ಹೊಸ ವರ್ಷದಲ್ಲಿ ಶುಕ್ರನ ಕೃಪೆಯಿಂದ ಕೈ ಹಾಕುವ ಪ್ರತಿ ಕೆಲಸದಲ್ಲಿ ಯಶ ಸಾಧಿಸುತ್ತಾರೆ ಈ ರಾಶಿಯವರು

ಶುಕ್ರನ ರಾಶಿ ಪರಿವರ್ತನೆ ಎಲ್ಲಾ 12 ರಾಶಿಗಳ ಮೇಲೂ ಪರಿಣಾಮ ಬೀರುತ್ತದೆ. ಹೊಸ ವರ್ಷವು ಆ ರಾಶಿಯವರ ಪಾಲಿಗೆ ಶುಭವನ್ನೇ ಹೊತ್ತು ತರಲಿದೆ.

Written by - Ranjitha R K | Last Updated : Dec 30, 2022, 09:40 AM IST
  • ಶುಕ್ರ ಗ್ರಹದ ಮೇಲೆ ಲಕ್ಷ್ಮೀ ದೇವಿಯ ವಿಶೇಷ ಆಶೀರ್ವಾದ
  • ಡಿಸೆಂಬರ್ 29 ರಂದು, ಮಕರ ರಾಶಿ ಪ್ರವೇಶಿಸಿರುವ ಶುಕ್ರ
  • ಅದೃಷ್ಟದ ರಾಶಿಗಳು ಯಾವುವು ನೋಡೋಣ.
 ಹೊಸ ವರ್ಷದಲ್ಲಿ ಶುಕ್ರನ ಕೃಪೆಯಿಂದ ಕೈ ಹಾಕುವ ಪ್ರತಿ ಕೆಲಸದಲ್ಲಿ  ಯಶ  ಸಾಧಿಸುತ್ತಾರೆ ಈ ರಾಶಿಯವರು title=
Venus Transit effect

ಬೆಂಗಳೂರು : ಶುಕ್ರ ಗ್ರಹದ ಮೇಲೆ  ಲಕ್ಷ್ಮೀ ದೇವಿಯ ವಿಶೇಷ ಆಶೀರ್ವಾದವಿರುತ್ತದೆ. ಶುಕ್ರ ಗ್ರಹವು ಡಿಸೆಂಬರ್ 29 ರಂದು, ಮಕರ ರಾಶಿಯನ್ನು ಪ್ರವೇಶಿಸಿದೆ. ಶುಕ್ರನ ರಾಶಿ ಪರಿವರ್ತನೆ ಎಲ್ಲಾ 12 ರಾಶಿಗಳ ಮೇಲೂ ಪರಿಣಾಮ ಬೀರುತ್ತದೆ. ಹೊಸ ವರ್ಷವು ಆ ರಾಶಿಯವರ ಪಾಲಿಗೆ ಶುಭವನ್ನೇ ಹೊತ್ತು ತರಲಿದೆ. ಆ ಅದೃಷ್ಟದ ರಾಶಿಗಳು ಯಾವುವು  ನೋಡೋಣ. 

ವೃಶ್ಚಿಕ ರಾಶಿ : ಈ ಶುಕ್ರ ಸಂಕ್ರಮಣದೊಂದಿಗೆ ಕೆಲಸದಲ್ಲಿ ಬಡ್ತಿ ಸಿಗುವ ಸಾಧ್ಯತೆಗಳಿವೆ. ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಶುಭ ಮುಹೂರ್ತ ಕೂಡಿ ಬರಲಿದೆ. ನಿಮ್ಮ ಕೆಲಸದ ಶೈಲಿಗೆ ಎಲ್ಲರ ಮೆಚ್ಚುಗೆ ಸಿಗಲಿದೆ. ಬಡ್ತಿ ಮತ್ತು ವೇತನ ಹೆಚ್ಚಳದ ಸಾಧ್ಯತೆಯೂ ಇದೆ. ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷ ನೆಲೆಯಾಗುತ್ತದೆ.  

