ನವದೆಹಲಿ: ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಬಂಧನದಿಂದ ರಕ್ಷಣೆ ಕೋರಿ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರು ಸಲ್ಲಿಸಿದ್ದ ಮನವಿಯ ಮೇರೆಗೆ ಈಗಿನಿಂದಲೇ ಆದೇಶ ಹೊರಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇದಕ್ಕೂ ಮೊದಲು ಪಿಚಿದಂಬರಂ ಅವರ ಜಾಮೀನು ಕೋರಿಕೆಯನ್ನು ತಿರಸ್ಕರಿಸಿದ ದೆಹಲಿ ಹೈಕೋರ್ಟ್ ನ್ಯಾಯಾಧೀಶರು, "ಅರ್ಜಿದಾರರು ಕಿಂಗ್ಪಿನ್, ಅಂದರೆ ಈ ಪ್ರಕರಣದ ಪ್ರಮುಖ ಸಂಚುಕೋರರು ಎಂದು ಪ್ರಕರಣದ ಪ್ರಾಥಮಿಕ ಮುಖವು ಬಹಿರಂಗಪಡಿಸುತ್ತದೆ" ಎಂದು ಹೇಳಿದ್ದರು.
Modi's Govt is using the ED, CBI & sections of a spineless media to character assassinate Mr Chidambaram.
I strongly condemn this disgraceful misuse of power.
— Rahul Gandhi (@RahulGandhi) August 21, 2019
ಸಿಬಿಐನ ಅಧಿಕಾರಿಗಳ ತಂಡವು ಮಂಗಳವಾರ ತಡರಾತ್ರಿ ಚಿದಂಬರಂನ ಜೋರ್ ಬಾಗ್ ನಿವಾಸಕ್ಕೆ ಬಂದಾಗ ಅವರು ಮನೆಯಲ್ಲಿ ಸಿಗಲಿಲ್ಲ. ಈ ಹಿನ್ನಲೆಯಲ್ಲಿ ಸಿಬಿಐ ಅಧಿಕಾರಿಗಳು ಅವರಿಗೆ ನೋಟಿಸ್ ನೀಡಿ ಮುಂದಿನ ಎರಡು ಗಂಟೆಗಳಲ್ಲಿ ಹಾಜರಾಗಲು ಕೇಳಿಕೊಂಡಿದ್ದಾರೆ. ಐಎನ್ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿದಂಬರಂ ಅವರ ಎರಡೂ ಜಾಮೀನು ಅರ್ಜಿಗಳನ್ನು ದೆಹಲಿ ಹೈಕೋರ್ಟ್ ಮಂಗಳವಾರ ವಜಾಗೊಳಿಸಿತ್ತು.
ಉನ್ನತ ವಕೀಲರಾದ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನು ಸಿಂಗ್ವಿ ಅವರನ್ನೊಳಗೊಂಡ ಚಿದಂಬರಂ ಅವರ ಕಾನೂನು ತಂಡವು ಹೈಕೋರ್ಟ್ ಆದೇಶವನ್ನು ತಡೆ ಹಿಡಿಯಲು ಬುಧವಾರ ಸುಪ್ರೀಂಕೋರ್ಟ್ನ ಹಿರಿಯ-ಹೆಚ್ಚಿನ ನ್ಯಾಯಾಧೀಶರನ್ನು ಕೇಳಿಕೊಂಡಿತ್ತು.