ನವದೆಹಲಿ: ಈ ವರ್ಷದ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನದಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು 44 ಮಂದಿ ಅರ್ಹ ಶಿಕ್ಷಕರನ್ನು ಗೌರವಿಸಲಿದ್ದಾರೆ.ಕೇಂದ್ರ ಶಿಕ್ಷಣ ಸಚಿವಾಲಯ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ಶಿಕ್ಷಕರಿಗೆ ರಾಷ್ಟ್ರೀಯ ಪ್ರಶಸ್ತಿ, 2021 ಕ್ಕೆ ದೇಶಾದ್ಯಂತ ಆಯ್ಕೆಯಾದ ಶಿಕ್ಷಕರ ಪಟ್ಟಿಯನ್ನು ಪ್ರಕಟಿಸಿದೆ.
ಇದನ್ನೂ ಓದಿ : PPF Investment: ಪಿಪಿಎಫ್‌ನಲ್ಲಿ 15 ವರ್ಷಗಳ ಲಾಕ್-ಇನ್ ಅವಧಿ ಕಡಿಮೆಯಾಗುವುದೇ? ಇಪಿಎಫ್‌ಗೆ ಸಮಾನವಾದ ಬಡ್ಡಿ ಸಿಗುತ್ತದೆಯೇ?
ಆಯ್ಕೆಯಾದ ಶಿಕ್ಷಕರಲ್ಲಿ, ಈ ವರ್ಷ ಪ್ರಶಸ್ತಿ ಪಡೆದವರಲ್ಲಿ ಒಂಬತ್ತು ಮಹಿಳಾ ಶಿಕ್ಷಕರು. ಆಯ್ಕೆಯಾದ 44 ಶಿಕ್ಷಕರ ಪಟ್ಟಿಯಲ್ಲಿ ಉತ್ತರ ಪ್ರದೇಶ, ರಾಜಸ್ಥಾನ, ಗುಜರಾತ್, ತೆಲಂಗಾಣ, ಸಿಕ್ಕಿಂ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಒಡಿಶಾ, ಬಿಹಾರ ಮತ್ತು ತಮಿಳುನಾಡು ಸೇರಿದಂತೆ 10 ವಿವಿಧ ರಾಜ್ಯಗಳ ತಲಾ ಇಬ್ಬರು ಶಿಕ್ಷಕರು ಸೇರಿದ್ದಾರೆ.
ಇದನ್ನೂ ಓದಿ : ಕೇರಳದ ತಿರುವನಂತಪುರಮ್ ನಲ್ಲಿ ಜಿಕಾ ವೈರಸ್ ಪ್ರಕರಣ .!
ರಾಷ್ಟ್ರೀಯ ಗೌರವ ಪಟ್ಟಿಯಲ್ಲಿ ರಾಜಸ್ಥಾನದ ಬಿರ್ಲಾ ಬಾಲಿಕಾ ವಿದ್ಯಾಪೀಠ, ಜುಂಜುನು ಮತ್ತು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) ಸಂಯೋಜಿತ ಶಾಲೆಗಳಲ್ಲಿ ದೆಹಲಿಯ ದ್ವಾರಕಾದ ಬಾಲ ಭಾರತಿ ಸಾರ್ವಜನಿಕ ಶಾಲೆಯಿಂದ ಇಬ್ಬರು ಶಿಕ್ಷಕರು ಸೇರಿದ್ದಾರೆ. ಛತ್ತೀಸ್ ಗಡ್ ದ ಬಸ್ತಾರ್‌ನ ಏಕಲವ್ಯ ಮಾದರಿ ವಸತಿ ಶಾಲೆಯ ಶಿಕ್ಷಕಿಯರನ್ನೂ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಾಥಮಿಕ, ಮಧ್ಯಮ ಮತ್ತು ಪ್ರೌಢಶಾಲೆಗಳಲ್ಲಿ ಕೆಲಸ ಮಾಡುವ ಪ್ರತಿಭಾವಂತ ಶಿಕ್ಷಕರಿಗೆ ಸಾರ್ವಜನಿಕ ಮಾನ್ಯತೆ ನೀಡಲು ಪ್ರತಿವರ್ಷ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