. Stop Russian war criminals! pic.twitter.com/c3ia46Ctjq
— Dmytro Kuleba (@DmytroKuleba) February 26, 2022
ಇದನ್ನೂ ಓದಿ: Ukraine-Russia War: ಭಾರತಕ್ಕೆ ಧನ್ಯವಾದ ಹೇಳಿದ ರಷ್ಯಾ, ಕಾರಣ ಇಲ್ಲಿದೆ
ಇನ್ನೊಂದೆಡೆಗೆ ಉಕ್ರೇನ್‌ನ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಅವರು ಹಾನಿಗೊಳಗಾದ ಅಪಾರ್ಟ್ಮೆಂಟ್ ಬ್ಲಾಕ್‌ನ ಚಿತ್ರವನ್ನು ಟ್ವೀಟ್ ಮಾಡಿ."ಕೀವ್, ನಮ್ಮ ಭವ್ಯವಾದ, ಶಾಂತಿಯುತ ನಗರ, ಈಗ ರಷ್ಯಾದ ಕ್ಷಿಪಣಿಗಳ ದಾಳಿಯ ಅಡಿಯಲ್ಲಿ ಮತ್ತೊಂದು ರಾತ್ರಿ ಕಳೆದಿದೆ. ಕೀವ್ನಲ್ಲಿನ ವಸತಿ ಅಪಾರ್ಟ್ಮೆಂಟ್ ಗೆ ಕ್ಷೀಪಣಿ ಮೂಲಕ ಹೊಡೆದಿದೆ.ಆದ್ದರಿಂದ 'ರಷ್ಯಾವನ್ನು ಸಂಪೂರ್ಣವಾಗಿ ಪ್ರತ್ಯೇಕಿಸಿ, ಅಲ್ಲಿನ ರಾಯಭಾರಿಗಳನ್ನು ಹೊರಹಾಕಬೇಕು, ಮತ್ತು ತೈಲ ನಿರ್ಬಂಧವನ್ನು ಹೇರುವುದರ ಮೂಲಕ ಅದರ ಆರ್ಥಿಕತೆ ಕುಸಿಯುವಂತೆ ಮಾಡಬೇಕು' ಎಂದು ಅವರು ಅಂತರಾಷ್ಟ್ರೀಯ ಸಮುದಾಯಕ್ಕೆ ಆಗ್ರಹಿಸಿದ್ದಾರೆ.
ಇದೆ ವೇಳೆ ವಾಯು ಮತ್ತು ಸಮುದ್ರದಿಂದ ಹಾರಿಸಲಾದ ಕ್ರೂಸ್ ಕ್ಷಿಪಣಿಗಳನ್ನು ಬಳಸಿಕೊಂಡು ಉಕ್ರೇನ್‌ನ ಮಿಲಿಟರಿ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡಿದೆ ಎಂದು ರಷ್ಯಾದ ಮಿಲಿಟರಿ ಶನಿವಾರ ಹೇಳಿದೆ.
ಇದನ್ನೂ ಓದಿ: Worlds Most Powerful Militaries : ಜಗತ್ತಿನ ಅತೀ ಬಲಿಷ್ಠ ಮಿಲಿಟರಿ ಯಾವುದು? ಭಾರತ ಯಾವ ಸ್ಥಾನದಲ್ಲಿದೆ? ಇಲ್ಲಿದೆ ನೋಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.