ಗುರು ರವಿದಾಸ್ ದೇಗುಲ ನೆಲಸಮಗೊಳಿಸಿದ ಸ್ಥಳದಲ್ಲೇ ಭೂಮಿ ನೀಡಲು ಸಿದ್ದ ಎಂದ ಕೇಂದ್ರ

ನ್ಯಾಯಾಲಯದ ಆದೇಶದ ಮೇರೆಗೆ ಆಗಸ್ಟ್‌ನಲ್ಲಿ ಗುರು ರವಿದಾಸ್ ದೇವಾಲಯವನ್ನು ನೆಲಸಮಗೊಳಿಸಿದ ಸ್ಥಳದಲ್ಲಿ 200 ಚದರ ಮೀಟರ್ ವಿಸ್ತೀರ್ಣ ಭೂಮಿಯನ್ನು ಹಸ್ತಾಂತರಿಸಲು ಸಿದ್ಧ ಎಂದು ಕೇಂದ್ರ ಸರ್ಕಾರ ಶುಕ್ರವಾರದಂದು ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

Last Updated : Oct 18, 2019, 05:53 PM IST
ಗುರು ರವಿದಾಸ್ ದೇಗುಲ ನೆಲಸಮಗೊಳಿಸಿದ ಸ್ಥಳದಲ್ಲೇ ಭೂಮಿ ನೀಡಲು ಸಿದ್ದ ಎಂದ ಕೇಂದ್ರ  title=

ನವದೆಹಲಿ: ನ್ಯಾಯಾಲಯದ ಆದೇಶದ ಮೇರೆಗೆ ಆಗಸ್ಟ್‌ನಲ್ಲಿ ಗುರು ರವಿದಾಸ್ ದೇವಾಲಯವನ್ನು ನೆಲಸಮಗೊಳಿಸಿದ ಸ್ಥಳದಲ್ಲಿ 200 ಚದರ ಮೀಟರ್ ವಿಸ್ತೀರ್ಣ ಭೂಮಿಯನ್ನು ಹಸ್ತಾಂತರಿಸಲು ಸಿದ್ಧ ಎಂದು ಕೇಂದ್ರ ಸರ್ಕಾರ ಶುಕ್ರವಾರದಂದು ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ಕೇಂದ್ರದ ಪರವಾಗಿ ಹಾಜರಾದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು ಈ ವಿಚಾರವಾಗಿ ರವಿದಾಸ್ ದೇವಾಲಯದ ಭಕ್ತರು ಮತ್ತು ಸರ್ಕಾರಿ ಅಧಿಕಾರಿಗಳು ಸೇರಿದಂತೆ ಎಲ್ಲಾ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಿರುವುದಾಗಿ ಹೇಳಿದರು. 'ಅದೇ 200 ಚದರ ಮೀಟರ್ ವಿಸ್ತೀರ್ಣ ಭೂಮಿಯನ್ನು ದೇವಾಲಯದ ನಿರ್ಮಾಣಕ್ಕಾಗಿ ಭಕ್ತರ ಸಮಿತಿಯೊಂದಕ್ಕೆ ಹಸ್ತಾಂತರಿಸಲಾಗುವುದು' ಎಂದು ವೇಣುಗೋಪಾಲ್ ಹೇಳಿದರು. ದೇವಾಲಯ ಉರುಳಿಸುವಿಕೆಯ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಹತ್ತಿದ ಏಳು ಅರ್ಜಿದಾರರಲ್ಲಿ ಐವರು ಕೇಂದ್ರ ಸರ್ಕಾರದ ಈ ಪ್ರಸ್ತಾವನೆಯನ್ನು ಒಪ್ಪಿದ್ದಾರೆ ಎಂದು ತಿಳಿಸಿದರು.

ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ಎಸ್ ರವೀಂದ್ರ ಭಟ್ ಅವರ ನ್ಯಾಯಪೀಠವು ವೇಣುಗೋಪಾಲ್ ನೀಡಿದ ಪ್ರಸ್ತಾಪವನ್ನು ದಾಖಲಿಸಿ, ಸೋಮವಾರದೊಳಗೆ ಆಕ್ಷೇಪಣೆಗಳನ್ನು ಸಲ್ಲಿಸಲು ದೇವಾಲಯವನ್ನು ನಿರ್ಮಿಸಲು ಕೋರಿರುವ ಪಕ್ಷಗಳನ್ನು ಕೇಳಿದೆ. ಅಕ್ಟೋಬರ್ 4 ರಂದು, ದೆಹಲಿಯ ತುಘಲಕಾಬಾದ್ ಅರಣ್ಯ ಪ್ರದೇಶದ ಗುರು ರವಿದಾಸ್ ದೇವಾಲಯವನ್ನು ಪುನರ್ನಿರ್ಮಿಸಲು ಅನುಮತಿ ಕೋರಿ ಮನವಿಯಲ್ಲಿ ಭಾಗಿಯಾಗಿರುವ ಪಕ್ಷಗಳಿಗೆ ಉನ್ನತ ನ್ಯಾಯಾಲಯವು ದೇವಾಲಯಕ್ಕೆ ಉತ್ತಮ ಸ್ಥಳದ ಬಗ್ಗೆ ಸೌಹಾರ್ದಯುತ ಪರಿಹಾರದೊಂದಿಗೆ ಮರಳಿ ಬರಲು ಕೋರಿತ್ತು. ನ್ಯಾಯಾಲಯದ ನಿರ್ದೇಶನದ ಮೇರೆಗೆ ಗುರು ರವಿದಾಸ್ ದೇವಾಲಯವನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ನೆಲಸಮಗೊಳಿಸಿತ್ತು, ಇದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರಿ ಆಕ್ರೋಶ ಮತ್ತು ಪ್ರತಿಭಟನೆಗೆ ಕಾರಣವಾಯಿತು.

500 ವರ್ಷಗಳಷ್ಟು ಹಳೆಯದಾದ ದೇವಾಲಯವನ್ನು ನೆಲಸಮಗೊಳಿಸಿದ ನಂತರ, ರಾಜಕೀಯ ಪಕ್ಷಗಳು ಮತ್ತು ದಲಿತ ಸಮುದಾಯದ ಸದಸ್ಯರು ಪಂಜಾಬ್ ಮತ್ತು ದೆಹಲಿಯ ಹಲವಾರು ಸ್ಥಳಗಳಲ್ಲಿ ಪ್ರತಿಭಟನೆ ನಡೆಸಿದರು. ದಲಿತ ಹಕ್ಕುಗಳಿಗಾಗಿ ಪ್ರತಿಪಾದಿಸುವ ಪ್ರಮುಖ ಸಂಸ್ಥೆಗಳು ರಾಷ್ಟ್ರವ್ಯಾಪಿ ಬಂದ್‌ಗೆ ಕರೆ ನೀಡಿರುವುದನ್ನು ಬೆಂಬಲಿಸಿದ್ದವು.

 

Trending News