ಆರ್ಟ್ ಆಫ್ ಲಿವಿಂಗ್ನ ಉಪಕ್ರಮವಾದ ವರ್ಲ್ಡ್ ಫೋರಮ್ ಫಾರ್ ಆರ್ಟ್ ಅಂಡ್ ಕಲ್ಚರ್ (WFAC), ಭಾವ್ - ದಿ ಎಕ್ಸ್ಪ್ರೆಶನ್ಸ್ ಸಮ್ಮಿಟ್ 2023 ಎಂಬ ಶೀರ್ಷಿಕೆಯ ನಾಲ್ಕು ದಿನಗಳ ಪ್ರದರ್ಶನ ಮತ್ತು ಲಲಿತಕಲೆಗಳ ಕ್ಯುರೇಟೆಡ್, ಅವಂತ್-ಗಾರ್ಡ್ ನಾಲ್ಕು ದಿನಗಳ ಉತ್ಸವಕ್ಕೆ ಆರ್ಟ್ ಆಫ್ ಲಿವಿಂಗ್ ಇಂಟರ್ನ್ಯಾಷನಲ್ ಸೆಂಟರ್ ಸಾಕ್ಷಿಯಾಯಿತು.
ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸವಾಗಿದ್ದ ಪಾಕ್ ಯುವತಿ ಬಂಧನ. ಬೆಂಗಳೂರಿನ ಸರ್ಜಾಪುರದ ಜುನ್ನಸಂದ್ರದಲ್ಲಿ ಇಕ್ರಾ ಜೀವನಿ ಎಂಬ ಯುವತಿ ವಾಸವಿದ್ದಳು. ನೇಪಾಳದಿಂದ ಭಾರತ ಗಡಿ ದಾಟಿದ್ದ ಇಕ್ರಾ ಜೀವನಿ (19) ಬಂಧನ.
ಮೆಟ್ರೋ ಪಿಲ್ಲರ್ ಬಿದ್ದು ತಾಯಿ, ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ BMRCL ಎಂಡಿ ಅಂಜುಂ ಪರ್ವೇಜ್ಗೆ ಪೊಲೀಸರು ನೋಟಿಸ್ ನೀಡಿದ್ದಾರೆ. BMRCL ಎಂಡಿ ಪರ್ವೇಜ್ ಸೇರಿ 15 ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ.
ಬೆಂಗಳೂರಿನಲ್ಲಿ ಖತರ್ನಾಕ್ 'ಚಡ್ಡಿ'ಗ್ಯಾಂಗ್ ಅರೆಸ್ಟ್ ಆಗಿದೆ. ಚಡ್ಡಿ ಹಾಕಿಕೊಂಡು ಬೈಕ್ ಏರುತ್ತಿದ್ದವರು ಚಿನ್ನದ ಸರ ಕಿತ್ತುಕೊಳ್ಳದೇ ಹೋಗ್ತಿರಲಿಲ್ಲ. ಸದ್ಯ ಹನುಮಂತನಗರ ಪೊಲೀಸರು 'ಚಡ್ಡಿ'ಗ್ಯಾಂಗ್ ಹೆಡೆಮುರಿಕಟ್ಟಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ 2ನೇ ದಿನ ಮುಂದುವರಿದಿದೆ.. ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಚಳಿಯನ್ನೂ ಲೆಕ್ಕಿಸದೇ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಿದ್ದಾರೆ..
ಮೃತ ಶ್ರೀನಾಥ್ ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ನಿವಾಸಿ ಎಂದು ತಿಳಿದು ಬಂದಿದೆ. ತಮ್ಮ ಮಗನ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.
Man Killed Street dog : ರಸ್ತೆಯಲ್ಲಿ ತನ್ನ ಪಾಡಿಗೆ ತಾನು ಮಲಗಿದ್ದ ಬೀದಿನಾಯಿ ಮೇಲೆ ಚಾಲಕನೊಬ್ಬ ಕಾರು ಹತ್ತಿಸಿರುವ ಅಮಾನವೀಯ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಸದ್ಯ ಮೂಕಪ್ರಾಣಿ ಮೇಲೆ ಕಾರು ಹತ್ತಿಸಿರುವ ಚಾಲಕನ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮೀಯವಾಗಿದ್ದ ಮಹಿಳೆಯ ಖಾಸಗಿ ಫೋಟೋ, ವಿಡಿಯೋಗ ವೈರಲ್ ಮಾಡಿದ್ದ ಆರೋಪಿಯನ್ನು ಈಶಾನ್ಯ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಮರ್ ಪರಿಮಣಿಕನ ಬಂಧಿತ ಆರೋಪಿ. ಪಶ್ಚಿಮ ಬಂಗಾಳ ಮೂಲದವನಾದ ಆರೋಪಿ ಸಮರ್ ಪರಿಮಣಿಕನನ್ನು ಬೆಂಗಳೂರಿನ ಹಲಸೂರಿನ ಬಾಡಿಗೆ ಮನೆಯಲ್ಲಿ ಬಂಧಿಸಲಾಗಿದೆ.
Crime News: ಕೊಲೆ ಮಾಡಿ ಬೈಕ್ ನಲ್ಲೇ ಹೆಣ ಸಾಗಿಸಿದ್ದ ಖತರ್ನಾಕ್ ಆರೋಪಿಗಳನ್ನ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ. ದಂಪತಿ ರೀನಾ, ಬಿಜೋಯ್ ಹಾಗೂ ಸ್ನೇಹಿತ ಗಂಗೇಶ್ ಬಂಧಿತ ಆರೋಪಿಗಳಾಗಿದ್ದು, ಕಳೆದ 3ನೇ ತಾರೀಖು ನಿಬಾಶೀಸ್ ಪಾಲ್ ನ ಕೊಲೆ ಮಾಡಿ ಆರೋಪಿಗಳು ಶವ ಬಿಸಾಕಿ ಹೋಗಿದ್ದರು.
ಪ್ರಯಾಣಿಕರಿಂದ ಆಟೋ ಚಾಲಕರ ಬೇಕಾಬಿಟ್ಟಿ ಸುಲಿಗೆ ಕಡಿವಾಣ ಹಾಕಲು ಸಂಚಾರಿ ಪೊಲೀಸರು ಹಾಗೂ BMRCL ಯೋಜನೆ ರೂಪಿಸಿದೆ. ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮೆಟ್ರೋ ನಿಲ್ದಾಣದ ಎದುರು ಪ್ರೀಪೇಯ್ಡ್ ಆಟೋ ನಿಲ್ದಾಣವನ್ನು ಆರಂಭಿಸಲು ಪ್ಲಾನ್ ಮಾಡಲಾಗುತ್ತಿದೆ.
ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಅಶ್ವತ್ಥ್ ನಾರಾಯಣ ಬೆಂಗಳೂರಿನ ಟಿಟಿಡಿ ದೇಗುಲಕ್ಕೆ ಭೇಟಿ ನೀಡಿದ್ದು ವೆಂಕಟೇಶ್ವರನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.