Auspicious Raja Yogas are created on Shani Jayanti: ಜ್ಯೋತಿಷ್ಯ ಶಾಸ್ತ್ರದಲ್ಲಿ ನ್ಯಾಯದ ದೇವರು, ಕರ್ಮಗಳಿಗೆ ತಕ್ಕ ಪ್ರತಿಫಲವನ್ನು ನೀಡುವ ಕರ್ಮಫಲದಾತ ಎಂದು ಬಣ್ಣಿಸಲ್ಪಡುವ ಶನಿ ದೇವನ ಹೆಸರು ಕೇಳಿದರೆ ಜನ ಬೆಚ್ಚಿ ಬೀಳುತ್ತಾರೆ. ಕಾರಣ ಯಾವುದೇ ವ್ಯಕ್ತಿಯ ಮೇಲೆ ಶನಿಯ ವಕ್ರ ದೃಷ್ಟಿ ಬಿತ್ತೆಂದರೆ ಆತನಿಗೆ ಮೇಲಿಂದ ಮೇಲೆ ಪೆಟ್ಟು ಬೀಳುತ್ತಲೇ ಇರುತ್ತದೆ. ಆದರೆ, ಶನಿ ಅಶುಭ ಫಲಗಳನ್ನು ಮಾತ್ರವಲ್ಲ, ಶುಭ ಫಲಗಳನ್ನು ಕೂಡ ನೀಡುತ್ತಾರೆ.
ಯಾವುದೇ ವ್ಯಕ್ತಿಯ ಜಾತಕದಲ್ಲಿ ಶನಿ ದೇವನು ಶುಭ ಸ್ಥಾನದಲ್ಲಿದ್ದಾಗ ಅವರಿಗೆ ಶುಭ ಫಲಗಳನ್ನೇ ನೀಡುತ್ತಾನೆ. ಈ ಸಂದರ್ಭದಲ್ಲಿ ಅವರ ಯಶಸ್ಸನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ. ಇದೀಗ 19 ಮೇ 2023ರ ಶುಕ್ರವಾರದ ದಿನ ಶನಿ ಜಯಂತಿಯನ್ನು ಆಚರಿಸಲಾಗುತ್ತಿದೆ. ಶನಿ ದೋಷದಿಂದ, ಸಾಡೇಸಾತಿ ಶನಿ, ಶನಿ ಧೈಯಾದಂತಹ ಪ್ರಭಾವಗಳನ್ನು ಕಡಿಮೆ ಮಾಡಲು ಶನಿ ಜಯಂತಿಯನ್ನು ತುಂಬಾ ವಿಶೇಷ ಎಂದು ಪರಿಗಣಿಸಲಾಗಿದೆ.
ಶನಿ ಜಯಂತಿಯಂದು ಶುಭ ಯೋಗಗಳು:
ಈ ಬಾರಿಯ ಶನಿ ಜಯಂತಿಯಲ್ಲಿ ಗಜಕೇಸರಿ, ಶೋಭನ, ಶಶಯೋಗಗಳಂತಹ ಮೂರು ಶುಭಕರ ರಾಜ ಯೋಗಗಳು ನಿರ್ಮಾಣಗೊಳ್ಳುತ್ತಿವೆ. ಗ್ರಹಗಳ ಶುಭ ಸ್ಥಾನದಿಂದಾಗಿ ಈ ರಾಜಯೋಗಗಳು ಎಲ್ಲಾ 12 ರಾಶಿಯವರ ಮೇಲೆ ಬಹಳ ದೊಡ್ಡ ಪರಿಣಾಮವನ್ನು ಬೀರುತ್ತಿವೆ. ಆದರೆ, ಈ ಮೂರು ರಾಜಯೋಗಗಗಳು ಮೂರು ರಾಶಿಯವರ ಜೀವನದಲ್ಲಿ ಅದೃಷ್ಟ ಬೆಳಗುವಂತೆ ಮಾಡಲಿವೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
ಇದನ್ನೂ ಓದಿ- Astrology: ಈ ರಾಶಿಯ ಹುಡುಗಿಯರು ತುಂಬಾ ಅದೃಷ್ಟವಂತರು
ಶನಿ ಜಯಂತಿಯ ದಿನ ಮೂರು ಶುಭ ರಾಜಯೋಗಗಳ ನಿರ್ಮಾಣ, ಮೂರು ರಾಶಿಯವರಿಗೆ ಭಾರೀ ಅದೃಷ್ಟ :-
ಮಿಥುನ ರಾಶಿ:
ಶನಿ ಜಯಂತಿಯ ದಿನ ರೂಪುಗೊಳ್ಳುತ್ತಿರುವ ಮೂರು ಶುಭಕರ ರಾಜಯೋಗಗಳು ಈ ರಾಶಿಯವರಿಗೆ ಮಂಗಳಕರ ಎಂದು ಸಾಬೀತುಪಡಿಸಲಿವೆ. ಈ ಸಮಯದಲ್ಲಿ ಮಿಥುನ ರಾಶಿಯವರಿಗೆ ಲಾಟರಿ ಹೊಡೆಯುವ ಸಾಧ್ಯತೆ ಇದ್ದು ಹಣಕಾಸಿನ ಮೂಲಗಳು ಕೂಡ ಹೆಚ್ಚಾಗಲಿವೆ. ಇದರಿಂದ ನಿಮ್ಮ ಬಹುದಿನಗಳ ಆಸೆ-ಆಕಾಂಕ್ಷೆಗಳು ಈಡೇರಲಿವೆ.
