ನವದೆಹಲಿ: ವ್ರತಿಕಾ ಗುಪ್ತಾ ಇತ್ತೀಚಿನ ದಿನಗಳಲ್ಲಿ ಈ ವರ್ಷದ ಅತ್ಯಂತ ದುಬಾರಿ ಮೌಲ್ಯದ ಆಸ್ತಿ ಖರೀದಿಸಿದ ಬಳಿಕ ಸುದ್ದಿಯಲ್ಲಿದ್ದಾರೆ. ಅವರು ಬರೋಬ್ಬರಿ 116 ಕೋಟಿಗೂ ಹೆಚ್ಚು ಮೌಲ್ಯದ ಪೆಂಟ್ ಹೌಸ್ ಖರೀದಿಸಿದ್ದಾರೆ. ಮುಂಬೈನ 'ತ್ರೀ ಸಿಕ್ಸ್ಟಿ ವೆಸ್ಟ್' ಟವರ್ನಲ್ಲಿರುವ ಈ ಪೆಂಟ್ಹೌಸ್ ಅನ್ನು ಖರೀದಿ ಮಾಡಿದ್ದಾರೆ. ಈ ಐಷಾರಾಮಿ ನಿವಾಸವು ಲೋವರ್ ಪರೇಲ್, ಮಾಯಾ ನಗರಿಯಲ್ಲಿದೆ. ಇಲ್ಲಿಂದ ಸಮುದ್ರದ ಅದ್ಭುತ ನೋಟ ಗೋಚರಿಸುತ್ತದೆ. ರಿಯಲ್ ಎಸ್ಟೇಟ್ ಡೇಟಾ ಅನಾಲಿಟಿಕ್ಸ್ ಸಂಸ್ಥೆ IndexTap.com ಪ್ರಕಾರ, ಈ ವರ್ಷ 100 ಕೋಟಿ ರೂ. ದಾಟಿದ ಮೊದಲ ವಸತಿ ಒಪ್ಪಂದ ಇದಾಗಿದೆ.
12,138 ಚದರ ಅಡಿ ಜಾಗ
ವ್ರತಿಕಾ ಗುಪ್ತಾ ಅವರ ಈ ಪೆಂಟ್ ಹೌಸ್ 12,138 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಇದು 8 ಪಾರ್ಕಿಂಗ್ ಸ್ಥಳಗಳನ್ನು ಹೊಂದಿದೆ. ಅಧಿಕೃತ ದಾಖಲೆಗಳ ಪ್ರಕಾರ ಮನೆಯ ನೋಂದಣಿಯನ್ನು 2024ರ ಜನವರಿ 7ರಂದು ಮಾಡಲಾಗಿದೆ. ಆದರೆ ಈ ವರ್ಷ ಇಲ್ಲಿಯವರೆಗೆ ಅತ್ಯಂತ ದುಬಾರಿ ಆಸ್ತಿ ಡೀಲ್ ಮಾಡಿರುವ ವ್ರತಿಕಾ ಗುಪ್ತಾ ಬಗ್ಗೆ ನಿಮಗೆ ತಿಳಿದಿದೆಯೇ. ಅವರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ನೀಡಲಿದ್ದೇವೆ.
ಇದನ್ನೂ ಓದಿ: RBIನಿಂದ ಮೂರು ಬ್ಯಾಂಕ್ಗಳಿಗೆ 2.49 ಕೋಟಿ ರೂಪಾಯಿ ದಂಡ !
ವ್ರತಿಕಾ ಗುಪ್ತಾ ಯಾರು?
ವ್ರತಿಕಾ ಗುಪ್ತಾ ಅವರು ಪರ್ಲ್ ಅಕಾಡೆಮಿ ಆಫ್ ಫ್ಯಾಶನ್ನಿಂದ ಅಧ್ಯಯನ ಮಾಡಿದರು. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ (NIFT)ಯಿಂದ ಪದವಿ ಪಡೆದರು. ಇದರ ನಂತರ ಅವರು ಅಂಜುಮನ್ ಫ್ಯಾಶನ್ ಲಿಮಿಟೆಡ್ನಿಂದ ತಮ್ಮ ಫ್ಯಾಷನ್ ವೃತ್ತಿಜೀವನವನ್ನು ಪ್ರಾರಂಭಿಸಿದರು. 2009 ಮತ್ತು 2011ರಲ್ಲಿ ಅವರು ಅಂಜು ಮೋದಿಗೆ ಡಿಸೈನರ್ ಆಗಿ ಕೆಲಸ ಮಾಡಿದರು. ಇದರ ನಂತರ ಅವರು 2016ರವರೆಗೆ Two White Birds ವಿನ್ಯಾಸ ನಿರ್ದೇಶಕರಾಗಿದ್ದರು. 2017ರಲ್ಲಿ ಉದ್ಯಮಿಯಾಗಿ, ಅವರು Vratika & Nakul ಎಂಬ ಕಂಪನಿಯನ್ನು ಪ್ರಾರಂಭಿಸಿದರು. ವ್ರತಿಕಾ ಅವರು ನಕುಲ್ ಅಗರ್ವಾಲ್ ಅವರನ್ನು ವಿವಾಹವಾಗಿದ್ದಾರೆ. 2022ರಲ್ಲಿ ಅವರು ಐಷಾರಾಮಿ ಮನೆ ಅಲಂಕಾರಿಕ ಬ್ರಾಂಡ್ ಮೇಸನ್ ಸಿಯಾ(Mason Sia )ವನ್ನು ಪ್ರಾರಂಭಿಸಿದರು.
ಆಸ್ತಿ ವ್ಯವಹಾರದ ಬಗ್ಗೆ ವ್ರತಿಕಾ ಗುಪ್ತಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಅಪಾರ್ಟ್ಮೆಂಟ್ಗೆ ಅವರು ಒಟ್ಟು 5.82 ಕೋಟಿ ರೂ. ಮುದ್ರಾಂಕ ಶುಲ್ಕ ಪಾವತಿಸಿದ್ದಾರೆ. 2023ರಲ್ಲಿ, 'ತ್ರೀ ಸಿಕ್ಸ್ಟಿ ವೆಸ್ಟ್' ಎಂದು ಕರೆಯಲ್ಪಡುವ ಅವಳಿ ಗೋಪುರದ ಸಂಕೀರ್ಣವು ಅವರ ಪರವಾಗಿ ದೇಶದ ಅತಿದೊಡ್ಡ ರಿಯಲ್ ಎಸ್ಟೇಟ್ ವ್ಯವಹಾರವನ್ನು ಮಾಡಿದಾಗ ಬೆಳಕಿಗೆ ಬಂದಿತು. 2023ರ ಫೆಬ್ರವರಿ 3ರಂದು ಡಿ-ಮಾರ್ಟ್ ಸಂಸ್ಥಾಪಕ ರಾಧಾಕೃಷ್ಣ ದಮಾನಿ ಅವರ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಮುಂಬೈನಲ್ಲಿ 28 ಘಟಕಗಳಿಗೆ 1,238 ಕೋಟಿ ರೂ. ಪಾವತಿಸಿದ್ದು ದೊಡ್ಡ ಸುದ್ದಿಯಾಗಿತ್ತು.
ಇದನ್ನೂ ಓದಿ: ಭಾರತದಲ್ಲಿ ಇಂದು ಚಿನ್ನದ ಹೆಚ್ಚಳ: ನಿಮ್ಮ ನಗರದ 24 ಕ್ಯಾರೆಟ್ ಬೆಲೆಯನ್ನು ಪರಿಶೀಲಿಸಿ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.