Mauni Amavasya: ‘ಕಾಳಸರ್ಪ ದೋಷ’ ನಿವಾರಣೆಗೆ ಇಲ್ಲಿದೆ ನೋಡಿ ಪರಿಹಾರ

ಮೌನಿ ಅಮಾವಾಸ್ಯೆ 2022: ಮಾಘ ಮಾಸದ ಅಮಾವಾಸ್ಯೆಯಂದು ಮೌನಿ ಅಮವಾಸ್ಯೆಯನ್ನು ನಡೆಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕಾಳಸರ್ಪ ದೋಷವನ್ನು ತೊಡೆದುಹಾಕಲು ಈ ದಿನ ಬಹಳ ವಿಶೇಷವಾಗಿದೆ.

Written by - Puttaraj K Alur | Last Updated : Jan 30, 2022, 12:07 PM IST
  • ಮೌನಿ ಅಮವಾಸ್ಯೆಯಂದು ಪವಿತ್ರ ನದಿ ಅಥವಾ ಮನೆಯಲ್ಲಿ ಗಂಗಾಜಲವಿರುವ ನೀರಿನಿಂದ ಸ್ನಾನ ಮಾಡಿ
  • ಮೌನಿ ಅಮವಾಸ್ಯೆಯಂದು ಬೆಳ್ಳಿಯ ನಾಗ-ಸರ್ಪಗಳನ್ನು ಪೂಜಿಸುವುದರಿಂದ ಕಾಳಸರ್ಪ ದೋಷ ಶಮನವಾಗುತ್ತದೆ
  • ಮೌನಿ ಅಮಿವಾಸ್ಯೆಯ ದಿನದಂದು ಸಂಜೆ ತುಳಸಿಯ ಕೆಳಗೆ ತುಪ್ಪದ ದೀಪವನ್ನು ಬೆಳಗಿಸಿರಿ
Mauni Amavasya: ‘ಕಾಳಸರ್ಪ ದೋಷ’ ನಿವಾರಣೆಗೆ ಇಲ್ಲಿದೆ ನೋಡಿ ಪರಿಹಾರ  title=
ಕಾಳಸರ್ಪ ದೋಷ ತೊಡೆದುಹಾಕಲು ಏನು ಮಾಡಬೇಕು?

ನವದೆಹಲಿ: ಮಾಘ ಕೃಷ್ಣ ಪಕ್ಷದ ಅಮವಾಸ್ಯೆಯನ್ನು ಮೌನಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. 2022ರಲ್ಲಿ ಮೌನಿ ಅಮವಾಸ್ಯೆ ಫೆಬ್ರವರಿ 1ರ ಮಂಗಳವಾರ ಬರುತ್ತದೆ. ಮೌನಿ ಅಮಾವಾಸ್ಯೆಯು ಕಾಳಸರ್ಪ ದೋಷ(Kaal Sarp Dosh)ವನ್ನು ತೊಡೆದುಹಾಕಲು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಜಾತಕದಲ್ಲಿ ಕಾಳಸರ್ಪ ದೋಷ ಹೊಂದಿರುವ ಜನರ ಜೀವನವು ತುಂಬಾ ಕಷ್ಟಕರ ಮತ್ತು ಹೋರಾಟಗಳಿಂದ ಕೂಡಿರುತ್ತದೆ. ಇಂತಹ ಜನರ ಯಾವುದೇ ಕೆಲಸವು ಯಶಸ್ವಿಯಾಗಿ ಪೂರ್ಣಗೊಳ್ಳುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈ ದೋಷವನ್ನು ತೊಡೆದುಹಾಕಲು ಏನು ಮಾಡಬೇಕೆಂಬುದರ ಬಗ್ಗೆ ತಿಳಿಯಿರಿ.  

ಕಾಳಸರ್ಪ ದೋಷ ತೊಡೆದುಹಾಕಲು ಏನು ಮಾಡಬೇಕು?  (Mauni Amavasya 2022 Kaal Sarp Dosh Tips)

* ಮೌನಿ ಅಮವಾಸ್ಯೆಯ ದಿನ(Mauni Amavasya 2022)ದಂದು ಪವಿತ್ರ ನದಿಯಲ್ಲಿ ಅಥವಾ ಮನೆಯಲ್ಲಿ ಗಂಗಾಜಲವಿರುವ ನೀರಿನಿಂದ ಸ್ನಾನ ಮಾಡಿ. ಇದರ ನಂತರ ಶಿವನನ್ನು ಆರಾಧಿಸಿ. ಶಿವನ ಪೂಜೆಯ ಸಮಯದಲ್ಲಿ ಶಿವ ತಾಂಡವ ಸ್ತೋತ್ರವನ್ನು ಪಠಿಸುವುದು ಲಾಭದಾಯಕ. ಶಿವನ ಕೃಪೆಯಿಂದ ಕಾಲ ಸರ್ಪದೋಷ ನಿವಾರಣೆಯಾಗುತ್ತದೆ.

