Govt Job Alert: ಹೊಸದಾಗಿ ಪೊಲೀಸ್ ಇಲಾಖೆಯ 4,115 ಕಾನ್ಟೇಬಲ್ & PSI ಹುದ್ದೆಗೆ ಅಧಿಸೂಚನೆ ಹೊರಡಿಸಲಾಗಿದೆ. ಗೃಹ ಇಲಾಖೆಯ 1,872 ಹುದ್ದೆಗಳಿಗೆ ಶೀಘ್ರವೇ ಅಧಿಸೂಚನೆ ಪ್ರಕಟವಾಗುವ ನಿರೀಕ್ಷೆ ಇದೆ.
ಚಾಮರಾಜನಗರದಲ್ಲಿ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪದ್ಮಿನಿ ಸಾಹು ಅವರನ್ನು ಬೆಂಗಳೂರಿಗೆ ವರ್ಗ ಮಾಡಲಾಗಿದ್ದು, ಅವರ ಸ್ಥಾನಕ್ಕೆ ಈಗ ಡಾ.ಬಿ.ಟಿ.ಕವಿತಾ ಅವರನ್ನು ನಿಯೋಜಿಸಲಾಗಿದೆ. ಕವಿತಾ ಅವರು ನಾಗರಿಕ ಹಕ್ಕು ನಿರ್ದೇಶನಾಲಯದ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಬೆಂಗಳೂರಿನ ಗೊರಗುಂಟೆ ಪಾಳ್ಯ ಸಿಗ್ನಲ್ನಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಪಿಎಸ್ಐ ಶಾಂತಪ್ಪ ಅವರು ಟಾಯ್ಲೆಟ್ ನಿರ್ಮಿಸಿದ್ದರು. ಸ್ವಂತ ಖರ್ಚಿನಲ್ಲಿ ಟಾಯ್ಲೆಟ್ ನಿರ್ಮಿಸುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದರು.
SSC Recruitment : ಕೇಂದ್ರ ಸರ್ಕಾರದ ಸ್ಟಾಫ್ ಸೆಲೆಕ್ಷನ್ ಕಮಿಷನ್ ಖಾಲಿ ಇರುವ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಈ ಹಿನ್ನೆಲೆ 4187 'ಸಬ್ ಇನ್ಸ್ ಪೆಕ್ಟರ್' ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ಖಾಸಗಿ ಸಂಸ್ಥೆಯೊಂದರ ಎಫ್ಎಸ್ಎಲ್ ವರದಿಯನ್ನು ತಂದಿಟ್ಟು ರಾಜ್ಯದ ಜನರ ದಿಕ್ಕು ತಪ್ಪಿಸಿದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಕೊಪ್ಪಳ ಜಿಲ್ಲಾ ಪೊಲೀಸ್ ಘಟಕದಲ್ಲಿ ಖಾಲಿ ಇರುವ ಸಿಪಿಸಿ/ಮಪಿಸಿ (ಕೆಕೆ) ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಹೊಂದಿದ ಅಭ್ಯರ್ಥಿಗಳಿಗೆ 1:5 ಅನುಪಾತದ ಅನುಸಾರ ಮುಂದಿನ ದೇಹದಾರ್ಢ್ಯತೆ ಮತ್ತು ಸಹಿಷ್ಣುತೆ ಪರೀಕ್ಷೆಯನ್ನು ಮಾರ್ಚ್ 04 ರಂದು ಕೊಪ್ಪಳ ನಗರದ ಗದಗ ರಸ್ತೆಯಲ್ಲಿರುವ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಸಲಾಗುವುದು.
New Year Guidelines: ಬೆಂಗಳೂರು ನಗರ ಪೊಲೀಸರ ಜೊತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಿದ್ದಪಡಿಸಿರುವ ಮಾರ್ಗಸೂಚಿ 2023ರ ಕಡೆಯ ದಿನವಾದ ಡಿಸೆಂಬರ್ 31ರ ರಾತ್ರಿ ಜಾರಿಗೆ ಬರಲಿದೆ. ಈ ಮಾರ್ಗಸೂಚಿಗಳು ಯಾವ ರೀತಿ ಪಾಲನೆಯಾಗುತ್ತಿವೆ ಎಂಬುದನ್ನು ತಿಳಿಯಲು, ಸಂಭ್ರಮಾಚರಣೆ ಗುಂಗಿನಲ್ಲಿರುವವರ ಮೇಲೆ ಹದ್ದಿನ ಕಣ್ಣಿಡಲು ನಗರದಾದ್ಯಂತ ಈ ಬಾರೀ ಹೆಚ್ಚು ಸಿಸಿಟಿವಿ ಅಳವಡಿಸಲಾಗುತ್ತಿದೆ.
