ದಾವಣಗೆರೆ: ಅಪರಾಧಿ ಜಗತ್ತಿಗೆ ನಡುಕ ಹುಟ್ಟಿಸಿ, ಸಮಾಜದಲ್ಲಿ ಶಾಂತಿ, ನ್ಯಾಯ ಸುವ್ಯವಸ್ತೆ ಕಾಪಾಡಲು, ಪೊಲೀಸ್ ಸಿಬ್ಬಂದಿ ಶಪಥ ಕೈಗೊಳ್ಳಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕರೆ ನೀಡಿದ್ದಾರೆ. ಇಂದು ದಾವಣಗೆರೆ ಜಿಲ್ಲಾ ಪೊಲೀಸ್ ಕಾರ್ಯ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನ್ಯಾಯ ಅರಸಿ ಪೊಲೀಸ್ ಠಾಣೆಗೆ ಬರುವ ಮುಗ್ದ ಜನತೆಗೆ ಆಸರೆಯಾಗಿ ನಿಲ್ಲಬೇಕು ಎಂದು ಹೇಳಿದರು. ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗೆ ಮಹತ್ತರ ಜವಾಬ್ದಾರಿ ಇದ್ದು, ಇದನ್ನು ಸಮರ್ಥವಾಗಿ ನಿಭಾಯಿಸಲು ಸರಕಾರ ಎಲ್ಲಾ ರೀತಿಯ ಸಹಕಾರ ನೀಡುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: ಸಿಲಿಕಾನ್ಸಿಟಿಯಲ್ಲಿ ಹೆಚ್ಚುತ್ತಿದೆ ಸೈಬರ್ ಕ್ರೈಂ.. 150 ದಿನಗಳಲ್ಲಿ 3500ಕ್ಕಿಂತ ಹೆಚ್ಚು ಕೇಸ್
ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಸಿ.ಬಿ ರಿಷ್ಯಂತ್ ಮಾತನಾಡಿ, ಜಿಲ್ಲೆಯಲ್ಲಿ ಇದುವರೆಗೆ ಸುಪ್ರೀಂ ಕೋರ್ಟಿನ ಆದೇಶ ಪಾಲನೆ ಬಗ್ಗೆ ಇದುವರೆಗೆ ಒಟ್ಟು 327 ಅರ್ಜಿಗಳನ್ನು ಮಸೀದಿಗಳು ಲೌಡ್ ಸ್ಪೀಕರ್ ಅಳವಡಿಕೆ ಬಗ್ಗೆ ಸಲ್ಲಿಸಿದ್ದು, 167 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ.
ಜಿಲ್ಲೆಯಲ್ಲಿ ದೇವಸ್ಥಾನ ಮತ್ತು ಚರ್ಚ್ ಗಳಿಂದ ತಲಾ ಎರಡು ಅರ್ಜಿಗಳು ಲೌಡ್ ಸ್ಪೀಕರ್ ಅಳವಡಿಕೆಗೆ ಅವಕಾಶ ಕೋರಿದ್ದು ಮೂರು ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ, ಎಂದು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ 3 ರಾಷ್ಟ್ರೀಯ ಹಾಗೂ 12 ರಾಜ್ಯ ಹೆದ್ದಾರಿಗಳು ಹಾದಹೋಗುತ್ತವೆ ಹಾಗೂ ಕಳೆದ ಮೂರು ವರ್ಷಗಳಲ್ಲಿ 576 ದೊಡ್ಡ ಅಪಘಾತ ಪ್ರಕರಣ ಗಳು ನಡೆದಿದ್ದು 629 ಮಂದಿ ಸಾವಿಗೀಡಗಿದ್ದಾರೆ ಮತ್ತು 3046 ಜನ ತೀವ್ರ ಗಾಯಗೊಂಡಿದ್ದಾರೆ ಎಂದು ತಿಳಿಸಿದರು. ಸಂಚಾರಿ ನಿಯಮ ಉಲ್ಲಂಘಿಸಿದ ಪ್ರಕರಣದಲ್ಲಿ ಕಳೆದ ಸಾಲಿನಲ್ಲಿ ಒಟ್ಟು, ರೂ 2.39 ಕೋಟಿ ದಂಡದ ಹಣವನ್ನು ವಸೂಲಿ ಮಾಡಿದ್ದು, ಪ್ರಸ್ತುತ ಸಾಲಿನಲ್ಲಿ 39 ಲಕ್ಷ ರೂಪಾಯಿ ಗಳನ್ನು ವಸೂಲು ಆಗಿದೆ ಎಂದು ಹೇಳಿದರು.
ಇದನ್ನೂ ಓದಿ: ಮೈಸೂರಲ್ಲಿ ಮರ್ಯಾದಾ ಹತ್ಯೆ: ಅನ್ಯ ಜಾತಿಯವನ ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಂದ ತಂದೆ!
ಜಿಲ್ಲೆಯಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದವನ್ನು ಸಮರ್ಥವಾಗಿ ನಿಭಾಯಿಸ ಲಾಗಿದ್ದು, ಸುಮಾರು 37 ಮಂದಿಯನ್ನು ಈ ಸಂಬಂಧ ಬಂಧಿಸಲಾಗಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಅಕ್ರಮ ಗೋವುಗಳ ಸಾಗಾಟ ಹಾಗೂ ಹತ್ಯೆ ಪ್ರಕರಣಗಳಿಗೆ ಕಡಿವಾಣ ಬೀಳಬೇಕು ಎಂದು ಸೂಚಿಸಿದ ಸಚಿವರು, ಅಕ್ರಮ ಇಸ್ಪೀಟ್ ದಂಧೆ, ಮರಳು ಸಾಗಾಟ, ಮಟಕಾ ದಂಧೆ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಸಮರ್ಥ ಪೋಲಿಸಿಂಗ್ ನಿರ್ವಹಣೆಗಾಗಿ ಬೀಟ್ ವ್ಯವಸ್ಥೆ ಬಲ ಪಡಿಸಬೇಕು ಎಂದೂ ಸಚಿವರು ಸೂಚಿಸಿದರು. ಜನಸ್ನೇಹಿ 112 ಸೇವೆಯ ಲಭ್ಯತೆ ಬಗ್ಗೆ ಹೆಚ್ಚು ಪ್ರಚಾರ ನೀಡಬೇಕಾದ ಅಗತ್ಯವಿದೆ ಎಂದು ಸಚಿವರು ಅಭಿಪ್ರಾಯ ವ್ಯಕ್ತ ಪಡಿಸಿದರು. ಕೇಂದ್ರ ವಲಯ ಪೊಲೀಸ್ ಇನ್ಸಪೆಕ್ಟರ್ ಜನರಲ್ ಶ್ರೀ ತ್ಯಾಗರಾಜನ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.