Paytm : ಅಕೌಂಟಲ್ಲಿ ದುಡ್ಡಿಲ್ಲದಿದ್ದರೂ ಕ್ಲಪ್ತ ಸಮಯಕ್ಕೆ ಬಾಡಿಗೆ ಪಾವತಿಸಲು ಬಳಸಿ ಈ ಐಡಿಯಾ.!

ತಿಂಗಳ ಕೊನೆಗೆ ಮನೆಬಾಡಿಗೆ ಪಾವತಿ ಮಾಡುವುದು ಕಿರಿಕಿರಿಯ ಕೆಲಸ. ಸರಿಯಾದ ಹೊತ್ತಿಗೆ ಸಂಬಳ ಆಗದೇ ಹೋದರೆ ಮನೆ ಬಾಡಿಗೆ  ಪೇ ಮಾಡುವುದು ಇನ್ನೂ ಕಿರಿಕಿರಿಯ ಕೆಲಸ. ಏನಾದರೂ ನೆಪ ಹೇಳಿ ಮನೆಮಾಲೀಕನಿಂದ ತಪ್ಪಿಸಿಕೊಂಡು ತಿರುಗಾಡಬೇಕಾಗುತ್ತದೆ. 

Written by - Ranjitha R K | Last Updated : Feb 10, 2021, 01:01 PM IST
  • ಕ್ಲಪ್ತ ಸಮಯಕ್ಕೆ ಬಾಡಿಗೆ ಪಾವತಿಸಲು Paytm ಕಂಡುಹುಡುಕಿದೆ ಮಾರ್ಗ
  • Paytm ಸೌಲಭ್ಯ ಬಳಸಿಕೊಂಡರೆ ಸಿಗಲಿದೆ ಸಾವಿರ ರೂಪಾಯಿ ಲಾಭ
  • ಆ ಸೌಲಭ್ಯ ಬಳಸಿಕೊಳ್ಳುವುದು ಹೇಗೆ..?
Paytm : ಅಕೌಂಟಲ್ಲಿ ದುಡ್ಡಿಲ್ಲದಿದ್ದರೂ ಕ್ಲಪ್ತ ಸಮಯಕ್ಕೆ ಬಾಡಿಗೆ ಪಾವತಿಸಲು ಬಳಸಿ ಈ ಐಡಿಯಾ.! title=
Paytm ಸೌಲಭ್ಯ ಬಳಸಿಕೊಂಡರೆ ಸಿಗಲಿದೆ ಸಾವಿರ ರೂಪಾಯಿ ಲಾಭ (file photo)

ನವದೆಹಲಿ : ತಿಂಗಳ ಕೊನೆಗೆ ಮನೆಬಾಡಿಗೆ ಪಾವತಿ ಮಾಡುವುದು ಕಿರಿಕಿರಿಯ ಕೆಲಸ. ಸರಿಯಾದ ಹೊತ್ತಿಗೆ ಸಂಬಳ ಆಗದೇ ಹೋದರೆ ಮನೆ ಬಾಡಿಗೆ (Home Rent) ಪೇ ಮಾಡುವುದು ಇನ್ನೂ ಕಿರಿಕಿರಿಯ ಕೆಲಸ. ಏನಾದರೂ ನೆಪ ಹೇಳಿ ಮನೆಮಾಲೀಕನಿಂದ ತಪ್ಪಿಸಿಕೊಂಡು ತಿರುಗಾಡಬೇಕಾಗುತ್ತದೆ.  Paytm ಈಗ ಅದಕ್ಕೊಂದು ಪರಿಹಾರ ಹುಡುಕಿದೆ. ಕೈಯಲ್ಲಿ ದುಡ್ಡಿಲ್ಲದಿದ್ದರೂ ಕ್ರೆಡಿಟ್ ಕಾರ್ಡ್ (Credit card) ಇದ್ದರೆ ಸಾಕು. ಮನೆ ಬಾಡಿಗೆ ಸರಿಯಾದ ಸಮಯಕ್ಕೆ ಪೇ ಮಾಡಬಹುದು. ಇದರಿಂದ ನಿಮ್ಮ ಕಿರಿಕಿರಿ ಕೂಡಾ ದೂರವಾಗುತ್ತೆ. ಜೊತೆಗೆ ಒಂದು ಸಾವಿರ ರೂಪಾಯಿ ಕ್ಯಾಶ್ ಬ್ಯಾಕ್ (Cashback) ಕೂಡಾ ಸಿಗುತ್ತದೆ.

Paytm ಮೂಲಕ ಬಾಡಿಗೆ ಪಾವತಿಸಿದರೆ ಇನ್ನೂ ಇದೆ ಲಾಭ..! :

