Vastu Tips: ನಿಮ್ಮ ಕೈಯಲ್ಲಿ ಹಣ ಉಳಿಯುತ್ತಲ್ಲವೇ? ಈ ಹೂವುಗಳನ್ನು ಬಚ್ಚಿಟ್ಟರೆ ಧನವಂತರಾಗುತ್ತೀರಿ!

ಪಲಾಶ ಅಥವಾ ಮುತ್ತುಗ ಎಂದು ಕರೆಯುವ ಈ ಹೂವಿನ ಧಾರ್ಮಿಕ ಮಹತ್ವ ಹಾಗೂ ಔಷಧೀಯ ಗುಣಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು.

Written by - Puttaraj K Alur | Last Updated : Sep 12, 2022, 11:14 AM IST
  • ಪಲಾಶ ಹೂ ಧಾರ್ಮಿಕ ಮಹತ್ವ ಹಾಗೂ ಔಷಧೀಯ ಗುಣ ಹೊಂದಿದೆ
  • ನಿಮ್ಮ ಹಣಕಾಸಿನ ಸಮಸ್ಯೆಗೆ ಪಲಾಶ ಹೂ ಪರಿಣಾಮಕಾರಿ ರಾಮಬಾಣ
  • ಪಲಾಶ ಹೂವನ್ನು ತೆಂಗಿನಕಾಯಿಯೊಂದಿಗೆ ಬಿಳಿ ಬಟ್ಟೆಯಲ್ಲಿ ಕಟ್ಟಿ ಮನೆಯಲ್ಲಿಡಬೇಕು
Vastu Tips: ನಿಮ್ಮ ಕೈಯಲ್ಲಿ ಹಣ ಉಳಿಯುತ್ತಲ್ಲವೇ? ಈ ಹೂವುಗಳನ್ನು ಬಚ್ಚಿಟ್ಟರೆ ಧನವಂತರಾಗುತ್ತೀರಿ! title=
ಪಲಾಶ ಹೂವಿನ ಧಾರ್ಮಿಕ ಮಹತ್ವ

ನವದೆಹಲಿ: ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಹಣ ಮತ್ತು ಸಂತೋಷದ ಜೊತೆಗೆ ಮನಃಶಾಂತಿ ಇರಬೇಕೆಂದು ಬಯಸುತ್ತಾರೆ. ಆದರೆ ಅನೇಕ ಬಾರಿ ನಾವು ಕಷ್ಟಪಟ್ಟು ಕೆಲಸ ಮಾಡಿದರೂ ಯಾವುದೇ ರೀತಿ ಪ್ರಯೋಜನವಾಗಿರುವುದಿಲ್ಲ. ಹಣ ಸೇರಿದಂತೆ ಅನೇಕ ಸಮಸ್ಯೆಗಳು ನಮ್ಮನ್ನು ಕಾಡಬಹುದು. ಎಷ್ಟೇ ಪ್ರಯತ್ನಿಸಿದರೂ ಬಹುತೇಕರ ಕೈಯಲ್ಲಿ ಹಣವೇ ಉಳಿಯುವುದಿಲ್ಲ. ಜೊತೆಗೆ ಅನೇಕರಿಗೆ ಆರೋಗ್ಯ ಕೈಕೊಡುತ್ತದೆ. ಇದರಿಂದ ಅವರು ಹಣಕಾಸಿನ ಸಮಸ್ಯೆ ಎದುರಿಸುವ ಸಂಕಷ್ಟ ಸ್ಥಿತಿಗೆ ತಲುಪುತ್ತಾರೆ.  

ವಾಸ್ತು ಶಾಸ್ತ್ರದಲ್ಲಿ ಪ್ರತಿಯೊಂದು ಸಮಸ್ಯೆಗೂ ಪರಿಹಾರ ಹೇಳಲಾಗಿದೆ. ಇಂದು ನಾವು ನಿಮಗೆ ಹಣಕ್ಕೆ ಸಂಬಂಧಿಸಿದ ವಾಸ್ತುಶಾಸ್ತ್ರದ ಕೆಲವು ಪರಿಹಾರ ಕ್ರಮಗಳನ್ನು ತಿಳಿಸಿಕೊಡಲಿದ್ದೇವೆ. ಈ ಸಲಹೆಗಳನ್ನು ಅಳವಡಿಸಿಕೊಳ್ಳುವ ಮೂಲಕ ನಿಮ್ಮ ಆರ್ಥಿಕ ಸ್ಥಿತಿಯನ್ನು ನೀವು ಸರಿಪಡಿಸಬಹುದು. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: Tulsi Puja Tips: ಯಾವ ಎರಡು ದಿನ ತುಳಸಿ ಸಸ್ಯವನ್ನು ಸ್ಪರ್ಶಿಸುವುದು ಅಶುಭ? ಸ್ಪರ್ಶಿಸಿದರೆ ಲಕ್ಷ್ಮಿ ಮುನಿಸಿಗೆ ಕಾರಣ

