Tumakuru: ವೈದ್ಯರ ನಿರ್ಲಕ್ಷ್ಯಕ್ಕೆ ಗೃಹಿಣಿ ಬಲಿ, ಆಸ್ಪತ್ರೆ ವಿರುದ್ಧ ಕುಟುಂಬಸ್ಥರ ಆಕ್ರೋಶ!

Tumakuru Crime News: ತುಮಕೂರು ವಿವಿಯಲ್ಲಿ ಅತಿಥಿ ಉಪನ್ಯಾಸಕರಾಗಿ ಮಾನಸ ಕೆಲಸ ಮಾಡ್ತಿದ್ದರು. ಮಕ್ಕಳಾಗಿಲ್ಲವೆಂದು ಒಂದೂವರೆ ತಿಂಗಳಿನಿಂದ ಚಿನ್ಮಯ ಆಸ್ಪತ್ರೆ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದರು.

Written by - Puttaraj K Alur | Last Updated : Sep 3, 2023, 11:56 AM IST
  • ವೈದ್ಯರ ನಿರ್ಲಕ್ಷ್ಯ ಆರೋಪ, ಗೃಹಿಣಿ ಬಲಿ
  • ಖಾಸಗಿ ಆಸ್ಪತ್ರೆ ವಿರುದ್ಧ ಕುಟುಂಬಸ್ಥರ ಆಕ್ರೋಶ
  • ಆಪರೇಷನ್‍ಗೆಂದು ಬಂದಿದ್ದ ಮಹಿಳೆಯ ಪ್ರಾಣವೇ ಹೋಯ್ತು!
Tumakuru: ವೈದ್ಯರ ನಿರ್ಲಕ್ಷ್ಯಕ್ಕೆ ಗೃಹಿಣಿ ಬಲಿ, ಆಸ್ಪತ್ರೆ ವಿರುದ್ಧ ಕುಟುಂಬಸ್ಥರ ಆಕ್ರೋಶ! title=
ವೈದ್ಯರ ನಿರ್ಲಕ್ಷ್ಯಕ್ಕೆ ಗೃಹಿಣಿ ಬಲಿ!

ತುಮಕೂರು: ವೈದ್ಯರ ನಿರ್ಲಕ್ಷ್ಯಕ್ಕೆ ಗೃಹಿಣಿ ಬಲಿಯಾಗಿರುವ ಆರೋಪ ಕೇಳಿಬಂದಿದ್ದು, ಖಾಸಗಿ ಆಸ್ಪತ್ರೆ ವಿರುದ್ಧ ಕುಟುಂಬಸ್ಥರ ಆಕ್ರೋಶ ವ್ಯಕ್ತವಾಗಿದೆ. ಮಾನಸ (30) ಮೃತ ದುರ್ದೈವಿಯಾಗಿದ್ದಾರೆ.

ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಆಪರೇಷನ್‍ಗೆಂದು ಬಂದಿದ್ದ ಮಹಿಳೆಯ ಪ್ರಾಣವೇ ಹೋಗಿದೆ. ಮಹಾಲಕ್ಷ್ಮಿ ನಗರದಲ್ಲಿರುವ ಚಿನ್ಮಯ ನರ್ಸಿಂಗ್ ಹೋಮ್‍ನಲ್ಲಿ ಮಹಿಳೆ ಸಾವನ್ನಪ್ಪಿದ್ದಾರೆ.

5 ವರ್ಷಗಳ ಹಿಂದೆ ಮಾನಸ ಹಾಗೂ ಅರುಣ್ ಮದುವೆಯಾಗಿದ್ದರು. ತುಮಕೂರು ವಿವಿಯಲ್ಲಿ ಅತಿಥಿ ಉಪನ್ಯಾಸಕರಾಗಿ ಮಾನಸ ಕೆಲಸ ಮಾಡ್ತಿದ್ದರು. ಮಕ್ಕಳಾಗಿಲ್ಲವೆಂದು ಒಂದೂವರೆ ತಿಂಗಳಿನಿಂದ ಚಿನ್ಮಯ ಆಸ್ಪತ್ರೆ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದರು.

ಇದನ್ನೂ ಓದಿ: ರೀಲ್ಸ್ ಮಾಡುವ ಆಂಟಿಯರೇ ಟಾರ್ಗೆಟ್: ಫೇಕ್ ಐಡಿಯಲ್ಲಿ ಪಟಾಯಿಸಿ ಚಕ್ಕಂದವಾಡ್ತಿದ್ದ ಖದೀಮ ಅಂದರ್

ಗರ್ಭಕೋಶದಲ್ಲಿ 3 ಗ್ರಾಂ ಗಡ್ಡೆಯಿದೆ, ಅದನ್ನು ತೆಗೆಯಲು ಆಪರೇಷನ್ ಮಾಡಬೇಕೆಂದು ವೈದ್ಯರು ಮಾನಸರನ್ನು ಶುಕ್ರವಾರ ಆಸ್ಪತ್ರೆಗೆ ದಾಖಲಿಸಿಕೊಂಡಿದ್ದರು. ಶನಿವಾರ ರಾತ್ರಿ ಆಪರೇಷನ್ ನಡೆಸುವಾಗ ಮಾನಸ ಸಾವನ್ನಪ್ಪಿದ್ದಾರೆ.

ಮಾನಸ ಸಾವಿಗೆ ವೈದ್ಯರೇ ಕಾರಣವೆಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾನಸಳನ್ನು ಕಳೆದುಕೊಂಡ ಪತಿ ಹಾಗೂ ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ.

ತುಮಕೂರಿನ ಬಟವಾಡಿ ಬಳಿಯಿರುವ ಚಿನ್ಮಯ ನರ್ಸಿಂಗ್ ಹೋಮ್‍ನಲ್ಲಿ ಬೆಂಗಳೂರಿನ ವೈದ್ಯೆ ಡಾ.ಶಶಿಕಲಾ ಆಪರೇಷನ್ ನಡೆಸಿದ್ದರು ಎನ್ನಲಾಗಿದೆ. ಹೊಸ ಬಡಾವಣೆ ಪೊಲೀಸ್ ಠಾಣೆಗೆ ಕುಟುಂಬಸ್ಥರು ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಪೊಲೀಸಪ್ಪನಿಂದ ಪತ್ನಿಗೆ ವರದಕ್ಷಿಣೆ ಕಿರುಕುಳ.. ರಕ್ಷಣೆ ನೀಡಬೇಕಿದ್ದ ಆರಕ್ಷಕನಿಂದಲೇ ಟಾರ್ಚರ್!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News