ನವದೆಹಲಿ: ಮನೆ ಅಥವಾ ಕಚೇರಿಯಲ್ಲಿ ಎಲ್ಲವನ್ನೂ ವಾಸ್ತು ಪ್ರಕಾರ ಮಾಡಿದರೆ ಒಳ್ಳೆಯದು. ಆದರೆ, ಮನೆಯ ಪೂಜಾ ಕೋಣೆಯ ಬಗ್ಗೆ ವಿಶೇಷ ಗಮನವಿರಬೇಕು. ವಾಸ್ತು ಪ್ರಕಾರ ಮನೆಯ ಪ್ರತಿಯೊಂದು ದಿಕ್ಕು ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಇದು ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರುತ್ತದೆ.
ದೇವರ ಮನೆಯನ್ನು ಸರಿಯಾದ ದಿಕ್ಕಿನಲ್ಲಿ ಸ್ಥಾಪಿಸುವುದು ಬಹಳ ಮುಖ್ಯ. ಏಕೆಂದರೆ ಪೂಜಾ ಸ್ಥಳವು ನಾವು ಕುಳಿತು ದೇವರ ಧ್ಯಾನ ಮಾಡುವ, ಶುಭ ಕಾರ್ಯಗಳನ್ನು ಮಾಡುವ, ಪೂಜೆ ಮಾಡುವ ಸ್ಥಳವಾಗಿದೆ. ಈ ಸಕಾರಾತ್ಮಕ ಕ್ರಿಯೆಗಳನ್ನು ಮಾಡಲು ಮನೆಯಲ್ಲಿ ಸರಿಯಾದ ದಿಕ್ಕನ್ನು ಹೊಂದಿರುವುದು ಸಹ ಅಗತ್ಯವಾಗಿದೆ. ದೇವರ ಮನೆಯಲ್ಲಿ ಏನು ಮಾಡಬೇಕು ಮತ್ತು ಮಾಡಬಾರದು ಹಾಗೂ ಅದರ ಸರಿಯಾದ ದಿಕ್ಕಿನ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
ಇದನ್ನೂ ಓದಿ: Vastu Tips : ಮನೆಯಲ್ಲಿ ಖಾಲಿ ಜಾಗ ಎಲ್ಲಿರಬೇಕು? ಏನು ಲಾಭ, ವಾಸ್ತು ಶಾಸ್ತ್ರದ 10 ನಿಯಮ ತಿಳಿದುಕೊಳ್ಳಿ!
ದೇವರ ಮನೆಯ ಈ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ
- ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಪೂಜಾ ಕೋಣೆ ಯಾವಾಗಲೂ ಈಶಾನ್ಯ ದಿಕ್ಕಿನಲ್ಲಿರಬೇಕು. ಇದು ದೇವಾಲಯಕ್ಕೆ ಉತ್ತಮವಾದ ದಿಕ್ಕು ಎಂದು ಪರಿಗಣಿಸಲಾಗಿದೆ. ಪೂಜೆಯ ಮನೆ ಎಂದಿಗೂ ದಕ್ಷಿಣದಲ್ಲಿ ಇರಬಾರದು ಎಂಬುದನ್ನು ನೆನಪಿನಲ್ಲಿಡಿ. ಇದು ನಮ್ಮ ಕೆಲಸದಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತದೆ.
- ಮನೆಯ ಪೂಜಾ ಕೋಣೆ ಜೊತೆಗೆ ವ್ಯಕ್ತಿ ಯಾವ ದಿಕ್ಕಿಗೆ ಮುಖ ಮಾಡಬೇಕು ಎಂಬುದೂ ಮುಖ್ಯ. ದೇವರ ಮನೆಯಲ್ಲಿ ಕೆಂಪು ಬಣ್ಣದ ಬಲ್ಬ್ಗಳನ್ನು ಬಳಸಬಾರದು. ಹೀಗೆ ಮಾಡುವುದರಿಂದ ವ್ಯಕ್ತಿಯು ಮಾನಸಿಕವಾಗಿ ತೊಂದರೆಗೊಳಗಾಗುತ್ತಾನೆ. ಬಿಳಿ ಬಣ್ಣದ ಬಲ್ಬ್ ಹಾಕುವುದರಿಂದ ಮನೆಯಲ್ಲಿ ಧನಾತ್ಮಕತೆ ಬರುತ್ತದೆ.
