ಶಿವಮೊಗ್ಗ: ಆತ ಪಿಯುಸಿ ಓದುತ್ತಿದ್ದ ಪ್ರತಿಭಾನ್ವಿತ ವಿದ್ಯಾರ್ಥಿ..ಪಿಯು ನಂತರ ಓದಿನ ಭವಿಷ್ಯ ರೂಪಿಸಿಕೊಳ್ಳುವ ಕನಸು ಕಂಡಿದ್ದ ಹುಡುಗ..ಆದ್ರೆ..ಆ ರೌಡಿಯ ಉಟಳದಿಂದ ಬೇಸೆತ್ತ ಅವನು ರಕ್ತದ ಕಲೆಯನ್ನು ಮೈಗಂಟಿಸಿಕೊಂಡ..ಪದೇ ಪದೇ ಹಣಕ್ಕಾಗಿ ಪೀಡಿಸುತ್ತಿದ್ದ ಮಾಜಿ ರೌಡಿಯನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾದ. ಒಬ್ಬ ರೌಡಿಯಿಂದ ಬದುಕು ಕತ್ತಲು ಮಾಡಿಕೊಂಡ ವಿದ್ಯಾರ್ಥಿಯ ದುರಂತ ಕಥೆಯಿದು.
ಶಿವಮೊಗ್ಗದಲ್ಲಿ ಮತ್ತೆ ನೆತ್ತರು ಹರಿದಿದೆ. ಆದರೆ ಈ ಬಾರಿ ನಡೆದಿದ್ದು ರೌಡಿಗಳ ನಡುವಿನ ವೈಯಕ್ತಿಕ ದ್ವೇಷ ಪ್ರತಿಕಾರಕ್ಕಲ್ಲ. ಬದಲಾಗಿ ಜೀವನದಲ್ಲಿ ಎಂದು ಕ್ರೈಂ ಎಸಗದ ವಿದ್ಯಾರ್ಥಿಯೊಬ್ಬ ರೌಡಿಗೆ ಸ್ಕೆಚ್ ಹಾಕಿ ಮರ್ಡರ್ ಮಾಡಿದ ಕಥೆಯಿದು.
03-08-2022 ರ ಬೆಳಗಿನ ಜಾವ 00:30 ಗಂಟೆಗೆ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಾಗರ ರಸ್ತೆಯ ಗಾಡಿಕೊಪ್ಪದಲ್ಲಿ, ಕಿರಣ @ ಪುಚ್ಚಿ, 23 ವರ್ಷ ಕೊಲೆಯಾಗಿ ಹೋಗಿದ್ದ. ಆದ್ರೆ ಕೊಲೆಯಾದ ಮಾಹಿತಿ ಪೊಲೀಸರಿಗೆ ಇರಲಿಲ್ಲ. ಬೆಳಗ್ಗೆ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿ ಜೊತೆ ವಿನೋಬ ನಗರ ಪೊಲೀಸ್ ಠಾಣೆಗೆ ಬಂದು ಸರ್ ನಾವು ಕೊಲೆ ಮಾಡಿದ್ದೇವೆ ಎಂದು ಹೇಳಿದಾಗ ಪೊಲೀಸರು ದಂಗಾಗಿ ಹೋದ್ರು..ಅವರು ಮೊದಲು ನಂಬುವ ಸ್ಥಿತಿಯಲ್ಲಿ ಇರಲಿಲ್ಲ.
(ಕೊಲೆಯಾದ ರೌಡಿ)
ಇದನ್ನೂ ಓದಿ: ಸೌದಿ ಅರೇಬಿಯಾದಲ್ಲಿ ಪತ್ತೆಯಾಯ್ತು 8000 ವರ್ಷಗಳ ಪುರಾತನ ದೇವಾಲಯ!
