Fatty Disease: ಸಾಕಷ್ಟು ಓಡಾಟದಿಂದ ಕೂಡಿದ ಇಂದಿನ ಜೀವನ ಶೈಲಿಯಲ್ಲಿ ಜನರ ಆಹಾರ ಮತ್ತು ಲೈಫ್ ಸ್ಟೈಲ್ ನಲ್ಲಿ ಸಾಕಷ್ಟು ಬದಲಾವಣೆ ಬಂದಿದೆ. ಸಮಯದ ಅಭಾವದ ಕಾರಣ ಬಹುತೇಕ ಜನರು ಆರೋಗ್ಯಕ್ಕೆ ಹಾನಿಕಾರಕವಾದ ಆಹಾರ ಪದಾರ್ಥಗಳನ್ನು ಸೇವಿಸುತ್ತಿದ್ದಾರೆ ಮತ್ತು ಅದು ಅವರ ಆರೋಗ್ಯಕ್ಕೆ ಹಾನಿಯನ್ನೂ ಕೂಡ ತಲುಪಿಸುತ್ತಿದೆ. ಇದರಿಂದ ನಾನ್ ಅಲ್ಕೋಹಾಲಿಕ್ ಫ್ಯಾಟಿ ಲೀವರ್ ಡಿಸೀಜ್ ಕೂಡ ಶಾಮೀಲಾಗಿದೆ. ಹೀಗಿರುವಾಗ ಫ್ಯಾಟಿ ಲೀವರ್ ಸಮಸ್ಯೆ ಇರುವ ಜನರು ಯಾವ ರೀತಿ ತಮ್ಮ ಕಾಳಜಿಯನ್ನು ವಹಿಸಬೇಕು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ.
ನಾನ್ ಅಲ್ಕೋಹಾಲಿಕ್ ಫ್ಯಾಟಿ ಲೀವರ್ ಎಂದರೇನು?
ಮದ್ಯಪಾನ ಮಾಡದೆ ಇರುವ ಜನರಲ್ಲಿ ಕಾಣಿಸಿಕೊಳ್ಳುವ ಫ್ಯಾಟಿ ಲೀವರ್ ಅನ್ನು ಫ್ಯಾಟಿ ಲೀವರ್ ಡಿಸೀಜ್ ಎಂದು ಕರೆಯಲಾಗುತ್ತದೆ. ಈ ಕಾಯಿಲೆಯಲ್ಲಿ ವ್ಯಕ್ತಿಗಳ ಆಹಾರದ ಕಾರಣ ಲೀವರ್ ನಲ್ಲಿ ಹೆಚ್ಚುವರಿ ಬೊಚ್ಚು ಅಥವಾ ಫ್ಯಾಟ್ ಸಂಗ್ರಹವಾಗುತ್ತದೆ. ಈ ಕಾರಣದಿಂದ ಲೀವರ್ ಹಾಳಾಗುತ್ತದೆ.
ನಾನ್ ಅಲ್ಕೊಹಾಲಿಕ್ ಫ್ಯಾಟಿ ಲೀವರ್ ಡಿಸೀಜ್ ಲಕ್ಷಣಗಳು
ಹೊಟ್ಟೆಯಲ್ಲಿ ಬಾವು ಕಾಣಿಸಿಕೊಳ್ಳುವುದು, ಎನ್ಲಾರ್ಜ್ ಸ್ಪೀನಲ್, ಅಂಗೈ ಕೆಂಪಾಗುವಿಕೆ, ಕಣ್ಣುಗಳು ಸೇರಿದಂತೆ ಚರ್ಮ ಹಳದಿಯಾಗುವಿಕೆ, ಇವೆಲ್ಲವೂ ಕೂಡ ನಾನ್ ಅಲ್ಕೊಹಾಲಿಕ್ ಸ್ಟಿಟೋಪಟೈಟಸ್ ನ ಲಕ್ಷಣಗಳಾಗಿವೆ.
ಕೊಲಾಯಿನ್ ಹಾಗೂ ಲೀವರ್ ಸಂಬಂಧ
ಶರೀರದಲ್ಲಿ ಕೊಲಾಯಿನ್ ತುಂಬಾ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಇದು ಲೀವರ್ ನಲ್ಲಿರುವ ಫ್ಯಾಟ್ ಅನ್ನು ಜೀರ್ಣಿಸುವ ಕೆಲಸ ಮಾಡುತ್ತದೆ. ಜೊತೆಗೆ ಇದು ಫ್ಯಾಟಿ ಲೀವರ್ ಸಮಸ್ಯೆಯನ್ನು ಸಾಕಷ್ಟು ಪ್ರಮಾಣದಲ್ಲಿ ಸಹಾಯ ಕೂಡ ಮಾಡುತ್ತದೆ. ಹೀಗಾಗಿ ಫ್ಯಾಟಿ ಲೀವರ್ ಸಮಸ್ಯೆಯಿಂದ ಪಾರಾಗಲು ನಿಮ್ಮ ದಿನನಿತ್ಯದ ಆಹಾರದಲ್ಲಿ ಕೊಲಾಯಿನ್ ನಿಂದ ಕೂಡಿದ ಆಹಾರ ಪದಾರ್ಥಗಳನ್ನು ಸೇರಿಸಿದರೆ ಉತ್ತಮ.
ಇದನ್ನೂ ಓದಿ-Weight Loss Tips: ಬೊಜ್ಜು ಕಡಿಮೆ ಮಾಡಲು ಸಹಕಾರಿ ಸೂರ್ಯಕಾಂತಿ ಬೀಜಗಳು
ಈ ಆಹಾರಗಳಲ್ಲಿ ಕೊಲಾಯಿನ್ ಕಂಡು ಬರುತ್ತದೆ
>> ಮೊಟ್ಟೆ- ಮೊಟ್ಟೆಗಳು ಕೊಲಾಯಿನ್ ನ ಉತ್ತಮ ಮೂಲಗಳಾಗಿವೆ. ಹೀಗಿರುವಾಗ ನೀವೂ ಕೂಡ ನಿಮ್ಮ ಡಯಟ್ ನಲ್ಲಿ ಮೊಟ್ಟೆಗಳನ್ನು ತಪ್ಪದೆ ಶಾಮೀಲುಗೊಳಿಸಿ ಫ್ಯಾಟಿ ಲೀವರ್ ಸಮಸ್ಯೆಯಿಂದ ಪಾರಾಗಬಹುದು.
>> ಸೋಯಾಬೀನ್- ಅರ್ಧ ಬಟ್ಟಲು ಹುರಿದ ಸೋಯಾಬೀನ್ ನಲ್ಲಿ 107ಎಂಜಿ ಕೊಲಾಯಿನ್ ಇರುತ್ತದೆ. ಇದು ನಿಮ್ಮ ಲೀವರ್ ಅನ್ನು ಆರೋಗ್ಯವಂತವಾಗಿರಿಸುತ್ತದೆ. ಹೀಗಾಗಿ ನೀವೂ ಕೂಡ ನಿಮ್ಮ ಡಯಟ್ ನಲ್ಲಿ ಸೋಯಾಬೀನ್ ಅನ್ನು ಸೇರಿಸಿಕೊಳ್ಳಿ.
ಇದನ್ನೂ ಓದಿ-ತಣ್ಣಗಾದ ಚಪಾತಿ ತಿನ್ನೋದ್ರಿಂದ ಆರೋಗ್ಯ ಸುಧಾರಣೆ: ಆಶ್ಚರ್ಯವಾದ್ರೂ ಇದು ಸತ್ಯ!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.