Paytm ಈಗ ರೆಂಟ್ ಪೇಮೆಂಟ್ feature ಇನ್ನಷ್ಟು ವಿಸ್ತರಿಸಿದೆ. ಅಂದರೆ ನಿಮ್ಮಲ್ಲಿ ಕ್ರೆಡಿಟ್ ಕಾರ್ಡ್ (credit card) ಇದ್ದರೆ, ಆ ಕ್ರೆಡಿಟ್ ಕಾರ್ಡ್ ಮೂಲಕ ಸೀದಾ ಮನೆ ಬಾಡಿಗೆ ಪಾವತಿಸುವ ಸೌಲಭ್ಯ ಕಲ್ಪಿಸಿಕೊಟ್ಟಿದೆ. ಇಲ್ಲಿಯ ತನಕ ಯುಪಿಐ (UPI), ಡೆಬಿಟ್ ಕಾರ್ಡ್ (Debit Card) ಮತ್ತು ನೆಟ್ ಬ್ಯಾಂಕಿಂಗ್ (Net Banking) ಮೂಲಕ ರೆಂಟ್ ಪಾವತಿಸಬಹುದಿತ್ತು. ಇದೀಗ ಕ್ರೆಡಿಟ್ ಕಾರ್ಡಿಗೂ  ಈ ಸೌಲಭ್ಯ ವಿಸ್ತರಿಸಲಾಗಿದೆ. ಇಷ್ಟೆ ಅಲ್ಲ, ಈ ಸೌಲಭ್ಯದ ಮೂಲಕ ಬಾಡಿಗೆ ಪಾವತಿಸಿದರೆ 1000 ರೂಪಾಯಿ ಕ್ಯಾಶ್ ಬ್ಯಾಕ್ (Cash back)ಸಿಗಲಿದೆ. ಜೊತೆಗೆ ಒಂದಷ್ಟು ಪಾಯಿಂಟ್ಸ್ ಸಿಗಲಿದೆ. ಬಳಿಕ ಈ ಪಾಯಿಂಟ್ಸ್ ರಿಡೀಮ್ (Redeem) ಮಾಡಿಕೊಳ್ಳಬಹುದಾಗಿದೆ. 

ಇದನ್ನೂ ಓದಿ : Home Loan : ಮನೆ ಕೊಳ್ಳಲು ಇದಕ್ಕಿಂತ ಒಳ್ಳೆಯ ಟೈಮ್ ಸಿಗಲಿಕ್ಕಿಲ್ಲ.! ಯಾಕೆ ಗೊತ್ತಾ..?

ಇದರಲ್ಲಿ ಇನ್ನೂ ಇದೆ ಲಾಭ..!
ನಿಮ್ಮ ಮನೆ ರೆಂಟನ್ನು (Home rent) ಒಂದು ನಿಗದಿತ ದಿನಾಂಕದಂದು ಪೇಟಿಎಂ ಬಳಸಿ ಕ್ರೆಡಿಟ್ ಕಾರ್ಡ್ ಮೂಲಕ ಪೇ ಮಾಡಬಹುದು. ನಿಗದಿತ 50 ಅಥವಾ 60 ದಿನದೊಳಗೆ ಆ ಮೊತ್ತ ಪಾವತಿಸಿದರೆ ಬಡ್ಡಿ ಪಾವತಿಸುವ ಅಗತ್ಯವಿರುವುದಿಲ್ಲ. ಹಣಕಾಸು ಸ್ಥಿತಿ ಸರಿಯಿಲ್ಲದಿದ್ದರೆ ನೀವು ಮನೆ ಬಾಡಿಗೆ ಮೊತ್ತವನ್ನು ಇಎಂಇಗೆ (EMI) ಬದಲಾಯಿಸಬಹುದು. 

ಈ ಅಪ್ಶನ್ ಬಳಸೋದು ಹೇಗೆ..?
ಈ ಸೌಲಭ್ಯ ಬಳಸಬೇಕಾದರೆ ಹೀಗೆ ಮಾಡಿ.
1. paytm ಹೋಂ ಸ್ಕ್ರೀನ್ನಲ್ಲಿ ನೀಡಲಾಗಿರುವ ರಿಚಾರ್ಜ್ ಮತ್ತು ಪೇ ಬಿಲ್ (Recharge & Bill) ಸೆಕ್ಷನ್ ಗೆ ಹೋಗಿ.
2. ರೆಂಟ್ ಪೇಮೆಂಟ್ (Rent Payment) ಅಪ್ಶನ್  ಸೆಲೆಕ್ಟ್  ಮಾಡಿ. 
3. ನಂತರ ಮನೆ ಮಾಲೀಕರ ಅಕೌಂಟ್ ನಂಬರ್ ಮತ್ತು ನಿಮ್ಮ ಕ್ರೆಡಿಟ್ ಕಾರ್ಡ್ ವಿವರ ತುಂಬಿ.
4. ನಂತರ ಪೇ ಮಾಡಬೇಕಾದ ಮೊತ್ತ ಟೈಪ್ ಮಾಡಿ,  Pay Option ಕ್ಲಿಕ್ ಮಾಡಿ. ದುಡ್ಡು ಟ್ರಾನ್ಸ್ಫಮರ್ ಆಗಿರುತ್ತದೆ.
Paytm ಇನ್ನೋವೇಟಿವ್ ಡ್ಯಾಶ್ ಬೋರ್ಡ್ (Innovative Dash Board) ನಿಮ್ಮ ಬಾಡಿಗೆ ಪಾವತಿ ವಿವರಗಳನ್ನು ದಾಖಲಿಸುತ್ತಿರುತ್ತದೆ. ಜೊತೆಗೆ ಬಾಡಿಗೆ ಪಾವತಿ ಮಾಡಬೇಕಾದ ದಿನ ರಿಮೈಂಡರನ್ನೂ ರವಾನಿಸುತ್ತದೆ. ಹಾಗಾದರೆ, ತಡವೇಕೆ..? ಇವತ್ತೇ ಟ್ರೈ ಮಾಡಿ ನೋಡಿ. ಒಂದು ಸಾವಿರ ರೂಪಾಯಿ ಕ್ಯಾಶ್ ಬ್ಯಾಕ್ ಸಂಪಾದಿಸಿ.

ಇದನ್ನೂ ಓದಿ : ಆರ್‌ಬಿಐನ ದೊಡ್ಡ ನಿರ್ಧಾರ, ಇನ್ಮುಂದೆ ವಿಳಂಬವಾಗುವುದಿಲ್ಲ Cheque ಕ್ಲಿಯರೆನ್ಸ್ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

 

Trending News