ಇದನ್ನೂ ಓದಿ: Kitchen Tips : ಮನೆಯಲ್ಲಿ ಬಾಣಲೆ ಬಳಸುವಾಗ ಮಾಡದಿರಿ ಈ ತಪ್ಪುಗಳನ್ನ! ಇಲ್ಲದಿದ್ದರೆ ತಪ್ಪಿದಲ್ಲ ಆರ್ಥಿಕ ಸಮಸ್ಯೆ 

* ಮೌನಿ ಅಮವಾಸ್ಯೆಯ ದಿನದಂದು ಬೆಳ್ಳಿಯ ನಾಗ ಮತ್ತು ಸರ್ಪಗಳನ್ನು ಪೂಜಿಸುವುದರಿಂದ ಕಾಳಸರ್ಪ ದೋಷ ಶಮನವಾಗುತ್ತದೆ. ಪೂಜೆಯ ನಂತರ ಬಿಳಿ ಹೂವುಗಳೊಂದಿಗೆ ನಾಗ-ನಾಗಿಣಿ(Naaga-Naagini) ಈ ರೂಪಗಳನ್ನು ನದಿಯಲ್ಲಿ ಹಾಕಬೇಕು. ಹೀಗೆ ಮಾಡುವುದರಿಂದ ಕಾಳಸರ್ಪ ದೋಷದಿಂದ ಮುಕ್ತಿ ಸಿಗುತ್ತದೆ.

* ಮೌನಿ ಅಮಿವಾಸ್ಯೆಯ ದಿನದಂದು ಸಂಜೆ ತುಳಸಿಯ ಕೆಳಗೆ ತುಪ್ಪದ ದೀಪವನ್ನು ಬೆಳಗಿಸಿ. ಇದರ ನಂತರ ತುಳಸಿ ಗಿಡಕ್ಕೆ 108 ಬಾರಿ ಪ್ರದಕ್ಷಿಣೆ ಹಾಕಿ ಮತ್ತು ಕಾಳಸರ್ಪ ದೋಷದಿಂದ ಮುಕ್ತಿ ಬಯಸಿ. ಹೀಗೆ ಮಾಡುವುದರಿಂದ ಜೀವನದ ಎಲ್ಲಾ ತೊಂದರೆಗಳು ದೂರವಾಗುತ್ತವೆ.

* ಸಂಜೆ ಮನೆಯ ಈಶಾನ್ಯ ದಿಕ್ಕಿನಲ್ಲಿ ಹಸುವಿನ ತುಪ್ಪದ ದೀಪವನ್ನು ಹಚ್ಚಿ. ದೀಪದ ಬತ್ತಿಯಲ್ಲಿ ಹತ್ತಿಯ ಬದಲು ಕೆಂಪು ದಾರವನ್ನು ಬಳಸುವುದು ಶುಭ. ದೀಪದಲ್ಲಿ ಕೇಸರಿ ಎಲೆಗಳನ್ನು ಹಾಕುವುದು ಸಹ ಪ್ರಯೋಜನಕಾರಿಯಾಗಿದೆ.

* ಮೌನಿ ಅಮವಾಸ್ಯೆ(Mauni Amavasya 2022)ಯ ದಿನ ಶಿವನಿಗೆ ಪಂಚಾಮೃತ ಅಭಿಷೇಕ ಮಾಡಿ. ಹಾಗೆಯೇ ಮಹಾಮೃತ್ಯುಂಜಯ ಮಂತ್ರವನ್ನು 1008 ಬಾರಿ ಜಪಿಸಿ. ಇದು ಅದೃಷ್ಟವನ್ನು ಹೆಚ್ಚಿಸುತ್ತದೆ ಮತ್ತು ಜೀವನದ ಆರ್ಥಿಕ ತೊಂದರೆಗಳನ್ನು ನಿವಾರಿಸುತ್ತದೆ.

ಇದನ್ನೂ ಓದಿ: Success Tips: ಸೂರ್ಯೋದಯದ ವೇಳೆ ಈ ಕೆಲಸ ಮಾಡಿ, ಜೀವನದಲ್ಲಿ ಯಾವುದೇ ಕೊರತೆ ಎದುರಾಗುವುದಿಲ್ಲ

(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News