ನವದೆಹಲಿ: ಸದ್ಯ ಬಾಕ್ಸ್ ಆಫೀಸ್ ಮೇಲೆ ಸಲ್ಮಾನ್ ಖಾನ ಅಭಿನಯದ 'ದಬಂಗ್-3' ಚಿತ್ರ ಸಕತ್ ಗಳಿಕೆ ಮಾಡುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆಗೆ ನಡೆಯುತ್ತಿರುವ ವಿರೋಧ ಪ್ರದರ್ಶನಗಳ ಮಧ್ಯೆಯೂ ಕೂಡ ಚಿತ್ರ ಬಾಕ್ ಆಫೀಸ್ ಕೊಳ್ಳೆಹೊಡೆಯುತ್ತಿದೆ. ಇನ್ನೊಂದೆಡೆ ಸಲ್ಮಾನ್ ಅವರ ಈ ಚಿತ್ರವನ್ನು ಗುರಿಯಾಗಿಸಿರುವ ಚಿತ್ರ ನಟ, ನಿರ್ಮಾಪಕ ಕಮಾಲ್ ಆರ್. ಖಾನ್ ಮಾತ್ರ ಸಲ್ಮಾನ್ ಕಾಲೆಳೆಯುವಲ್ಲಿ ತೊಡಗಿದ್ದಾರೆ. ಅವರ ಹೇಳಿಕೆಗೆ ಇದೀಗ ವ್ಯಾಪಕ ಪ್ರತಿಕ್ರಿಯೆಗಳು ಬರಲಾರಂಭಿಸಿವೆ.
ಇತ್ತೀಚೆಗಷ್ಟೇ ತಮ್ಮ ಬಾಲ್ಯದ ಘಟನೆಯೊಂದನ್ನು ನೆನಪಿಸಿಕೊಂಡ ಸಲ್ಮಾನ್ ಖಾನ್ "ನಾನು ನಾಲ್ಕನೆ ತರಗತಿಯಲ್ಲಿದ್ದಾಗ, ನನ್ನನ್ನು ಸ್ಕೂಲ್ ನಿಂದ ಹೊರಹಾಕಲಾಗಿತ್ತು" ಎಂದಿದ್ದರು. ಸಲ್ಮಾನ್ ಅವರ ಈ ಹೇಳಿಕೆಯನ್ನು ಬಂಡವಾಳ ಮಾಡಿಕೊಂಡ ಕಮಾಲ್ ಖಾನ್ "ಭಾಯಿ ನಿಮ್ಮ IQ ಲೆವೆಲ್ ಏನು ಅಂತ ನಿಮಗೆ ತಿಳಿದಿದೆ, ಯಾಕೆ ಸ್ಕ್ರಿಪ್ಟ್ ಬರೆಯುವ ಕೆಲಸಕ್ಕೆ ಕೈಹಾಕುತ್ತೀರಿ? ನಿಮ್ಮ ಸ್ಕೂಲ್ ದಿನಗಳನ್ನು ನೆನಪಿಸಿಕೊಂಡು ಇತರರಿಗೆ ಸ್ಕ್ರಿಪ್ಟ್ ಬರೆಯಲು ಅವಕಾಶ ನೀಡಿ, ಇಂತಹ ಎಕ್ಸ್ಪರಿಮೆಂಟ್ ಗೆ ಕೈಹಾಕಬೇಡಿ, ಲವ್ ಯೂ ಭಾಯಿ" ಎಂದು ಹೇಳಿ ಕಾಲೆಳೆದಿದ್ದಾರೆ.
Salman khan reveals that he was thrown out of school, when he was in 4th grade. Bhai now you know about your IQ and still you write scripts of your films. At least remember your school days and avoid such a disaster experiment bhai. Let others write scripts for you. Love u bhai.
