ಬೆಂಗಳೂರು : ಜ್ಯೋತಿಷ್ಯದ ಪ್ರಕಾರ, ಬುಧ ಗ್ರಹವನ್ನು ಗ್ರಹಗಳ ರಾಜಕುಮಾರ ಎಂದು ಕರೆಯಲಾಗುತ್ತದೆ. ಹೊಸ ವರ್ಷದಲ್ಲಿ ಅನೇಕ ದೊಡ್ಡ ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸುತ್ತಿವೆ. ಇದರ ಪರಿಣಾಮವು ಎಲ್ಲಾ ರಾಶಿಯವರ ಜೀವನದ ಮೇಲೆ ಕಂಡುಬರುತ್ತದೆ. ಹೊಸ ವರ್ಷದಲ್ಲಿ ಸಂಕ್ರಮಣವಾಗುವ ಬುಧ ಭದ್ರರಾಜ ಯೋಗವನ್ನು ನಿರ್ಮಾಣ ಮಾಡುತ್ತಿದೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಡಿಸೆಂಬರ್ 31 2022 ರಂದು ಧನು ರಾಶಿಯಲ್ಲಿ ಹಿಮ್ಮುಖ ಚಲನೆ ಆರಂಭಿಸಿದ್ದ ಬುಧ ಗ್ರಹ, ಜನವರಿ 18 ರಂದು ಮತ್ತೆ ಬುಧ ನೇರ ನಡೆ ಆರಂಭಿಸಲಿದ್ದಾನೆ. ಇದಾದ ಬಳಿಕ ಫೆಬ್ರವರಿ 7, 2023 ರಂದು, ಮಕರ ರಾಶಿಯನ್ನು ಪ್ರವೇಶಿಸುವ ಬುಧ, ಭದ್ರ ರಾಜಯೋಗವನ್ನು ನಿರ್ಮಿಸಲಿದ್ದಾನೆ. ಈ ಯೋಗವನ್ನು ಬಹಳ ಫಲಪ್ರದವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ಯೋಗವು ಅನೇಕ ರಾಶಿಯವರ ಆರ್ಥಿಕ ಸ್ಥಿತಿಯನ್ನು ಉಚ್ಛ್ರಾಯ ಸ್ಥಿತಿಯತ್ತ ಕೊಂಡೊಯ್ಯುತ್ತದೆ.
ಇದನ್ನೂ ಓದಿ : Chanakya Niti: ಚಾಣಕ್ಯನ ಈ ನೀತಿಗಳನ್ನು ಅನುಸರಿಸಿದರೆ ಜೀವನದಲ್ಲಿ ಎಂದಿಗೂ ಸೋಲುವುದಿಲ್ಲ
ಮೇಷ ರಾಶಿ :
ಈ ರಾಶಿಯವರಿಗೆ ಭದ್ರಾ ಯೋಗವು ತುಂಬಾ ಫಲಪ್ರದವಾಗಿರುತ್ತದೆ. ಯಾವ ಕೆಲಸ ಮಾಡಿದರೂ ಅದೃಷ್ಟ ಕೈ ಹಿಡಿಯುವುದರಿಂದ ಜಯ ಖಂಡಿತಾ. ಮಾಡುವ ಎಲ್ಲಾ ಕೆಲಸಗಳಲ್ಲೂ ಯಶಸ್ಸು ಸಿಗುತ್ತದೆ. ಶಿಕ್ಷಣ ಮತ್ತು ವೃತ್ತಿ ಕ್ಷೇತ್ರದಲ್ಲಿಯೂ ಅದ್ಬುತ ಪ್ರಗತಿ ಸಿಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡುವ ಜನರು ಸಹ ಯಶಸ್ಸನ್ನು ಪಡೆಯುತ್ತಾರೆ.
ಮಿಥುನ ರಾಶಿ :
ಬುಧ ಸಂಕ್ರಮಣದಿಂದ ರೂಪುಗೊಂಡ ಭದ್ರ ರಾಜಯೋಗವು ಈ ರಾಶಿಯವರಿಗೆ ಮಂಗಳಕರವಾಗಿರುತ್ತದೆ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವ ಜನರು ಈ ಅವಧಿಯಲ್ಲಿ ವಿಶೇಷ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಯಿದೆ.
ಕನ್ಯಾರಾಶಿ :
ಬುಧ ಸಂಕ್ರಮಣದಿಂದ ರೂಪುಗೊಂಡ ಭದ್ರ ರಾಜಯೋಗದಿಂದ ಅದೃಷ್ಟದ ಬಾಗಿಲು ತೆರೆಯುವುದು. ಈ ರಾಶಿಯವರಿಗೆ ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಸಿಗುತ್ತದೆ. ಈ ಸಮಯದಲ್ಲಿ, ಹಠಾತ್ ಧನ ಲಾಭವಾಗಬಹುದು. ಮನೆಯಲ್ಲಿ ಶಾಂತಿ ಮತ್ತು ಸಂತೋಷ ನೆಲೆಯಾಗುತ್ತದೆ. ಕುಟುಂಬ ಸದಸ್ಯರಲ್ಲಿ ಪ್ರೀತಿ ಮಮತೆ ಮನೆ ಮಾಡುತ್ತದೆ.
ಇದನ್ನೂ ಓದಿ : Zodiac signs: ಈ ರಾಶಿಯವರು ಜಗಳಕ್ಕೆ ನಿಂತ್ರೆ ಸೋಲುವ ಮಾತೇ ಇಲ್ಲ
ಧನು ರಾಶಿ :
ಈ ಸಮಯದಲ್ಲಿ, ಈ ರಾಶಿಯ ಜನರು ವ್ಯಾಪಾರಕ್ಕೆ ಸಂಬಂಧಿಸಿದಂತೆ ಪ್ರಯಾಣಕ್ಕೆ ಹೋಗಬೇಕಾಗಬಹುದು. ಹೂಡಿಕೆಯಿಂದ ವಿಶೇಷ ಪ್ರಯೋಜನಗಳನ್ನು ಪಡೆಯುತ್ತಾರೆ. ಈ ಅವಧಿಯಲ್ಲಿ ವ್ಯವಹಾರದಲ್ಲಿ ಉತ್ತಮ ಲಾಭ ಗಳಿಸುವುದು ಸಾಧ್ಯವಾಗುತ್ತದೆ. ಬುಧ ಸಂಕ್ರಮಣದಿಂದ ರೂಪುಗೊಂಡ ಭದ್ರಾ ರಾಜಯೋಗವು ಲಾಭದಾಯಕವಾಗಿರಲಿದೆ.
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.