ನವದೆಹಲಿ: ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ಅವರಿಗೆ ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಉತ್ತರಿಸಿದ್ದು, ಮಹಾತ್ಮ ಗಾಂಧಿಯವರ ಸಂದೇಶವನ್ನು ಕಾರ್ಯರೂಪಕ್ಕೆ ತರುವಲ್ಲಿ ಪ್ರತಿಯೊಬ್ಬ ನಾಗರಿಕರ 'ದಿಲ್ ಸೆ' ಭಾಗವಹಿಸುವಿಕೆಯ ಮಹತ್ವವನ್ನು ಒತ್ತಿ ಹೇಳಿದ್ದಾರೆ.
'ದಿಲ್ ಸೆ' ಶಾರುಖ್ ಖಾನ್ ಮನೀಷಾ ಕೊಯಿರಾಲಾ ಮತ್ತು ಪ್ರೀತಿ ಜಿಂಟಾ ಅವರೊಂದಿಗೆ ನಟಿಸಿದ ಚಿತ್ರ. 1998 ರಲ್ಲಿ ಬಿಡುಗಡೆಯಾದ ದಿಲ್ ಸೆ ಚಿತ್ರವನ್ನು ಮಣಿರತ್ನಂ ನಿರ್ದೇಶಿಸಿದ್ದಾರೆ. ಎ.ಆರ್.ರೆಹಮಾನ್ ಚಿತ್ರಕ್ಕೆ ಸಂಯೋಜಿಸಿದ ಸಂಗೀತಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
When every citizen works Dil Se, the outcome will be exceptional.
We will leave no stone unturned to carry forward the message of Bapu in letter and spirit. @iamsrk https://t.co/L0G38kKRvr
— Narendra Modi (@narendramodi) October 20, 2019
ಈ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ತಮ್ಮ ಟ್ವೀಟ್ ನಲ್ಲಿ ಇದರ ಉಲ್ಲೇಖ ಮಾಡಿದ್ದಾರೆ. ಮಹಾತ್ಮ ಗಾಂಧಿಯವರ 150 ನೇ ಜನ್ಮ ಜಯಂತಿ ಕಾರ್ಯಕ್ರಮದ ಹಿನ್ನಲೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ ಎಲ್ಲ ನಟ ನಟಿಯರನ್ನು ಭೇಟಿ ಮಾಡಿದ್ದರು.
Thank u @narendramodi for hosting us & having such an open discussion on #ChangeWithin & the role artistes can play in spreading awareness of the msgs of The Mahatma. Also the idea of a University of Cinema is extremely opportune! pic.twitter.com/kWRbNk3xzo
— Shah Rukh Khan (@iamsrk) October 19, 2019
ಮಹಾತ್ಮ ಗಾಂಧಿಯವರ ಸಂದೇಶಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸುವ ಸೃಜನಶೀಲ ಜಗತ್ತಿನ ಜನರ ಪಾತ್ರದ ಬಗ್ಗೆ ಮಾತನಾಡಿದ ಪ್ರಧಾನ ಮಂತ್ರಿಗೆ ಶಾರುಖ್ ಖಾನ್ ಧನ್ಯವಾದ ಅರ್ಪಿಸಿದ್ದರು.ಬದಲಾಗುತ್ತಿರುವ ಜಾಗತಿಕ ಸನ್ನಿವೇಶದ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧಿಯನ್ನು ಭಾರತ ಮತ್ತು ಜಗತ್ತಿಗೆ ಮತ್ತೆ ಪರಿಚಯಿಸುವ ಅವಶ್ಯಕತೆಯಿದೆ ಎಂದು ಶಾರುಖ್ ಖಾನ್ ಈ ಸಂದರ್ಭದಲ್ಲಿ ಹೇಳಿದ್ದರು.
ದೆಹಲಿಯಲ್ಲಿ ಶನಿವಾರ ನಡೆದ ಮುಕ್ತ ಚರ್ಚೆಯ ಭಾಗವಾಗಿ ಶಾರುಖ್ ಖಾನ್, ಅಮೀರ್ ಖಾನ್ ಮತ್ತು ಚಲನಚಿತ್ರ ಮತ್ತು ದೂರದರ್ಶನ ಉದ್ಯಮದ ಅನೇಕ ಪ್ರಸಿದ್ಧ ವ್ಯಕ್ತಿಗಳು ಭಾಗವಹಿಸಿದ್ದರು.1