ಹೈದರಾಬಾದ್: ನಗರದಲ್ಲಿ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ಇಬ್ಬರು ನಟಿಯರು ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ವೇಶ್ಯಾವಾಟಿಕೆ ಕುರಿತಾಗಿ ದೊರೆತ ಖಚಿತ ಮಾಹಿತಿ ಮೇರೆಗೆ ಶನಿವಾರ ರಾತ್ರಿ ತಡವಾಗಿ ಬಂಜಾರಾ ಹಿಲ್ಸ್ ಪ್ರದೇಶದಲ್ಲಿನ ಎರಡು ಪಂಚತಾರಾ ಹೊಟೇಲ್ಗಳಾದ ತಾಜ್ ಡೆಕ್ಕನ್ ಮತ್ತು ತೇಜ್ ಬಂಜಾರ ಮೇಲೆ ಧಾಳಿ ನಡೆಸಿದ ಪೊಲೀಸರು, ವೇಶ್ಯಾವಾಟಿಕೆಯಲ್ಲಿ ಪಾಲ್ಗೊಂಡಿದ್ದ ಬಾಲಿವುಡ್ ನಟಿ ರಿಚಾ ಸೆಕ್ಸೆನಾ ಹಾಗೂ ಬೆಂಗಾಳಿಯ ಕಿರುತರೆ ನಟಿ ಸುಬ್ರ ಚಟರ್ಜಿಯನ್ನು ಬಂಧಿಸಿದ್ದಾರೆ.
ಇವರೊಂದಿಗೆ ಈ ದಂಧೆಯನ್ನು ನಡೆಸುತ್ತಿದ್ದ ಮತ್ತು ಹೋಟೆಲುಗಳಲ್ಲಿ ಕೊಠಡಿಗಳನ್ನು ಬುಕ್ ಮಾಡಿ ಕೊಡುತ್ತಿದ್ದ ಇಬ್ಬರು ಆನ್ಲೈನ್ ದಲ್ಲಾಳಿಗಳನ್ನೂ ಪೊಲೀಸರು ಬಂಧಿಸಿ ವಶಕ್ಕೆ ತೆಗೆದುಕೊಂಡಿದ್ದು, ಆರೋಪಿಗಳನ್ನು ಪುಂಜಗುಟ್ಟ ಪೊಲೀಸರಿಗೆ ಒಪ್ಪಿಸಿದ್ದಾರೆ.
ಮತ್ತೊಂದು ಘಟನೆಯಲ್ಲಿ, ನಟಿಯರನ್ನು ಒಳಗೊಂಡ ಉನ್ನತ ವೇಶ್ಯಾವಾಟಿಕೆ ರಾಕೆಟ್ ಒಂದು ಪಶ್ಚಿಮ ಬಂಗಾಳದಲ್ಲಿ ಬೆಳಕಿಗೆ ಬಂದಿದೆ.
ಹೈದರಾಬಾದ್ ಪೋಲಿಸ್ ಅಧಿಕಾರಿಗಳು ಟಾಲಿವುಡ್ ನಟಿಯನ್ನು ಮತ್ತು ಬೆಂಗಾಳಿ ಕಿರುತರೆ ನಟಿಯನ್ನು ಒಳಗೊಂಡಂತೆ ಒಟ್ಟು ಐವರನ್ನು ಬಂಧಿಸಿದ್ದಾರೆ. ಬಂಧಿತರಿಂದ 55,000 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.