ನವದೆಹಲಿ : ಪ್ರತಿ ವರ್ಷ ಪುಷ್ಯ ಮಾಸದಲ್ಲಿ ಬರುವ ಅಷ್ಟಮಿಯನ್ನು ರುಕ್ಮಿಣಿ ಅಷ್ಟಮಿ (Rukmini Ashtami) ಎಂದು ಪರಿಗಣಿಸಲಾಗುತ್ತದೆ. ಈ ವರ್ಷ ಜನವರಿ 6 ಅಂದರೆ ನಾಳೆ ರುಕ್ಮಿಣಿ ಅಷ್ಟಮಿಯನ್ನು ಆಚರಿಸಲಾಗುತ್ತದೆ. ರುಕ್ಮಿಣಿ ಅಷ್ಟಮಿಯ ದಿನ ಶ್ರೀಕೃಷ್ಣ ಮತ್ತು ದೇವಿ ರುಕ್ಮಿಣಿಯನ್ನು ಪೂಜಿಸಲಾಗುತ್ತದೆ.
ಹಿಂದೂ ಧರ್ಮದಲ್ಲಿ ಈದಿನಕ್ಕಿದೆ ವಿಶೇಷ ಮಹತ್ವ :
ಹಿಂದೂ (Hindu) ಧರ್ಮದಲ್ಲಿ ರುಕ್ಮಿಣಿ ಅಷ್ಟಮಿಗೆ ಮಹತ್ವದ ಸ್ಥಾನವಿದೆ. ಧರ್ಮಗ್ರಂಥದ ಪ್ರಕಾರ ರುಕ್ಮಿಣಿ ದೇವಿಯನ್ನು (Rukmini Devi) ಲಕ್ಷ್ಮೀ ದೇವಿಯ (Laxmi) ಅವತಾರ ಎಂದು ಪೂಜಿಸಲಾಗುತ್ತದೆ. ರುಕ್ಮಿಣಿ ಅಷ್ಟಮಿಯ ದಿನದಂದು ಶೃದ್ಧೆ ಭಕ್ತಿಯಿಂದ ಶ್ರೀಕೃಷ್ಣ ಮತ್ತು ರುಕ್ಮಿಣಿ ದೇವಿಯನ್ನು ಪೂಜಿಸಿದರೆ ನಮ್ಮ ಎಲ್ಲಾ ಇಷ್ಟಾರ್ಥಗಳು ಸಿದ್ಧಿಸುತ್ತದೆ ಅನ್ನೋದು ನಂಬಿಕೆ.
ಶಾಸ್ತ್ರಗಳ ಪ್ರಕಾರ ಶ್ರೀಕೃಷ್ಣಜನಿಸಿದ್ದು ಅಷ್ಟಮಿಯಂದು. ರಾಧೆ (Radha) ಕೂಡಾ ಅಷ್ಟಮಿಯ ದಿನದಂದೇ ಜನಿಸಿರುವುದು. ಇನ್ನು ರುಕ್ಮಿಣಿ ಕೂಡಾ ಅಷ್ಟಮಿಯ ದಿನದಂದೇ ಹುಟ್ಟಿರುವುದು ಎಂದು ಉಲ್ಲೇಖಿಸಲಾಗಿದೆ. ಹಾಗಾಗಿಯೇ ಅಷ್ಟಮಿಯ ದಿನವನ್ನು ಬಹಳ ಶ್ರೇಷ್ಠ ಎಂದು ನಂಬಲಾಗುತ್ತದೆ. ಈ ದಿನ ಶ್ರೀಕೃಷ್ಣ, ರುಕ್ಮಿಣಿ ಮತ್ತು ಅವರ ಪುತ್ರ ಪ್ರದ್ಯುಮ್ನನನ್ನು ಪೂಜಿಸುತ್ತಾರೋ ಅವರು ವಿಶೇಷ ಫಲಗಳನ್ನು ಪಡೆಯುತ್ತಾರಂತೆ.
ಇದನ್ನೂ ಓದಿ : ವಿಸ್ಮಯ ತಾಣ ಈ ಶಿವ ದೇಗುಲ, ನಿತ್ಯ 3 ಬಾರಿ ಬಣ್ಣ ಬದಲಾಯಿಸುತ್ತದೆ ಇಲ್ಲಿನ ಶಿವಲಿಂಗ
ರುಕ್ಮಿಣಿ ಅಷ್ಟಮಿಯ ದಿನ ಪೂಜಾವಿಧಿವಿಧಾನಗಳು ಹೇಗೆ?
