Planet Transit 2022 : ಇಂದು ಬುಧ ಗ್ರಹವು ತನ್ನದೇ ಆದ ರಾಶಿಚಕ್ರದ ಕನ್ಯಾರಾಶಿಯಲ್ಲಿನ್ನು ಪ್ರವೇಶಿಸಿದೆ. ಇನ್ನು ಅಕ್ಟೋಬರ್ 26 ರವರೆಗೆ ಬುಧ ಕನ್ಯಾರಾಶಿಯಲ್ಲಿಯೇ ಇರಲಿದ್ದಾನೆ. ಇದಕ್ಕೂ ನಾಲ್ಕು ದಿನಗಳ ಹಿಂದೆ, ಗ್ರಹಗಳ ರಾಜನಾದ ಸೂರ್ಯನು ರಾಶಿಚಕ್ರವನ್ನು ಬದಲಿಸಿ ಸ್ವರಾಶಿ ಸಿಂಹ ರಾಶಿಯನ್ನು ಪ್ರವೇಶಿಸಿದ್ದನು. ಇದಲ್ಲದೆ, ಈ ಸಮಯದಲ್ಲಿ ಮಕರ ರಾಶಿಯಲ್ಲಿ ನ್ಯಾಯದ ದೇವದಾರ ಶನಿ ಕೂಡಾ ನೆಲೆಸಿದ್ದಾನೆ. ಈ ರೀತಿಯಾಗಿ, ಮೂರು ಪ್ರಮುಖ ಗ್ರಹಗಳು ತಮ್ಮದೇ ಆದ ರಾಶಿಯಲ್ಲಿ ಇರುವುದು ಅಪರೂಪದ ಸ್ಥಿತಿಯನ್ನು ಸೃಷ್ಟಿಸುತ್ತಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯ, ಬುಧ ಮತ್ತು ಶನಿ ತಮ್ಮ ಸ್ವಂತ ರಾಶಿಗಳಲ್ಲಿ ಒಟ್ಟಿಗೆ ಇರುವುದು ವಿಶೇಷ ಎಂದು ಹೇಳಲಾಗುತ್ತದೆ.
ಬುಧ-ಸೂರ್ಯ-ಶನಿ ಬೆಳಗಲಿದ್ದಾರೆ ಅದೃಷ್ಟ :
ಮಿಥುನ ರಾಶಿ : ಮಿಥುನ ರಾಶಿಯವರಿಗೆ ಈ ಗ್ರಹ ಸ್ಥಾನಗಳು ತುಂಬಾ ಶುಭಕರ. ಸಿಂಹರಾಶಿಯಲ್ಲಿ ಸೂರ್ಯನು ಇರುವಾಗ ವೃತ್ತಿ ಮತ್ತು ವ್ಯವಹಾರದಲ್ಲಿ ಉತ್ತಮ ಯಶಸ್ಸು ಸಿಗಲಿದೆ. ಈ ಹೊತ್ತಿನಲ್ಲಿ ಅವರ ಶೌರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ರಾಜಕೀಯದಲ್ಲಿ ಸಕ್ರಿಯರಾಗಿರುವ ಜನರಿಗೆ ಉತ್ತಮ ಯಶಸ್ಸು ಸಿಗಲಿದೆ. ಸಮಾಜದಲ್ಲಿ ಗೌರವ ಹೆಚ್ಚಾಗುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಆದರೆ ಆರೋಗ್ಯದ ಬಗ್ಗೆ ಮಾತ್ರ ಸ್ವಲ್ಪ ಎಚ್ಚರಿಕೆ ಅಗತ್ಯ.
ಇದನ್ನೂ ಓದಿ : Vastu Tips: ತೆಂಗಿನ ಕಾಯಿ ತಾಯಿ ಲಕ್ಷ್ಮಿಯ ಸ್ವರೂಪ, ಯಶಸ್ಸಿಗಾಗಿ ಈ ವಾಸ್ತು ಸಲಹೆಗಳನ್ನು ಅನುಸರಿಸಿ
ಕರ್ಕಾಟಕ ರಾಶಿ: ಸೂರ್ಯ, ಶನಿ ಮತ್ತು ಬುಧನ ಸ್ಥಾನದಲ್ಲಾಗುವ ಬದಲಾವಣೆ ಕರ್ಕ ರಾಶಿಯವರಿಗೆ ಲಾಭವನ್ನು ನೀಡುತ್ತದೆ. ಉದ್ಯೋಗಿಗಳ ಸಂಬಳ ಹೆಚ್ಚಾಗಬಹುದು. ವ್ಯಾಪಾರಸ್ಥರಿಗೆ ಲಾಭವಾಗಲಿದೆ. ಬಡ್ತಿ ಪಡೆಯಬಹುದು. ನ್ಯಾಯಾಲಯದಲ್ಲಿ ಸಿಲುಕಿರುವ ಪ್ರಕರಣಗಳು ಇತ್ಯರ್ಥವಾಗಲಿವೆ. ಹೂಡಿಕೆ ಮಾಡಲು ಮತ್ತು ಉಳಿಸಲು ಇದು ಉತ್ತಮ ಸಮಯ.
ತುಲಾ ರಾಶಿ : ತುಲಾ ರಾಶಿಯವರಿಗೆ ಪ್ರಸ್ತುತ ಸೂರ್ಯ, ಬುಧ ಮತ್ತು ಶನಿಯ ಸ್ಥಾನವು ಮಂಗಳಕರವಾಗಿದೆ. ಪ್ರತಿಯೊಂದು ಕೆಲಸದಲ್ಲಿಯೂ ಅದೃಷ್ಟದ ಬೆಂಬಲ ಸಿಗುತ್ತದೆ. ವಿದೇಶ ಪ್ರಯಾಣಕ್ಕೆ ಯೋಜನೆ ರೂಪಿಸಲಾಗುವುದು. ವಿದೇಶಗಳಿಗೆ ಸಂಬಂಧಿಸಿದ ಕೆಲಸ ಮಾಡುವವರಿಗೆ ಲಾಭವಾಗಲಿದೆ. ಉದ್ಯೋಗಾಕಾಂಕ್ಷಿಗಳು ಹೊಸ ಉದ್ಯೋಗ ಪ್ರಸ್ತಾಪವನ್ನು ಪಡೆಯಬಹುದು.
ಇದನ್ನೂ ಓದಿ : Surya Grahan : ಈ ದಿನ ವರ್ಷದ ಕೊನೆಯ ಸೂರ್ಯಗ್ರಹಣ : ಇದು ದೀಪಾವಳಿ-ಗೋಪೂಜೆ ಮೇಲೆ ಪರಿಣಾಮವೆ?
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.