Shantanu Naidu net worth: ಟಾಟಾ ಸನ್ಸ್‌ನ ಅತ್ಯಂತ ಯಶಸ್ವಿ ಅಧ್ಯಕ್ಷರಲ್ಲಿ ಒಬ್ಬರಾದ ರತನ್ ಟಾಟಾ ಈಗ ನಮ್ಮೊಂದಿಗಿಲ್ಲ. ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕಳೆದ ರಾತ್ರಿ ಕೊನೆಯುಸಿರೆಳೆದಿದ್ದಾರೆ. ವಾನಪ್ರಸ್ಥ ಆಶ್ರಮದಲ್ಲಿ ಜೀವನ ನಡೆಸುತ್ತಿದ್ದ ರತನ್ ಅವರ ಜೊತೆ ಒಬ್ಬ ಯುವಕ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದ್ದ. ಆತನೆಂದರೆ ರತನ್ ಅವರಿಗೆ ಬಲು ಪ್ರೀತಿ. ಅಷ್ಟಕ್ಕೂ ಆ ಯುವಕನ ಹಿನ್ನೆಲೆ ಏನು? ಆತ ಯಾರು? ಆತನ ಆಸ್ತಿಪಾಸ್ತಿ ಎಷ್ಟಿದೆ? ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ವರದಿಯಲ್ಲಿ ತಿಳಿಸಲಿದ್ದೇವೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಸಿಗರೇಟ್ ಸೇದಿದ ಮಹಿಳಾ ಸ್ಪರ್ಧಿ... ಪ್ರಖ್ಯಾತ ನಟಿಯ ಸ್ಮೋಕಿಂಗ್ ವಿಡಿಯೋ
ರತನ್ ಟಾಟಾ ಜೊತೆ ಯಾವಾಗಲು ಕಾಣಿಸಿಕೊಳ್ಳುತ್ತಿದ್ದ ಆ ತೆಳ್ಳಗಿನ ಯುವಕನ ಹೆಸರು ಶಂತನು ನಾಯ್ಡು. ರತನ್ ಟಾಟಾ ಅವರಿಗೆ ನಂಬಿಕಸ್ಥ ಸಹಾಯಕ ಜೊತೆಗೆ ನಂಬಿಕಸ್ಥ ನೆಚ್ಚಿನ ಗೆಳೆಯ.
ಹಿರಿಯ ಕೈಗಾರಿಕೋದ್ಯಮಿ ರತನ್ ಟಾಟಾ ಅವರೊಂದಿಗೆ ಸಮಯ ಕಳೆಯುತ್ತಿದ್ದ ಈ ಯುವಕನ ವಯಸ್ಸು ಕೇವಲ 31 ವರ್ಷ.
ಶಂತನು ನಾಯ್ಡು ಅವರು ಟಾಟಾ ಟ್ರಸ್ಟ್‌ನ ಉಪ ಪ್ರಧಾನ ವ್ಯವಸ್ಥಾಪಕರಾಗಿ ಕೆಲಸ ಮಾಡಿದ್ದಾರೆ. ಅವರ ಪ್ರತಿಭೆಯಿಂದ ರತನ್ ಟಾಟಾ ಕೂಡ ಪ್ರಭಾವಿತರಾಗಿದ್ದರು ಎಂದರೆ ತಪ್ಪಾಗಲ್ಲ. ಅದಕ್ಕೇ ರತನ್ ಟಾಟಾ ಅವರೇ ಕರೆ ಮಾಡಿ ನೀನು ನನ್ನ ಅಸಿಸ್ಟೆಂಟ್ ಆಗುತ್ತೀಯ ಎಂದಿದ್ದರು. ಇದರ ನಂತರ, ಅವರು 2022 ರಲ್ಲಿ ರತನ್ ಟಾಟಾ ಅವರ ಕಚೇರಿಯಲ್ಲಿ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದರು.
ಶಂತನು ನಾಯ್ಡು ಮುಂಬೈ ನಿವಾಸಿ. 1993 ರಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ಜನಿಸಿದರು. ಸ್ಟಾರ್ಟಪ್‌ಗಳಲ್ಲಿ ಹೂಡಿಕೆ ಮಾಡಲು ಶಂತನು ರತನ್ ಟಾಟಾಗೆ ವ್ಯಾಪಾರ ಸಲಹೆಗಳನ್ನು ನೀಡುತ್ತಿದ್ದರು.