ಪೊಲೀಸ್ ಇಲಾಖೆಯಲ್ಲಿ ಒಂದೇ ಕುಟುಂಬದ ಹಲವರು ಕರ್ತವ್ಯ ನಿರ್ವಹಿಸುವುದನ್ನು ನೋಡಿದ್ದೇವೆ.ಆದರೆ ಪೊ ಲೀಸ್ ಅಧಿಕಾರಿಯಾಗಿರುವ ಸ್ವತಃ ತಂದೆಯಿಂದಲೇ ಎಸ್ಐ ಆಗಿ ಅಧಿಕಾರ ಸ್ವೀಕರಿಸುವ ಅವಕಾಶ ಕೆಲವೇ ಕೆಲವು ಮಕ್ಕಳಿಗೆ ಲಭ್ಯವಾಗುತ್ತದೆ. ಅಂತಹ ಒಂದು ಭಾವನಾತ್ಮಕ ಸನ್ನಿವೇಶಕ್ಕೆ ಮಂಡ್ಯ ನಗರದ ಸೆಂಟ್ರಲ್ ಪೊಲೀಸ್ ಠಾಣೆ ಸಾಕ್ಷಿಯಾಗಿದೆ. ಅರೆ!! ಏನಿದು ಇಂಟ್ರಸ್ಟಿಂಗ್ ಸ್ಟೋರಿ ಅಂತೀರಾ ನೀವೆ ನೋಡಿ
ಬೆಂಗಳೂರು ನಗರ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ರನ್ನು ಕೆಎಸ್ಆರ್ ಪಿ ಐಜಿಪಿಯಾಗಿ ವರ್ಗಾವಣೆ ಮಾಡಿ ತೆರವಾದ ಹುದ್ದೆಗೆ ಬೆಳಗಾವಿ ಉತ್ತರ ವಲಯ ಐಜಿಯಾಗಿದ್ದ ಸತೀಶ್ ಕುಮಾರ್ ಅವರನ್ನು ನಿಯೋಜಿಸಲಾಗಿದೆ.
Police Emergency Mission: ತುರ್ತು ಸಹಾಯವಾಣಿಯೊಂದಿಗೆ ಜನರ ರಕ್ಷಣೆಗೆ ಪೊಲೀಸ್ ಇಲಾಖೆ ಮುಂದಾಗಿದೆ. ಸಂಕಷ್ಟದ ಸಮಯದಲ್ಲಿ ನಿಂತ ಸ್ಥಳದಿಂದಲೇ ಪೊಲೀಸರಿಗೆ ಮಾಹಿತಿ ನೀಡಲು ಈ ತುರ್ತು ಸಹಾಯವಾಣಿ ಉಪಯೋಗವಾಗಲಿದೆ.
ಎಲ್ಲಾ ಇಲಾಖೆಯಲ್ಲಿ ಇರುವಂತೆ ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ಸರ್ವೇ ಸಾಮಾನ್ಯವಾಗಿದೆ. ಆದರೆ, ವರ್ಷದಿಂದ ವರ್ಷಕ್ಕೆ ಅಧಿಕಾರ ಪ್ರಭಾವ ಬಳಸಿ ಅಕ್ರಮ ಕೂಟದಲ್ಲಿ ಹೆಚ್ಚು ಪೊಲೀಸರು ಭಾಗಿಯಾಗುತ್ತಿರುವುದು ಕಳವಳಕಾರಿಯಾಗಿದೆ.
ಈ ಹಿಂದೆ ಒಂದೇ ಕಡೆ ಕೆಲಸ ಮಾಡುವ ಅವಕಾಶವಿತ್ತು. ಬಳಿಕ ನಾನಾ ಕಾರಣಗಳಿಂದ ಸ್ಥಗಿತವಾಗಿತ್ತು. ಹೀಗಾಗಿ ಮತ್ತೆ ಅನುಮತಿ ನೀಡಲು ಕೇಳಿದ್ದು ಸರ್ಕಾರ ಮನವಿ ಪೂರೈಸುವ ಸಾಧ್ಯತೆಯಿದೆ ಎಂದು ಡಿಜಿಪಿ ಪ್ರವೀಣ್ ಸೂದ್ ಆಶ್ವಾಸನೆ ನೀಡಿದರು.
ಅಪರಾಧಿ ಜಗತ್ತಿಗೆ ನಡುಕ ಹುಟ್ಟಿಸಿ, ಸಮಾಜದಲ್ಲಿ ಶಾಂತಿ, ನ್ಯಾಯ ಸುವ್ಯವಸ್ತೆ ಕಾಪಾಡಲು, ಪೊಲೀಸ್ ಸಿಬ್ಬಂದಿ ಶಪಥ ಕೈಗೊಳ್ಳಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕರೆ ನೀಡಿದ್ದಾರೆ. ಇಂದು ದಾವಣಗೆರೆ ಜಿಲ್ಲಾ ಪೊಲೀಸ್ ಕಾರ್ಯ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನ್ಯಾಯ ಅರಸಿ ಪೊಲೀಸ್ ಠಾಣೆಗೆ ಬರುವ ಮುಗ್ದ ಜನತೆಗೆ ಆಸರೆಯಾಗಿ ನಿಲ್ಲಬೇಕು ಎಂದು ತಿಳಿ ಹೇಳಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.