ಸಿಂಹ ರಾಶಿ:
ಶನಿ ಜಯಂತಿಯಂದು ರೂಪುಗೊಳ್ಳಲಿರುವ ಗಜಕೇಸರಿ, ಶೋಭನ, ಶಶಯೋಗಗಳಂತಹ ಮೂರು ಶುಭಕರ ರಾಜ ಯೋಗಗಳು ಸಿಂಹ ರಾಶಿಯವರಿಗೆ ಪ್ರತಿ ಹಂತದಲ್ಲಿಯೂ ಅದೃಷ್ಟವನ್ನು ಕರುಣಿಸಲಿದೆ. ಇದರಿಂದಾಗಿ ಸಿಂಹ ರಾಶಿಯವರಿಗೆ ಇದ್ದಕ್ಕಿದ್ದಂತೆ ಒಂದು ದೊಡ್ಡ ಹುದ್ದೆ ದೊರೆಯಬಹುದು. ಇಲ್ಲವೇ, ವಿದೇಶಕ್ಕೆ ಹೋಗಲು ಪ್ರಯತ್ನಿಸುತ್ತಿರುವವರಿಗೆ ನಿಮ್ಮ ಕನಸು ನನಸಾಗಲಿದೆ. ಆರ್ಥಿಕವಾಗಿಯೂ ಬಂಪರ್ ಲಾಭ ಸಾಧ್ಯತೆ ಇದ್ದು ಹಣಕಾಸಿನ ಸ್ಥಿತಿಯೂ ಉತ್ತಮವಾಗಿರಲಿದೆ.
ಇದನ್ನೂ ಓದಿ- Lucky Zodiac Signs: ದ್ವಾದಶ ರಾಶಿಗಳಲ್ಲಿ ತುಂಬಾ ಭಾಗ್ಯವಂತರು ಈ ನಾಲ್ಕು ರಾಶಿಯ ಜನ
ಕುಂಭ ರಾಶಿ:
ಕುಂಭ ರಾಶಿಗೆ ಶನಿಯೇ ಅಧಿಪತಿ. ಈ ಸಮಯದಲ್ಲಿ ಕುಂಭ ರಾಶಿಯವರಿಗೆ ಸಾಡೇ ಸಾತಿ ಶನಿ ಪ್ರಭಾವ ನಡೆಯುತ್ತಿದ್ದರೂ ಕೂಡ ಶನಿಯು ಈ ರಾಶಿಯವರಿಗೆ ದಯೆ ತೋರುತ್ತಾನೆ. ಶನಿ ಜಯಂತಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮೂರು ಶುಭ ರಾಜಯೋಗಗಳಿಂದಾಗಿ ನೀವು ನಿಮ್ಮ ವೃತ್ತಿ ಬದುಕಿನಲ್ಲಿ ಯಶಸ್ಸಿನ ಹೊಸ ಶಿಖರವನ್ನು ಏರಬಹುದು. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದರಿಂದ ಕೌಟುಂಬಿಕ ಸುಖ-ಶಾಂತಿಯನ್ನು ಸಹ ನೀವು ಅನುಭವಿಸುವಿರಿ. ಹಣಕಾಸಿನ ಸ್ಥಿತಿಯೂ ಚೆನ್ನಾಗಿರಲಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