ಶಂತನು ನಾಯ್ಡು ಉದ್ಯಮಿ, ಎಂಜಿನಿಯರ್, ಕಿರಿಯ ಸಹಾಯಕ, ಡಿಜಿಎಂ, ಸಾಮಾಜಿಕ ಮಾಧ್ಯಮ ಪ್ರಭಾವಿ, ಬರಹಗಾರನಾಗಿ ದೇಶಾದ್ಯಂತ ಪ್ರಸಿದ್ಧರಾಗಿದ್ದಾರೆ. ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಶಂತನು ಜೂನ್ 2017 ರಿಂದ ಟಾಟಾ ಟ್ರಸ್ಟ್ʼನಲ್ಲಿ ಕೆಲಸ ಮಾಡುತ್ತಿದ್ದಾರೆ. ಇದಲ್ಲದೆ, ನಾಯ್ಡು ಅವರು ಟಾಟಾ ಎಲ್ಕ್ಸಿಯಲ್ಲಿ ವಿನ್ಯಾಸ ಎಂಜಿನಿಯರ್ ಆಗಿಯೂ ಕೆಲಸ ಮಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲೂ ತುಂಬಾ ಸಕ್ರಿಯರಾಗಿರುವ ಶಂತನು, ಒಮ್ಮೆ ಬೀದಿ ನಾಯಿಗಳಿಗೆ ಪ್ರತಿಫಲಕಗಳಿಂದ ಮಾಡಿದ ಕಾಲರ್ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು. ಈ ಪ್ರತಿಫಲಕದಿಂದಾಗಿ, ಚಾಲಕರು ಮುಂಬೈನ ರಸ್ತೆಗಳಲ್ಲಿ ಬೀದಿನಾಯಿಗಳನ್ನು ದೂರದಿಂದಲೇ ಗುರುತಿಸಬಹುದಾಗಿತ್ತು. ಈ ಪೋಸ್ಟ್ ಓದಿದ ನಂತರ ರತನ್ ಟಾಟಾ ಅವರನ್ನು ಕರೆದು ಮೆಚ್ಚುಗೆ ಸೂಚಿಸಿದ್ದರು. ಅದಾದ ನಂತರ ಇವರಿಬ್ಬರ ನಡುವೆ ಒಡನಾಟ ಬೆಳೆಯಿತು. ರತನ್ ಟಾಟಾ ಮತ್ತು ಶಂತನು ನಾಯ್ಡು ಅವರ ಸ್ನೇಹಕ್ಕೆ ಕಾರಣವಾಗಿದ್ದು ಪ್ರಾಣಿಗಳ ಮೇಲಿನ ಒಲವು. ಇವರಿಬ್ಬರಿಗೂ ನಾಯಿಯೆಂದರೆ ಅಚ್ಚುಮಚ್ಚು.
ಶಂತನು ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಓದಿದ್ದಾರೆ. ಅಲ್ಲಿಂದಲೇ ಎಂಬಿಎ ಕೂಡ ಮಾಡಿದ್ದಾರೆ. ವ್ಯಾಸಂಗ ಮುಗಿಸಿದ ಬಳಿಕ ಟಾಟಾ ಗ್ರೂಪ್‌ನಲ್ಲಿ ಕೆಲಸ ಮಾಡಲು ಮುಂದಾಗಿದ್ದಾರೆ. ಇನ್ನು ಅವರ ಕೆಲಸದ ಹೊರತಾಗಿ, ಅವರು ಗುಡ್‌ಫೆಲೋಸ್‌ನ ಗೌರವ ಸದಸ್ಯರೂ ಆಗಿದ್ದಾರೆ. ಇದು ಹಿರಿಯ ನಾಗರಿಕರಿಗೆ ಸಮಗ್ರ ಬೆಂಬಲವನ್ನು ನೀಡುವ ಸಂಸ್ಥೆಯಾಗಿದ್ದು, ಇದರ ಮೌಲ್ಯ ಸುಮಾರು 5 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ.
ಇನ್ನು ರತನ್ ಟಾಟಾ ಅವರು, ತಮ್ಮ ಹೆಸರಲ್ಲಿದ್ದ 3,800 ಕೋಟಿ ರೂ. ಆಸ್ತಿಯಲ್ಲಿ, ಮೂರನೇ ಎರಡರಷ್ಟು ಪಾಲನ್ನು ಹೊಂದಿರುವ ಟಾಟಾ ಟ್ರಸ್ಟ್‌ಗಳಿಗೆ ಉಯಿಲು ಮಾಡಿದ್ದಾರೆ. ಅಂದರೆ ಟಾಟಾ ಸನ್ಸ್‌ನಿಂದ ಸುಮಾರು 60% ಲಾಭಾಂಶವನ್ನು ದತ್ತಿ ಪ್ರಯತ್ನಗಳಿಗೆ ಹಂಚಲಾಗುತ್ತದೆ. ಹೀಗಿರುವಾಗ ರತನ್ ಟಾಟಾ ಆಸ್ತಿಯಲ್ಲಿ ಬೇರಾರಿಗೂ ಪಾಲು ಸಿಗುವುದು ಕಷ್ಟ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