ರಾಜ್ಯ ಪೊಲೀಸರಿಗೆ ದೀಪಾವಳಿ ಗಿಫ್ಟ್: ವೇತನ ಹೆಚ್ಚಳ ಮಾಡಿದ ಸಿಎಂ

ಪೋಲೀಸ್ ಇಲಾಖೆಗೆ ಪೇದೆ ಹುದ್ದೆಗೆ ನೇಮಕವಾಗುವ ಅಭ್ಯರ್ಥಿಗಳಿಗೆ ಎಲ್ಲಾ ಭತ್ಯೆ ಸೇರಿ 30,427 ರೂ. ಬದಲಿಗೆ 34,267 ರೂ. ಸಿಗಲಿದೆ. ಅಲ್ಲಿಗೆ 4 ಸಾವಿರ ರೂ.ಗಳ ವೇತನ ಹೆಚ್ಚಳ ಮಾಡಲಾಗಿದೆ. 

Last Updated : Oct 20, 2019, 06:47 AM IST
ರಾಜ್ಯ ಪೊಲೀಸರಿಗೆ ದೀಪಾವಳಿ ಗಿಫ್ಟ್: ವೇತನ ಹೆಚ್ಚಳ ಮಾಡಿದ ಸಿಎಂ title=

ಬೆಂಗಳೂರು: ಪೊಲೀಸ್ ಸಿಬ್ಬಂದಿ ವರ್ಗದ ಬಹುದಿನದ ಬೇಡಿಕೆಯಾದ ವೇತನ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಅಸ್ತು ಎಂದಿದ್ದು, ದೀಪಾವಳಿಗೆ ಭರ್ಜರಿ ಉಡುಗೊರೆ ನೀಡಿದೆ. 

ರಾಜ್ಯ ಪೋಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದ ವೇತನ ಪರಿಷ್ಕರಣೆ ಸಂಬಂಧ ಎಡಿಜಿಪಿ ರಾಗವೇಂದ್ರ ಔರಾದ್ಕರ್ ಅಧ್ಯಕ್ಷತೆಯ ಸಮಿತಿ ಸಲ್ಲಿಸಿದ ವರದಿಯ ಆಧಾರದ ಮೇಲೆ ವೇತನ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 

ಇದರನ್ವಯ ಪೋಲೀಸ್ ಇಲಾಖೆಗೆ ಪೇದೆ ಹುದ್ದೆಗೆ ನೇಮಕವಾಗುವ ಅಭ್ಯರ್ಥಿಗಳಿಗೆ ಎಲ್ಲಾ ಭತ್ಯೆ ಸೇರಿ 30,427 ರೂ. ಬದಲಿಗೆ 34,267 ರೂ. ಸಿಗಲಿದೆ. ಅಲ್ಲಿಗೆ 4 ಸಾವಿರ ರೂ.ಗಳ ವೇತನ ಹೆಚ್ಚಳ ಮಾಡಲಾಗಿದೆ. ಅಲ್ಲದೆ ಪ್ರಸ್ತುತ ಸೇವೆಯಲ್ಲಿರುವ ಪೋಲೀಸ್ ಪೇದೆಗಳಿಗೆ  23,500-47,650, ಮುಖ್ಯಪೇದೆ- 27,650-52,650, ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌-30,350-58,250, ಪೊಲೀಸ್‌ ಇನ್‌ಸ್ಪೆಕ್ಟರ್‌- 43,100-83,100, ಎಸ್‌ಪಿ (ಐಪಿಎಸ್‌ಯೇತರ)- 70,850- 1,07,100 ಪರಿಷ್ಕೃತ ವೇತನ ದೊರೆಯಲಿದೆ. 

ಈ ಬಗ್ಗೆ ಮಾಹಿತಿ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರುಂ ಔರಾದ್ಕರ್ ವರದಿಯಲ್ಲಿರುವಂತೆ ಪೊಲೀಸ್ ಸಿಬ್ಬಂದಿ ವೇತನ ಪರಿಷ್ಕರಣೆ ಮಾಡಲಾಗಿದ್ದು, ಕೂಡಲೇ ಜಾರಿಗೆ ಬರಲಿದೆ ಎಂದಿದ್ದಾರೆ. 

Trending News