OMG: ಆನ್ಲೈನ್ ಗೇಮಿಂಗ್ Appನಲ್ಲಿ 49 ರೂ. ಕಟ್ಟಿ 1.5 ಕೋಟಿ ಗೆದ್ದ ಚಾಲಕ!

Man wins Rs 1.5 crore overnight: ಕೋಟಿ ಗೆಲ್ಲುವ ವಿಭಾಗದಲ್ಲಿ ತಂಡ ಕಟ್ಟಿದ ಶಹಾಬುದ್ದೀನ್ ಮನ್ಸೂರಿ ಪಂದ್ಯ ಮುಗಿದ ಬಳಿಕ 1.5 ಕೋಟಿ ರೂ. ಗೆದ್ದಿದ್ದಾರೆ. ಇದೀಗ ರಾತ್ರೋರಾತ್ರಿ ಶಹಾಬುದ್ದೀನ್ ಮನ್ಸೂರಿ ಜೀವನವೇ ಬದಲಾಗಿದೆ.

Written by - Puttaraj K Alur | Last Updated : Apr 4, 2023, 04:14 PM IST
  • ಆನ್ಲೈನ್‌ ಗೇಮಿಂಗ್‌ Appನಲ್ಲಿ 49 ರೂ. ಕಟ್ಟಿ ಚಾಲಕನೊಬ್ಬ 1.5 ಕೋಟಿ ರೂ. ಜೇಬಿಗಿಳಿಸಿದ್ದಾನೆ
  • ರಾತ್ರೋರಾತ್ರಿ ಕೋಟ್ಯಧಿಪತಿಯಾದ ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯ ಚಾಲಕ
  • ಕೆಕೆಆರ್‌ ಹಾಗೂ ಪಂಜಾಬ್‌ ಪಂದ್ಯಕ್ಕೆ49 ರೂ. ಬಿಡ್ ಮಾಡಿ ಕನಸಿನ ತಂಡ ಕಟ್ಟಿದ್ದ ಚಾಲಕ
OMG: ಆನ್ಲೈನ್ ಗೇಮಿಂಗ್ Appನಲ್ಲಿ 49 ರೂ. ಕಟ್ಟಿ 1.5 ಕೋಟಿ ಗೆದ್ದ ಚಾಲಕ! title=
1.5 ಕೋಟಿ ಗೆದ್ದ ಚಾಲಕ!

ನವದೆಹಲಿ: ಚುಟುಕು ಕ್ರಿಕೆಟ್‍ನ ಐಪಿಎಲ್‌ ಹಬ್ಬ ಆರಂಭಗೊಂಡಿದೆ. ಅನೇಕರು ಆನ್ಲೈನ್‍ ಗೇಮಿಂಗ್ ಆಪ್‍ನಲ್ಲಿ ತಂಡ ಕಟ್ಟಿ ಅದೃಷ್ಟ ಪರೀಕ್ಷೆ ಮಾಡುತ್ತಿದ್ದಾರೆ. ಸಣ್ಣ ಮೊತ್ತವನ್ನು ಬಿಡ್ ಮಾಡಿ ಲಕ್ಷ, ಕೋಟಿ ಹಣ ಗೆಲ್ಲುತ್ತಿದ್ದಾರೆ.

ಹೌದು, ಆನ್ಲೈನ್‌ ಗೇಮಿಂಗ್‌ Appನಲ್ಲಿ ಕೇವಲ 49 ರೂ. ಕಟ್ಟಿ ಚಾಲಕನೊಬ್ಬ ಬರೋಬ್ಬರಿ 1.5 ಕೋಟಿ ರೂ. ಜೇಬಿಗಿಳಿಸಿದ್ದಾನೆ. ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯಲ್ಲಿ ಕ್ರೀಡಾಭಿಮಾನಿಯೊಬ್ಬ ಕೋಟಿ ರೂ. ಗೆದ್ದಿರುವ ಘಟನೆ ನಡೆದಿದೆ.

ಇದನ್ನೂ ಓದಿ: ಮಾನಹಾನಿ ಪ್ರಕರಣ: ರಾಹುಲ್ ಗಾಂಧಿಗೆ ಜಾಮೀನು ನೀಡಿದ ಸೂರತ್ ಕೋರ್ಟ್

ವೃತ್ತಿಯಲ್ಲಿ ಚಾಲಕನಾಗಿರುವ ಶಹಾಬುದ್ದೀನ್ ಮನ್ಸೂರಿ ಕಳೆದ 2 ವರ್ಷಗಳಿಂದ ಆನ್ಲೈನ್‌ ಗೇಮಿಂಗ್‌ Appನಲ್ಲಿ ತಂದ ಕಟ್ಟಿ ಅದೃಷ್ಟ ಪರೀಕ್ಷೆ ಮಾಡುತ್ತಿದ್ದನಂತೆ. ಭಾನುವಾರ ನಡೆದ ಕೆಕೆಆರ್‌ ಹಾಗೂ ಪಂಜಾಬ್‌ ನಡುವಿನ ಪಂದ್ಯಕ್ಕೆ49 ರೂ. ಬಿಡ್ ಮಾಡಿ ತಮ್ಮ ಕನಸಿನ ತಂಡವನ್ನು ರೂಪಿಸಿದ್ದರು.

ಕೋಟಿ ಗೆಲ್ಲುವ ವಿಭಾಗದಲ್ಲಿ ತಂಡ ಕಟ್ಟಿದ ಶಹಾಬುದ್ದೀನ್ ಮನ್ಸೂರಿ ಪಂದ್ಯ ಮುಗಿದ ಬಳಿಕ 1.5 ಕೋಟಿ ರೂ. ಗೆದ್ದಿದ್ದಾರೆ. ಇದೀಗ ರಾತ್ರೋರಾತ್ರಿ ಶಹಾಬುದ್ದೀನ್ ಮನ್ಸೂರಿ ಜೀವನವೇ ಬದಲಾಗಿದೆ.

ಇದನ್ನೂ ಓದಿ: Viral Video: ಪ್ರಿಯಕರನ ಜೊತೆ ಮದುವೆ ಮಾಡುವಂತೆ ಪೊಲೀಸ್ ಠಾಣೆಯಲ್ಲಿ ವಧುವಿನ ರಂಪಾಟ!

ಸದ್ಯ ಶಹಾಬುದ್ದೀನ್ ಗೆದ್ದ ಹಣದಲ್ಲಿ 20 ಲಕ್ಷ ರೂ.ವನ್ನು ವಿತ್ ಡ್ರಾ ಮಾಡಿಕೊಂಡಿದ್ದಾರೆ. ಗೆದ್ದಿರುವ 1.5 ಕೋಟಿ ಹಣಕ್ಕೆ 6 ಲಕ್ಷ ರೂ. ತೆರಿಗೆ ಕಡಿತವಾಗಿದೆಯಂತೆ. ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಶಹಾಬುದ್ದೀನ್ ಇದೀಗ ಸ್ವಂತ ಮನೆ ಕಟ್ಟುವ ಕನಸು ಹೊಂದಿದ್ದು, ಸ್ವಂತ ವ್ಯಾಪಾರ ಕೂಡ ಆರಂಭಿಸುವುದಾಗಿ ಹೇಳಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News