1.ಈ ದಿನ ಬೆಳಗ್ಗಿನ ಜಾವ ಬೇಗನೆ ಎದ್ದು ಸ್ನಾನ ಮಾಡಿ ಸ್ವಚ್ಛ ಬಟ್ಟೆಯನ್ನುಧರಿಸಬೇಕು
2. ಇದಾದ ನಂತರ ಪೂಜಾ ಸ್ಥಳವನ್ನು ಗಂಗಾಜಲದಿಂದ (Gangajal) ಸ್ವಚ್ಛಗೊಳಿಸಬೇಕು. ಮತ್ತು ಈ ಸ್ಥಳದಲ್ಲಿ ಸ್ವಚ್ಛ ಬಟ್ಟೆಯನ್ನು ಹಾಸಬೇಕು.
3. ಶ್ರೀಕೃಷ್ಣ (Krishna) ಮತ್ತು ರುಕ್ಮಿಣಿ ಯ (Rukmini) ಮೂರ್ತಿಯನ್ನು ಈ ಜಾಗದಲ್ಲಿ ಇರಿಸಬೇಕು
4.ನಂತರ ಕೃಷ್ಣ ರುಕ್ಮಿಣಿಯ ಮೂರ್ತಿಗೆ ಅಭಿಷೇಕ ಮಾಡಬೇಕು.
5. ಇದಾದ ಮೇಲೆ ಶ್ರೀಕೃಷ್ಣನಿಗೆ ಹಳದಿ ಬಣ್ಣದ ಬಟ್ಟೆ, ರುಕ್ಮಿಣಿಗೆ ಕೆಂಪು ಬಣ್ಣದವಸ್ತ್ರವನ್ನು ಧಾರಣೆ ಮಾಡಿಸಬೇಕು.
6. ಶ್ರೀಕೃಷ್ಣ ರುಕ್ಮಿಣಿಗೆ ತಿಲಕವಿಟ್ಟು, ಅರಶೀನ ಹಾಕಿ ಹೂವುಗಳನ್ನುಸಮರ್ಪಿಸಿ ಪೂಜೆ ಮಾಡಬೇಕು
7.ಪೂಜೆ ವೇಳೆ ಕೃಷ್ಣ ಮಂತ್ರ ಮತ್ತು ಲಕ್ಷ್ಮೀದೇವಿಯ ಮಂತ್ರವನ್ನು ಪಠಿಸಬೇಕು.
8. ಇಷ್ಟಾದ ಮೇಲೆ ತುಳಸಿ ಬೆರೆಸಿದ ಪಾಯಸವನ್ನು ದೇವರಿಗೆ ಪ್ರಸಾದ ರೂಪದಲ್ಲಿ ಸಮರ್ಪಿಸಬೇಕು
9. ಸಾಯಂಕಾಲದ ಹೊತ್ತು ಮತ್ತೆ ಆರತಿ ಬೆಳಗಬೇಕು. ಆರತಿಯ ನಂತರ ಫಲಾಹಾರ ಸೇವನೆ ಮಾಡಬಹುದು.
10. ಮಾರನೇ ದಿನ ಅಂದರೆ ನವಮಿಯಂದು ಬ್ರಾಹ್ಮಣರನ್ನು ಕರೆದು ಭೋಜನ ವ್ಯವಸ್ಥೆ ಮಾಡಬೇಕು. ಇಲ್ಲಿಗೆ ವೃತ ಸಂಪೂರ್ಣವಾಗುತ್ತದೆ.
ರುಕ್ಮಿಣಿ ಅಷ್ಟಮಿಯಂದು ಕೃಷ್ಣ ಮತ್ತು ರುಕ್ಮಿಣಿಯನ್ನು ಪೂಜಿಸುವುದರಿಂದ ಕುಟುಂಬದಲ್ಲಿ ಸುಖ - ಶಾಂತಿ ನೆಲೆಯಾಗುತ್ತದೆ ಎನ್ನುವ ನಂಬಿಕೆಯಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.