NMACC:ಅದ್ದೂರಿ ಎಂಟ್ರಿ ಪಡೆದ ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್

Nita Mukesh Ambani Cultural Centre: ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಜಿಯೋ ವರ್ಲ್ಡ್ ನಲ್ಲಿ ಕಲ್ಚರಲ್ ಸೆಂಟರ್‌ ಸ್ಥಾಪಿಸಲಾಗಿದೆ. ಈ ಸಂಸ್ಥೆಯನ್ನು ಭಾರತ ಮತ್ತು ವಿದೇಶಗಳ ಕಲಾವಿದರ ಸಮ್ಮುಖದಲ್ಲಿ ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರವನ್ನು ಉದ್ಘಾಟಿಸಿಲಾಯಿತು. 

Written by - Zee Kannada News Desk | Last Updated : Apr 1, 2023, 07:30 PM IST
  • ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಜಿಯೋ ವರ್ಲ್ಡ್ ನಲ್ಲಿ ಕಲ್ಚರಲ್ ಸೆಂಟರ್‌
  • ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರ ಉದ್ಘಾಟನೆ
  • ಅದ್ದೂರಿ ಎಂಟ್ರಿ ಪಡೆದ ಸಾಂಸ್ಕೃತಿಕ ಕೇಂದ್ರದಲ್ಲಿ ನೀತಾ ಅಂಬಾನಿಯಿಂದ ನೃತ್ಯ ಪ್ರದರ್ಶನ
NMACC:ಅದ್ದೂರಿ ಎಂಟ್ರಿ ಪಡೆದ ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ title=

ಮುಂಬೈ: ಅಂಬಾನಿ ಎನ್ನುತ್ತಿದ್ದಂತೆ ತಲೆಗೆ ಮೊದಲು ಬರುವುದು ಜಗತ್ತಿನ ಶ್ರೀಮಂತ ಪಟ್ಟಿಯಲ್ಲಿರುವ ಅಂಬಾನಿ.  ಅಸಂಖ್ಯಾತ ಜನರಿಗೆ ಉದ್ಯೋಗ ನೀಡಿರುವ ರಿಲಯನ್ಸ್ ಇಂಡಸ್ಟ್ರೀಸ್ ಸಮಾಜಸೇವೆಗೂ ಹೆಸರುವಾಸಿಯಾಗಿರುವ ಅಂಬಾನಿ ಗ್ರೂಪ್ಸ್‌ ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದೆ.

ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಜಿಯೋ ವರ್ಲ್ಡ್ ನಲ್ಲಿ ಕಲ್ಚರಲ್ ಸೆಂಟರ್‌ ಸ್ಥಾಪಿಸಲಾಗಿದೆ. ಈ ಸಂಸ್ಥೆಯನ್ನು  ಭಾರತ ಮತ್ತು ವಿದೇಶಗಳ ಕಲಾವಿದರು, ಧಾರ್ಮಿಕ ಮುಖಂಡರು, ಕ್ರೀಡಾಳುಗಳು ಮತ್ತು ಉದ್ಯಮಿಗಳ ಜತೆಗೆ ದೇಶದ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರವನ್ನು ಉದ್ಘಾಟಿಸಿದರು.

ಇದನ್ನೂ ಓದಿ: Kiran Raj New Film: ಹರ್ಷ ಎಂದೇ ಖ್ಯಾತಿ ಪಡೆದಿರುವ ಕಿರಣ್‌ ರಾಜ್‌ಗೆ ಧಾರವಾಹಿಗಳ ಮೇಲೆ ಮುನಿಸೇತಕೆ ? 

ಅದ್ದೂರಿ ಎಂಟ್ರಿ ಪಡೆದ ಸಾಂಸ್ಕೃತಿಕ ಕೇಂದ್ರದಲ್ಲಿ ಅದರ ಸಂಸ್ಥಾಪಕಿಯಾದ ನೀತಾ ಅಂಬಾನಿ ಕೂಡ ಯುವ ಯುವತಿಯರೇ  ನಾಚುವಂತೆ ರಘುಪತಿ ರಾಘವ್ ರಾಜ ರಾಮ್ ಹಾಡಿಗೆ ಕಲಾ ಕೇಂದ್ರದಲ್ಲಿ  ಶಾಸ್ತ್ರೀಯ  ನೃತ್ಯ ಪ್ರದರ್ಶನ ನೀಡಿದರು. 

ಕಲ್ಚರಲ್ ಸೆಂಟರ್‌ ಕುರಿತು  ಮಾತನಾಡಿರುವ ನೀತಾ ಅಂಬಾನಿ, ಭಾರತದ ಕಲೆ ಮತ್ತು ಸಂಸ್ಕೃತಿಯನ್ನು ಜಗತ್ತಿಗೆ ಪ್ರದರ್ಶಿಸಲು ಹಾಗೂ ಜಗತ್ತನ್ನು ಭಾರತಕ್ಕೆ ತರುವ ಉದ್ದೇಶದಿಂದ ಈ  ಕಲ್ಚರ್‌ ಸೆಂಟರ್ ಆರಂಭಿಸಲಾಗಿದೆ ಎಂದರು. 

ಇದನ್ನೂ ಓದಿ: Cheating: ಸಿನಿಮಾದಲ್ಲಿ ನಟಿಸಬೇಕೆಂಬ ಆಸೆಯುಳ್ಳ ಯುವತಿಯರೇ  ಹಾಗೂ ನಟಿಯರೇ ಹುಷಾರ್ !‌  

ಈ ಸಾಂಸ್ಕೃತಿಕ ಕೇಂದ್ರವನ್ನು ಜೀವಂತಗೊಳಿಸುವುದು ಪವಿತ್ರ ಪ್ರಯಾಣವಾಗಿದೆ. ಸಿನಿಮಾ ಮತ್ತು ಸಂಗೀತ, ನೃತ್ಯ ಮತ್ತು ನಾಟಕ, ಸಾಹಿತ್ಯ ಮತ್ತು ಜಾನಪದ, ಕಲೆ ಮತ್ತು ಕರಕುಶಲ ಮತ್ತು ವಿಜ್ಞಾನ ಮತ್ತು ಆಧ್ಯಾತ್ಮಿಕತೆಯಲ್ಲಿ ನಮ್ಮ ಕಲಾತ್ಮಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸಲು ಮತ್ತು ಆಚರಿಸಲು ನಾವು ಉತ್ಸುಕರಾಗಿದ್ದೇವೆ. ಇದು ನಾವು ಭಾರತದ ಅತ್ಯುತ್ತಮವಾದದ್ದನ್ನು ಜಗತ್ತಿಗೆ ಪ್ರದರ್ಶಿಸುವ ಮತ್ತು ವಿಶ್ವದ ಅತ್ಯುತ್ತಮವಾದದ್ದನ್ನು ಭಾರತಕ್ಕೆ ಸ್ವಾಗತಿಸುವ ಜಾಗವಾಗಿದೆ ಎಂದರು. 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News