ಆದ್ರೂ ಘಟನಾ ಸ್ಥಳಕ್ಕೆ ತೆರಳಿದಾಗ ಅಲ್ಲಿ ಆರೋಪಿತರು ಹೇಳಿದಂತೆ ಪುಚ್ಚಿ ಕಿರಣ ಕೊಲೆಯಾಗಿದ್ದ. ಯಾಕ್ರೋ ಇವನನ್ನು ಕೊಲೆ ಮಾಡಿದ್ದಿರಾ ಎಂದು ಪೊಲೀಸರು ಕೇಳಿದಾಗ...ಆರೋಪಿಗಳು ಸರ್, ಪದೇ ಪದೇ ಹಣಕ್ಕಾಗಿ ಪೀಡಿಸುತ್ತಿದ್ದ. ಪಾರ್ಟಿ ಕೊಡಿಸು ಅಂತಾ ನಿದ್ದೆಗೆಡಿಸಿದ್ದ,.ಸಾರ್..ನಾನು ಸ್ಟುಡೆಂಟ್ ಎಲ್ಲಿಂದ ದುಡ್ಡು ತರೋಕಾಗುತ್ತೆ...ಇದುವರಗೂ ಅಲ್ಲಿ ಇಲ್ಲಿ ಸಾಲ ಮಾಡಿ ಹಣ ನೀಡಿದ್ದೇನೆ...ಇನ್ನು ನನ್ನ ಕೈಯಲ್ಲಿ ಸಾಧ್ಯವಿಲ್ಲ ಎಂದು ಪುಚ್ಚಿಯನ್ನು ಕೊಲ್ಲಲು ಸ್ಕೆಚ್ ಹಾಕಿದೆ..ಪುಚ್ಚಿಗೆ ಪಾರ್ಟಿ ಕೊಡಿಸುತ್ತೇನೆ..ಗಾಡಿಕೊಪ್ಪದ ಬಾರ್ ಒಂದರ ಬಳಿ ಬರುವಂತೆ ಹೇಳಿದೆ ಸಾರ್..ಆತ ಬಂದ ನಂತರ ಮೂವರು ಒಟ್ಟಿಗೆ ಕುಡಿದೆವು..ನಂತರ ಬಯಲಿಗೆ ಪುಚ್ಚಿಯ ತಲೆಗೆ ಬಾಟೆಲ್ ಹಾಗು ಕಲ್ಲಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದೆವು, ನಂತರ ಏನು ಮಾಡಬೇಕೆಂದು ಗೊತ್ತಾಗದೆ..ವಿನೋಬ ನಗರ ಪೊಲೀಸ್ ಠಾಣೆಗೆ ಬಂದೆವು ಎಂದು ಪೊಲೀಸರಿಗೆ ಹೇಳಿದ್ರು. ವಿನೋಬ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಝವಾಹಿರಿ ಹತ್ಯೆಗೆ ಅಮೆರಿಕಾ ಹಾದಿ ಸುಗಮ ಮಾಡಿಕೊಟ್ಟಿದ್ದೇ ಉಗ್ರನ ಈ ಹವ್ಯಾಸ ..!
ಪುಚ್ಚಿ ಅಲಿಯಾಸ್ ಕಿರಣ್ ಮಾಜಿ ರೌಡಿಯಾಗಿದ್ದು, ಇತ್ತಿಚ್ಚಿನ ದಿನಗಳಲ್ಲಿ ರೌಡಿಸಂ ನಿಂದ ದೂರ ಉಳಿದಿದ್ದ. ಸದಾ ಅಮಲಿನಲ್ಲಿರುತ್ತಿದ್ದ ಈತನಿಗೆ ಅಮಲು ಇಳಿಯುವುದರೊಳಗೆ ದುಡ್ಡು ಬೇಕಿತ್ತು. ಊರು ಕೇರಿಯಲ್ಲಿ ಕಿರಿಕ್ ಮಾಡಿಕೊಳ್ಳದೆ..ಮೌನವಾಗಿದ್ದ ಕಿರಣ್,,ಈ ವಿದ್ಯಾರ್ಥಿಗೆ ಹೇಗೆ ತಗಲಾಕೊಂಡ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.