— KRK (@kamaalrkhan) December 26, 2019
ಸದ್ಯ ಅವರ ಈ ಹೇಳಿಕೆಗೆ ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂದಿದೆ. ಕಮಾಲ್ ಹೇಳಿಕೆಗೆ ಪ್ರತ್ರಿಕ್ರಿಯೆ ನೀಡಿರುವ ಬಳಕೆದಾರರೊಬ್ಬರು 'ಕಮಾಲ್ ನಂಬರ್-1' ಎಂದು ಕಾಮೆಂಟ್ ಮಾಡಿ, ಕೆಳಗೆ ಕಮಾಲ್ ಖಾನ್ ಚಿತ್ರಗಳಿಗೆ ಸಿಕ್ಕ ಸ್ಟಾರ್ ರೇಟಿಂಗ್ ಗಳ ಚಿತ್ರ ತೂಗುಬಿಟ್ಟಿದ್ದಾರೆ. ಈ ಚಿತ್ರದಲ್ಲಿ ಕಮಾಲ್ ಖಾನ್ ಚಿತ್ರಗಳಿಗೆ ಒಂದು/ಒಂದೂವರೆ ಸ್ಟಾರ್ ಸಿಕ್ಕಿರುವುದು ಕಾಣಿಸುತ್ತಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಮತ್ತೋರ್ವ ಬಳಕೆದಾರ 'ದೇವರು ಇಂತಹ IQ ಎಲ್ಲರಿಗೂ ನೀಡಲಿ' ಎಂದಿದ್ದಾರೆ. CAAಗೆ ವಿರೋಧಿಸಿ ನಡೆಸಲಾಗುತ್ತಿರುವ ಪ್ರತಿಭಟನೆಗಳ ಮಧ್ಯೆಯೂ ಕೂಡ ಕೇವಲ ನಾಲ್ಕು ದಿನಗಳಲ್ಲಿ ಚಿತ್ರ 100 ಕೋಟಿ.ರೂ ಹಣ ಗಳಿಕೆ ಮಾಡಿದೆ. ಉತ್ತರ ಪ್ರದೇಶದಲ್ಲಿ ಚಿತ್ರಮಂದಿರಗಳೂ ಕೂಡ ಬಂದ್ ಮಾಡಲಾಗಿದೆ. ಮತ್ತೋರ್ವ ಬಳಕೆದಾರರು 'ವ್ಯಕ್ತಿ ಕೆಟ್ ದಾಗಿಯೇ ಮಾತಾಡಿದ್ದಾನೆ, ಆದರೆ ಸರಿಯಾದದ್ದನ್ನೇ ಮಾತಾಡಿದ್ದಾನೆ' ಎಂದು ಕಾಮೆಂಟ್ ಮಾಡಿದ್ದಾನೆ.
ಇದಕ್ಕೂ ಮೊದಲು ಟ್ವೀಟ್ ಮಾಡಿದ್ದ ಕಮಾಲ್ ಖಾನ್ ಚಿತ್ರ ತುಂಬಾ 'ಬಕ್ವಾಸ್' ಆಗಿದೆ ಎಂದಿದ್ದರು. ಈ ಚಿತ್ರ 90 ದಶಕದಲ್ಲಿ ಬಿಡುಗಡೆಯಾಗಿದ್ದರೆ ಹಿಟ್ ಆಗುತ್ತಿತ್ತು, ಇಂದಿನ ಕಾಲದ ಪ್ರೇಕ್ಷಕರು ಈ ಚಿತ್ರವನ್ನು ಇಷ್ಟಪಡುವುದಿಲ್ಲ ಎಂದಿದ್ದರು. ಕೆಕೆಆರ್ ಅನುಸಾರ 'ಮರ್ಜಾವಾ' ಚಿತ್ರದ ರೀತಿಯಲ್ಲಿಯೇ 'ದಬಂಗ್-3' ಕೂಡ 'ಬಕ್ವಾಸ್' ಚಿತ್ರವಾಗಿದೆ ಎಂದಿದ್ದರು. ಶೇ.30ರಷ್ಟು ಚಿತ್ರ ಸ್ಲೋ ಮೋಶನ್ನಲ್ಲಿದ್ದು, ಭಾಯಿಜಾನ್ ಅವರ ರಿಕ್ಷಾಚಾಲಕ ಅಭಿಮಾನಿಗಳ ವರ್ಗ ಇದಕ್ಕೆ ಚಪ್ಪಾಳೆ ಬಾರಿಸಲಿದೆ. ಈ ಚಿತ್ರ ಇಂದಿನ ಕಾಲದ ಚಿತ್ರ ಅಲ್ಲ. ಒಂದು ವೇಳೆ ಈ ಚಿತ್ರ 90ರ ದಶಕದಲ್ಲಿ ಬಿಡುಗಡೆಯಾಗಿದ್ದಾರೆ ಸೂಪರ್ ಹಿಟ್ ಆಗುತ್ತಿತ್ತು ಎನ್ನಲಾಗಿದೆ.