ಹೈದರಾಬಾದ್: ಮನುಷ್ಯರಿಗಾಗಿ ಉದ್ಯಾನವನಗಳಿರುವಂತೆಯೇ ಶ್ವಾನಗಳಿಗೂ ವಿಶೇಷವಾದ ಪಾರ್ಕ್ ಹೈದರಾಬಾದ್'ನಲ್ಲಿ ಸಿದ್ಧವಾಗಿದೆ. ಏನಿದು, ಶ್ವಾನಗಳಿಗೆ ಪಾರ್ಕಾ ಎಂದು ಅಚ್ಚರಿಪಡುತ್ತಿದ್ದೀರಾ? ಆದರೆ ಇದು ಸತ್ಯ!
ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಹೈದರಾಬಾದ್'ನಲ್ಲಿ ಶ್ವಾನಗಳಿಗಾಗಿ ವಿಶೇಷ ಪಾರ್ಕ್ ಸಿದ್ಧವಾಗುತ್ತಿದ್ದು, ವಾಕಿಂಗ್ ಟ್ರ್ಯಾಕ್ ಜೊತೆಗೆ ಶ್ವಾನಗಳಿಗಾಗಿ ಕ್ಲಿನಿಕ್, ತರಬೇತಿ ಮತ್ತು ವ್ಯಾಯಾಮ ಉಪಕರಣಗಳು, ಸ್ಪ್ಲಾಶ್ ಪೂಲ್, ಬಯಲು ರಂಗಮಂದಿರ ಹಾಗೂ ದೊಡ್ಡ ಮತ್ತು ಸಣ್ಣ ಶ್ವಾನಗಳಿಗಾಗಿ ಪ್ರತ್ಯೇಕ ಆವರಣಗಳು ಕೂಡಾ ಈ ಪಾರ್ಕ್'ನಲ್ಲಿದೆ. ಇದು ಇಂಡಿಯಾದ ಕೆನ್ನೆಲ್ ಆಫ್ ಕ್ಲಬ್ ನಿಂದ ಪ್ರಮಾಣೀಕರಿಸಲ್ಪಟ್ಟಿದೆ.
ಹೈದರಾಬಾದ್ ಪುರಸಭೆಯಿಂದ ಸುಮಾರು 1.3 ಎಕರೆ ಪ್ರದೇಶದಲ್ಲಿ, 1.2 ಕೋಟಿ ರೂ.ವೆಚ್ಚದಲ್ಲಿ ಪಾರ್ಕ್ ನಿರ್ಮಿಸಲಾಗಿದೆ. ತ್ಯಾಜ್ಯಗಳನ್ನು ಚೆಲ್ಲುವ ಸ್ಥಳವನ್ನು ಶ್ವಾನಗಳ ಪಾರ್ಕ್ ಆಗಿ ಪರಿವರ್ತಿಸಲಾಗಿದ್ದು, ಸದ್ಯದಲ್ಲೇ ಉದ್ಘಾಟನೆಯಾಗಲಿದೆ. ಸಾರ್ವಜನಿಕರು ತಮ್ಮ ಶ್ವಾನಗಳನ್ನು ಈ ಉದ್ಯಾನವನಕ್ಕೆ ಕರೆತರಬಹುದು. ಈ ಪಾರ್ಕ್'ನಲ್ಲಿಯೇ ಬೆಕ್ಕುಗಳಿಗೂ ಅವಕಾಶ ಕಲಿಸುವ ಆಲೋಚನೆಯಲ್ಲಿದ್ದೇವೆ. ಆದರೆ ಈ ಬಗ್ಗೆ ನಂತರದ ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಗ್ರೇಟರ್ ಹೈದರಾಬಾದ್ ಮುನಿಸಿಪಲ್ ಕಾರ್ಪೋರೇಶನ್'ನ ಪಶ್ಚಿಮ ವಲಯ ಆಯಕ್ತೆ ಹರಿಚಂದನ ದಸರಾಯ್ ತಿಳಿಸಿದ್ದಾರೆ.
India's first exclusive dog park has been set up in Hyderabad and will be inaugurated soon. The park offers training & exercise spaces for dogs, splash pools, an amphitheater among others. The park has been certified by The Kennel Club of India. pic.twitter.com/GD6Xctbmh4
— ANI (@ANI) September 17, 2018
We converted a dumping yard to dog park at Rs 1.2 Crore. The park is spread across 1.5 acres of land. We have also thought of adding a cat corner in the park but we will wait for that: Hari Chandana Dasari, Zonal Commissioner, West Zone, Greater Hyderabad Municipal Corporation pic.twitter.com/eKECPu2zkY
— ANI (@ANI) September 17, 2018