Plants at home: ಮನೆಯಲ್ಲಿ ಗಿಡಗಳನ್ನು ಬೆಳೆಸುವುದು ಇತ್ತೀಚಿನ ದಿನಗಳಲ್ಲಿ ತುಂಬಾ ಸಾಮಾನ್ಯವಾಗಿದೆ. ಮನೆಯಲ್ಲಿ ಜಾಗವಿಲ್ಲದವರು ಬಾಲ್ಕನಿಯಲ್ಲಿಯೂ ಗಿಡ ಬೆಳೆಯುತ್ತಿದ್ದಾರೆ. ಮನೆಯಲ್ಲಿ ಗಿಡಗಳನ್ನು ಬೆಳೆಸುವುದರಿಂದ ಹಲವಾರು ಪ್ರಯೋಜನಗಳಿವೆ. ಮನೆಯಲ್ಲಿ ಆಮ್ಲಜನಕದ ಮಟ್ಟವನ್ನು ಹೆಚ್ಚಿಸುತ್ತದೆ. ಗಾಳಿ ಕೂಡ ಶುದ್ಧವಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಕೆಲವು ರೀತಿಯ ಗಿಡಗಳನ್ನು ಮನೆಯಲ್ಲಿ ಬೆಳೆಸಬಾರದು. ಇದನ್ನು ಬೆಳೆಸಿದರೆ ವಾಸ್ತು ದೋಷ ಉಂಟಾಗುತ್ತದೆ ಎನ್ನುತ್ತಾರೆ ವಾಸ್ತು ಶಾಸ್ತ್ರ ತಜ್ಞರು. ವಾಸ್ತು ವಿರುದ್ಧವಾಗಿ ಗಿಡಗಳನ್ನು ಬೆಳೆಸುವುದರಿಂದ ತೊಂದರೆಗಳು ಉಂಟಾಗುತ್ತವೆ ಎಂದು ಹೇಳಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಬೆಳೆಸಬಾರದ ಆ ಸಸ್ಯಗಳು ಯಾವುವು ಎಂದು ತಿಳಿಯೋಣ.
ಬೋನ್ಸೈ ಸಸ್ಯ:
ಬೋನ್ಸೈ ಸಸ್ಯ ನೋಡಲು ತುಂಬಾ ಚಿಕ್ಕದಾಗಿರುತ್ತವೆ. ಇವು ತುಂಬಾ ಮುದ್ದಾದ ಮತ್ತು ಸುಂದರವಾಗಿ ಕಾಣುತ್ತವೆ. ಇಂತಹ ಸಸ್ಯಗಳನ್ನು ಮನೆಯಲ್ಲಿ ಬೆಳೆಸಬಾರದು. ಬೋನ್ಸೈ ಸಸ್ಯ ಬೆಳೆಸುವುದರಿಂದ ಮನೆಯ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ.
ಇದನ್ನೂ ಓದಿ: ಅದೃಷ್ಟ ಒಲಿಯಲು ಪೊರಕೆಯನ್ನು ಮನೆಯ ಈ ದಿಕ್ಕಿನಲ್ಲಿಯೇ ಇಡಿ ! ನಿಮ್ಮ ಗೋಲ್ಡನ್ ಟೈಮ್ ಅಲ್ಲಿಂದಲೇ ಶುರುವಾಗುವುದು!
ಕಳ್ಳಿ ಗಿಡ:
ಅನೇಕ ಜನರು ಈ ಮುಳ್ಳಿನ ಸಸ್ಯಗಳನ್ನು ಮನೆಯಲ್ಲಿ ಬೆಳೆಯುತ್ತಾರೆ. ಅನೇಕ ಜನರು ಅವುಗಳನ್ನು ಬೆಳೆಯಲು ಇಷ್ಟಪಡುತ್ತಾರೆ. ಇಂತಹ ಗಿಡಗಳು ಮನೆಯಲ್ಲಿ ಇರಲೇಬಾರದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಈ ಮರದಲ್ಲಿನ ಮುಳ್ಳಿನಂತೆಯೇ, ಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ.
ಸೋರೆಕಾಯಿ
ಅನೇಕ ಜನರು ಮನೆಯಲ್ಲಿ ಸೋರೆಕಾಯಿ ಬೆಳೆಸುತ್ತಾರೆ. ಆದರೆ ಇವುಗಳನ್ನು ಮನೆಯಲ್ಲಿ ಅಥವಾ ಮನೆಯ ಆವರಣದಲ್ಲಿ ಬೆಳೆಸಬಾರದು. ಇದರಿಂದ ವಾಸ್ತು ದೋಷವೂ ಉಂಟಾಗುತ್ತದೆ ಎನ್ನುತ್ತಾರೆ ತಜ್ಞರು. ಮನೆಗೆ ದುರಾದೃಷ್ಟವನ್ನು ತರುತ್ತವೆ. ಆರೋಗ್ಯ ಸಮಸ್ಯೆಗಳೂ ಉಂಟಾಗುತ್ತವೆ.
ಅಕೇಶಿಯ ಸಸ್ಯ
ಅಕೇಶಿಯ ಸಸ್ಯದಲ್ಲಿ ಸುಂದರವಾದ ಪುಟ್ಟ ಪುಟ್ಟ ಹಳದಿ ಹೂಗಳು ಬಿಡುತ್ತವೆ. ವಾಸ್ತು ಪರಿಣತರ ಪ್ರಕಾರ ಇದನ್ನು ಮನೆಯಲ್ಲಿ ಬೆಳೆಯಬಾರದು. ಇದು ಮನೆಯ ಶಾಂತಿಯನ್ನು ಕದಡುತ್ತದೆ.
ಇದನ್ನೂ ಓದಿ: Tulsi Vastu Tips: ಈ ದಿನದಂದು ತಪ್ಪಿಯೂ ತುಳಸಿಗೆ ನೀರು ಹಾಕಬೇಡಿ, ಶ್ರೀಮಂತನೂ ಕೂಡ ದಾರಿದ್ರ್ಯ ವಕ್ಕರಿಸಿ ಕಡು ಬಡವನಾಗುವ!
(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.