ಕೊಪ್ಪಳ: ಸ್ಟೋನ್ ಕ್ರಷರ್ (Stone Crusher) ನಲ್ಲಿ ಬ್ಲಾಸ್ಟ್ ಮಾಡಿದ ಪರಿಣಾಮ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರಿಗೆ ತಗುಲಿದ ಕಲ್ಲು ಘಟನೆ ಕೊಪ್ಪಳ (Koppal) ತಾಲೂಕು ಟಣಕನಕಲ್ ಗ್ರಾಮದಲ್ಲಿ ಜರುಗಿದೆ.
ಬ್ಲಾಸ್ಟ್ ಮಾಡುವುದನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯಲು ರೈತರು ಮುಂದಾಗಿದ್ದಾರೆ. ಈ ವೇಳೆ ರೈತರಿಗೆ ಕಲ್ಲು ತಗುಲಿವೆ. ಅಲ್ಲದೆ ಕಲ್ಲುಗಳು ಹೊಲದಲ್ಲಿಯೂ ಬಿದ್ದಿವೆ. ಆದರೆ ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ.
ಅಕ್ಕಪಕ್ಕದ ಜಮೀನಿನ ರೈತರ ವಿರೋಧದ ನಡುವೆಯೂ ಸ್ಟೋನ್ ಕ್ರಷರ್ ನಡೆಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಪೊಲೀಸ್ ಠಾಣೆಗೆ (Police Station) ತೆರಳಿ ರೈತರು ಸಂಕಷ್ಟ ತೋಡಿಕೊಂಡಿದ್ದಾರೆ. ಘಟನೆ ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಸ್ಟೋನ್ ಕ್ರಷರ್ ನಲ್ಲಿ ಬ್ಲಾಸ್ಟ್.. ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರಿಗೆ ತಗುಲಿದ ಕಲ್ಲು#Stonecrusher #Koppal #Blast #Zeekannadanews pic.twitter.com/Pq0ENAjcyX
— Zee Kannada News (@ZeeKannadaNews) January 12, 2022
ಇದನ್ನೂ ಓದಿ: "ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಕೊರೊನಾ ಯಾತ್ರೆ ಆಗುವುದು ಬೇಡ"- ಗೃಹ ಸಚಿವ ಆರಗ ಜ್ಞಾನೇಂದ್ರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.