ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 360 ಡಿಗ್ರಿ ತನಿಖೆ ನಡೆಸಬೇಕೆಂದು ಸಹೋದರ ಇಂದ್ರಜಿತ್ ಲಂಕೇಶ್ ಆಗ್ರಹಿಸಿದ್ದಾರೆ.
ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಇಂದ್ರಜಿತ್, "ಇಲ್ಲಿ, 360 ಡಿಗ್ರಿ ತನಿಖೆ ನಡೆಯಬೇಕು, ಹಿಂದುತ್ವದ ಸಂಘಟನೆಗಳು ಎನ್ನುವುದು ಇನ್ನು ಹೆಚ್ಚಿನ ಅನುಮಾನ ಸೃಷ್ಟಿಸಿದೆ. ಆದ್ದರಿಂದ ಈ ವಿಚಾರವಾಗಿ ಸ್ಪಷ್ಟತೆಯನ್ನು ಹೊಂದಬೇಕು ಎಂದು ತಿಳಿಸಿದರು. ಇನ್ನು ಹಿಂದೂ ಸಂಘಟನೆಗಳ ಕುರಿತಾಗಿ ಮಾತನಾಡುತ್ತಾ ಅವು ಸಾಂವಿಧಾನಿಕ ಸಂಘಟನೆಗಳಲ್ಲವೇ ? ಎಂದು ಪ್ರಶ್ನಿಸಿದರು. ಈ ಪ್ರಕರಣದ ವಿಚಾರವಾಗಿ ಸ್ಪಷ್ಟ ತೀರ್ಮಾನ ಇರಬೇಕು ಎಂದು ತಿಳಿಸಿದರು.
ತನಿಖೆಯ ಕುರಿತಾಗಿ ಆಶಾವಾದ ವ್ಯಕ್ತಪಡಿಸಿದ ಇಂದ್ರಜೀತ್, ರಾಜಕಾರಣಿಗಳು ಮತ್ತು ಇತರರು ಈ ಪ್ರಕರಣಕ್ಕೆ ರಾಜಕೀಯ ಬಣ್ಣ ಬಳಿಯಬಾರದೆಂದು ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ಗೌರಿಗೆ ಭದ್ರತೆಯನ್ನು ಒದಗಿಸಲು ವಿಫಲವಾದ ಬಗ್ಗೆ ಈ ಹಿಂದಿನ ಸರ್ಕಾರದ ಮೇಲೆ ತರಾಟೆ ತೆಗೆದುಕೊಂಡರು.