ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಎರಡನೇ ದಿನದಂದು ರಿಷಬ್ ಪಂತ್ ಕೇವಲ 28 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ವೇಗವಾಗಿ ಅರ್ಧಶತಕ ಗಳಿಸಿದ ಭಾರತೀಯ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು.
ಇದನ್ನೂ ಓದಿ: India vs Sri Lanka 1st Test: 35 ವರ್ಷಗಳ ಕಪಿಲ್ ದೇವ್ ದಾಖಲೆ ಮುರಿದ ರವೀಂದ್ರ ಜಡೇಜಾ..!
ದಿನದ ಆರಂಭದಲ್ಲಿ ಶ್ರೀಲಂಕಾವನ್ನು 109 ರನ್‌ಗಳಿಗೆ ಆಲೌಟ್ ಮಾಡಿದ ನಂತರ ಭಾರತ ತಂಡವು ಎರಡನೇ ಇನಿಂಗ್ಸ್ ವೇಗವಾಗಿ ರನ್ ಗಳಿಸಲು ಮುಂದಾಯಿತು.ಇದೇ ವೇಳೆ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಆರಂಭಿಸಿದ ರಿಷಬ್ ಪಂತ್ ಕೇವಲ 31 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಗಳ ನೆರವಿನಿಂದ 50 ರನ್ ಗಳಿಸಿ ವಿಕೆಟ್ ಒಪ್ಪಿಸುವ ಮೊದಲು ಅವರು ಅತಿ ವೇಗದ ಅರ್ಧ ಶತಕ ಪೂರೈಸಿದ ದಾಖಲೆಗೆ ಕಾರಣಕರ್ತರಾದರು. ಅವರು ಅರ್ಧ ಶತಕವನ್ನು ಗಳಿಸಿದಾಗ ಕೇವಲ 28 ಎಸೆತಗಳನ್ನು ಎದುರಿಸಿದ್ದರು.
The fastest ever half-century by an Indian man in Test history!@RishabhPant17 take a bow 👏 👏 👏#WTC23 | #INDvSL | https://t.co/KjsUYvb3pb pic.twitter.com/jBEDcLu7N4
— ICC (@ICC) March 13, 2022
ಇದನ್ನೂ ಓದಿ: India vs SL: ಕಪಿಲ್ ದೇವ್ ದಾಖಲೆ ಹಿಂದಿಕ್ಕಿದ ನಂತರ ಆರ್.ಅಶ್ವಿನ್ ಹೇಳಿದ್ದೇನು?
ಪಂತ್ ವೇಗವಾಗಿ ಅರ್ಧಶತಕವನ್ನು ಗಳಿಸುವ ಮೂಲಕ ಕಪಿಲ್ ದೇವ್ (Kapil Dev) ಅವರ ಸುಮಾರು 40 ವರ್ಷಗಳ ಟೆಸ್ಟ್ ದಾಖಲೆಯನ್ನು ಮುರಿದರು.1982 ರ ಕರಾಚಿ ಟೆಸ್ಟ್‌ನಲ್ಲಿ ಪಾಕಿಸ್ತಾನದ ವಿರುದ್ಧ ಕಪಿಲ್ ದೇವ್ ಕೇವಲ 30 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು.ಆದಾಗ್ಯೂ ಆ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನವು ಇನ್ನಿಂಗ್ಸ್ ಸಹಿತ 86 ರನ್‌ಗಳಿಂದ ಗೆದ್ದುಕೊಂಡಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.