ಮನೆಯಲ್ಲಿ ಪಲಾಶ ಹೂ ಇರಿಸಿ 

ಪಲಾಶ ಅಥವಾ ಮುತ್ತುಗ(Butea monosperma) ಎಂದು ಕರೆಯುವ ಈ ಹೂವಿನ ಧಾರ್ಮಿಕ ಮಹತ್ವ ಹಾಗೂ ಔಷಧೀಯ ಗುಣಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ನೀವು ಮಾಡಬೇಕಾಗಿರುವುದು ಇಷ್ಟೇ.. ನಿಮ್ಮ ಮನೆಯಲ್ಲಿ ಪಲಾಶ ಹೂವನ್ನು ಇಡುವುದು. ವಾಸ್ತುಶಾಸ್ತ್ರದಲ್ಲಿ ಮರ ಮತ್ತು ಗಿಡಗಳಿಂದ ಅನೇಕ ರೀತಿಯ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ ಎಂದು ತಿಳಿಸಲಾಗಿದೆ. ಈ ಪಲಾಶ ಹೂವಿನಲ್ಲಿ ದೇವತೆಗಳು ನೆಲೆಸಿದ್ದಾರೆ ಎಂಬ ನಂಬಿಕೆ ಇದೆ. ಈ ಹೂವು ಎಷ್ಟು ಪರಿಣಾಮಕಾರಿ ಎಂದರೆ ಇದನ್ನು ಇಟ್ಟುಕೊಂಡರೆ ಮನೆಯಲ್ಲಿ ಧನಾತ್ಮಕ ಶಕ್ತಿ ತುಂಬಿ ಹರಿಯುತ್ತದಂತೆ.

ಪಲಾಶ ಹೂವನ್ನು ಎಲ್ಲಿ ಇಡಬೇಕು?

ನಿಮ್ಮ ಕೈಯಲ್ಲಿ ಹಣ ನಿಲ್ಲದಿದ್ದರೆ ಅಥವಾ ನಿಮ್ಮ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲದಿದ್ದರೆ ನೀವು ಪಲಾಶ ಹೂವನ್ನು ಮನೆಯ ಕಮಾನು ಅಥವಾ ಹಣ ಇಡುವ ಸ್ಥಳದಲ್ಲಿ ಇಡಬೇಕೆಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ. ಇದನ್ನು ಇಡುವ ಮೊದಲು ಹೂವನ್ನು ತೆಂಗಿನಕಾಯಿಯೊಂದಿಗೆ ಬಿಳಿ ಬಟ್ಟೆಯಲ್ಲಿ ಕಟ್ಟಬೇಕು. ನಂತರ ಅದನ್ನು ನಿಮ್ಮ ಕಮಾನು ಅಥವಾ ಹಣ ಇಡುವ ಜಾಗದಲ್ಲಿ ಇಡಬೇಕು.  

ಇದನ್ನೂ ಓದಿ: Kanya Sankranti 2022: ಕನ್ಯಾ ಸಂಕ್ರಮಣದ ದಿನ ಘನತೆ-ಗೌರವ ವೃದ್ಧಿಗಾಗಿ ಈ ರೀತಿ ಸೂರ್ಯನ ಉಪಾಸನೆ ಕೈಗೊಳ್ಳಿ 

ಪಲಾಶ ಹೂವಿನ ಪ್ರಯೋಜನಗಳು

ನೀವು ಈ ಸಣ್ಣ ಕೆಲಸ ಮಾಡಿದರೆ ಮುಂದೆಂದೂ ನಿಮಗೆ ಆರ್ಥಿಕ ಸಮಸ್ಯೆ ಕಾಡುವುದಿಲ್ಲ. ತಾಯಿ ಲಕ್ಷ್ಮಿದೇವಿಗೆ ಪಲಾಶ ಹೂವುಗಳನ್ನು ಅರ್ಪಿಸುವುದರಿಂದ ಅನೇಕ ಪ್ರಯೋಜನಗಳಿವೆ. ಇದನ್ನು ತಾಯಿಗೆ ಅರ್ಪಿಸುವುದರಿಂದ ನಿಮ್ಮ ಪ್ರತಿಯೊಂದು ಆಸೆಗಳೂ ಈಡೇರುತ್ತವಂತೆ. ಅಷ್ಟೇ ಅಲ್ಲ ದೀರ್ಘಕಾಲದಿಂದ ಯಾವುದಾದರೂ ಕಾಯಿಲೆಯಿಂದ ಬಳಲುತ್ತಿದ್ದರೆ ಈ ಹೂ ಪರಿಣಾಮಕಾರಿ ಔಷಧಿಯಂತೆ. ಬಿಳಿಯ ಕಾಟನ್ ಬಟ್ಟೆಯಲ್ಲಿ ಸುತ್ತಿ ಕೈ ಮಣಿಕಟ್ಟಿನ ಮೇಲೆ ಕಟ್ಟಿದರೆ ಸಾಕು. ಹೀಗೆ ಮಾಡುವುದರಿಂದ ರೋಗಗಳಿಂದ ಮುಕ್ತಿ ದೊರೆಯುತ್ತದೆ ಮತ್ತು ಅದೇ ರೀತಿ ಗ್ರಹಗಳ ಸ್ಥಿತಿಯೂ ಸರಿಯಾಗಿರುತ್ತದೆ ಎಂಬ ನಂಬಿಕೆ ಇದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News