- ವಾಸ್ತು ಪ್ರಕಾರ ಒಡೆದಿರುವ ವಿಗ್ರಹಗಳನ್ನು ಮನೆಯಲ್ಲಿ ಇಡಬೇಡಿ. ಮುಕ್ಕಾಗಿರುವ ವಿಗ್ರಹಗಳನ್ನು ದೇವರಮನೆಯಿಂದ ತೆಗೆದುಹಾಕಬೇಕು. ಇಲ್ಲದಿದ್ದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾ ಹೆಚ್ಚಾಗುತ್ತದೆ.
- ಅಪ್ಪಿತಪ್ಪಿಯೂ ಪೂಜಾ ಕೋಣೆಯಲ್ಲಿ ಬಾಡಿದ ಹೂವುಗಳನ್ನು ಇಡಬೇಡಿ. ಇದಲ್ಲದೆ, ದೇವರಮನೆಯಲ್ಲಿ ಪೂರ್ವಜರ ಭಾವಚಿತ್ರಗಳನ್ನು ಇಡಬಾರದು. ಪೂಜಾ ಪಾತ್ರೆಗಳನ್ನು ಪ್ರತ್ಯೇಕವಾಗಿ ತೊಳೆಯಬೇಕು.
- ದೇವರಮನೆಯಲ್ಲಿ ಕೆಂಪು ಬಣ್ಣದ ಬಟ್ಟೆ ಹಾಕಬೇಡಿ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಅಲ್ಲದೆ ದೇವರ ಮನೆಯಲ್ಲಿ ಪೂರ್ವಾಭಿಮುಖವಾಗಿ ಕುಳಿತುಕೊಳ್ಳಬೇಕು.
- ಸಾಧ್ಯವಾದಷ್ಟು ಒಂದೇ ದೇವರ ಹಲವಾರು ಚಿತ್ರಗಳನ್ನು ಹಾಕುವುದನ್ನು ತಪ್ಪಿಸಬೇಕು. ಮನೆಯಲ್ಲಿ 2ಕ್ಕಿಂತ ಹೆಚ್ಚು ಶಿವಲಿಂಗಗಳನ್ನು ಇಡಬಾರದು. ಅದೇ ರೀತಿ 2ಕ್ಕಿಂತ ಹೆಚ್ಚು ಶಂಖಗಳನ್ನು ಇಡಬೇಡಿ. ಸೂರ್ಯನ ವಿಗ್ರಹವು 2ಕ್ಕಿಂತ ಹೆಚ್ಚಿರಬಾರದು. ಏಕೆಂದರೆ ಇವುಗಳ ಬಗ್ಗೆ ಕಾಳಜಿ ವಹಿಸದಿದ್ದರೆ ಮನೆಯಲ್ಲಿ ಅಶಾಂತಿ ನೆಲೆಸುತ್ತದೆ.
- ಮನೆಯಲ್ಲಿ ಬೆಳಿಗ್ಗೆ ಮತ್ತು ಸಂಜೆ ತುಪ್ಪದ ದೀಪವನ್ನು ಬೆಳಗಿಸಿ. ಹೀಗೆ ಮಾಡುವುದರಿಂದ ಧನ ಲಾಭವಾಗುತ್ತದೆ. ಬೇರೆಡೆ ಸಿಲುಕಿರು ನಿಮ್ಮ ಹಣ ವಾಪಸ್ ಬರುತ್ತದೆ. ಪ್ರಸನ್ನ ಮುಖವುಳ್ಳ ದೇವತೆಗಳ ಚಿತ್ರಗಳನ್ನು ಮನೆಯ ಪೂಜಾ ಕೋಣೆಯಲ್ಲಿ ಇಡಬೇಕು.
ಇದನ್ನೂ ಓದಿ: ನಾಳೆಯಿಂದ ಈ ರಾಶಿಯವರಿಗೆ ಏಳೂವರೆ ಮತ್ತು ಎರಡೂವರೆ ವರ್ಷದ ಶನಿ ದೆಸೆ ಆರಂಭ .!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