ಇದನ್ನೂ ಓದಿ : Jyotish Shastra about shoes colours: ಶೂಗಳ ಬಣ್ಣದಿಂದ ನಿರ್ಧಾರವಾಗುತ್ತದೆ ನಿಮ್ಮ ಅದೃಷ್ಟ: ಈ ಜನರಿಗೆ ಈ ಬಣ್ಣದ ಚಪ್ಪಲಿ ಸೂಕ್ತ!

ಮಿಥುನ ರಾಶಿ :  ಶುಕ್ರ  ಗ್ರಹದ ರಾಶಿ ಬದಲಾವಣೆಯೊಂದಿಗೆ, ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ವ್ಯಾಪಾರ ವಹಿವಾಟುಗಳಿಗೆ ಇದು ಶುಭ ಸಮಯ ಪ್ರಾರಂಭವಾಗಿದೆ. ಏನೇ ಹೂಡಿಕೆ ಮಾಡಿದರೂ ಅದರಿಂದ ಲಾಭವಾಗುತ್ತದೆ. ಉದ್ಯೋಗ-ವ್ಯವಹಾರದಲ್ಲಿ ತೊಡಗಿರುವ ಜನರಿಗೆ ಪ್ರಗತಿ ಸಿಗಲಿದೆ. ಹೊಸ ಜವಾಬ್ದಾರಿಗಳು ಹೆಗಲೇರಲಿವೆ. 

ಮೇಷ ರಾಶಿ : ಶುಕ್ರ ಸಂಕ್ರಮಣದಿಂದ ನಿಮ್ಮ ವೈವಾಹಿಕ ಸಂಬಂಧ ಗಟ್ಟಿಯಾಗಲಿದೆ. ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುವ ಅವಕಾಶ ಸಿಗಲಿದೆ. ಸಮಾಜದಲ್ಲಿ ಸ್ಥಾನಮಾನ ಮತ್ತು ಗೌರವ ಹೆಚ್ಚಾಗುತ್ತದೆ. ಆರ್ಥಿಕವಾಗಿ ಮೊದಲಿಗಿಂತ ಬಲಶಾಲಿಯಾಗುತ್ತೀರಿ. ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ನಿರತರಾಗಿರುವವರಿಗೆ ಈ ಸಮಯವು ವರದಾನವಾಗಿ ಪರಿಣಮಿಸಲಿದೆ. 

ಇದನ್ನೂ ಓದಿ : Paush Purnima 2023: ವರ್ಷದ ಮೊದಲ ಹುಣ್ಣಿಮೆಯ ದಿನ 3 ಶುಭಯೋಗಗಳ ನಿರ್ಮಾಣ, ಲಕ್ಷ್ಮಿಯ ಕೃಪಾವೃಷ್ಟಿಗಾಗಿ ಈ ಕೆಲಸ ಮಾಡಿ

ಮೀನ ರಾಶಿ : ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ. ಮಗುವಿನ ಕಡೆಯಿಂದ ಒಳ್ಳೆಯ ಸುದ್ದಿ ಸಿಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಯುವಕರು, ಮುಂದಿನ ವರ್ಷ ಯಶಸ್ಸನ್ನು ಪಡೆಯಬಹುದು. ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯುವ ಅವಕಾಶ ಸಿಗಲಿದೆ.  

ತುಲಾ ರಾಶಿ: ಈ ರಾಶಿ ಬದಲಾವಣೆಯ ಪ್ರಭಾವದಿಂದ, ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳು ಮತ್ತು ಉನ್ನತ ಅಧಿಕಾರಿಗಳೊಂದಿಗಿನ ಸಂಬಂಧಗಳು ಮಧುರವಾಗಿರುತ್ತದೆ. ವೃತ್ತಿಜೀವನದಲ್ಲಿ ಪ್ರಯೋಜನವಾಗಲಿದೆ. ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. 

 

 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News