"ವಿಜಯೇಂದ್ರ ಚಡ್ಡಿ ಹಾಕೋ ಮುಂಚೆ ನಾನು ಜಿಲ್ಲಾಧ್ಯಕ್ಷನಾಗಿದ್ದೆ. ವಿಜಯೇಂದ್ರ ಮತ್ತು ಅವರ ಕುಟುಂಬ ರಾಜಕಾರಣದ ಮೇಲೆ ಹೇರಿಕೊಳ್ಳಲು ನೋಡುತ್ತಿದೆ. ನಾವು ಈ ಬಚ್ಚಾ ಯಿಂದ ಕಲಿಯಬೇಕೆ?" ಎಂದು ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದರು.
ರಾಜ್ಯ ಬಿಜೆಪಿ ಮನೆಯಲ್ಲಿ ಮತ್ತಷ್ಟು ಬುಗಿಲೆದ್ದ ಭಿನ್ನಮತ
ಯತ್ನಾಳ್ ಬಣಕ್ಕೆ ಸೇರ್ಪಡೆಯಾದ ಮತ್ತಷ್ಟು ಅಸಮಾಧಾನಿತರು
ಮಾಜಿ ಸಚಿವ ಶ್ರೀರಾಮುಲು, ರಾಜುಗೌಡ ಯತ್ನಾಳ್ ಬಣ ಸೇರ್ಪಡೆ
ಕೋರ್ ಕಮಿಟಿ ಸಭೆಯಲ್ಲಿ ರಾಮುಲು ವಿರುದ್ಧ ಅಸಮಾಧಾನ ಹಿನ್ನೆಲೆ
ಶಾಸಕ ಯತ್ನಾಳ್ ಬಣದ ಜೊತೆ ಸೇರಿದ ಮಾಜಿ ಸಚಿವ ಶ್ರೀರಾಮುಲು
ದೆಹಲಿಯಲ್ಲಿ ಅಮಿತ್ ಶಾ ಭೇಟಿಯಾದ ವಿಜಯೇಂದ್ರ
ರಾಜ್ಯ ಬಿಜೆಪಿ ವಿದ್ಯಮಾನಗಳ ಬಗ್ಗೆ ಶಾ ಜೊತೆ ಚರ್ಚೆ
ಯತ್ನಾಳ್ ಟೀಂನ ಪ್ರತ್ಯೇಕ ಹೋರಾಟದ ಬಗ್ಗೆ ಪ್ರಸ್ತಾಪ
ಪ್ರತ್ಯೇಕ ಹೋರಾಟದ ಬಗ್ಗೆ ಹೈಕಮಾಂಡ್ ಬಳಿ ಚರ್ಚೆ
ವಕ್ಫ್ ಹೆಸರಲ್ಲಿ ಪ್ರತ್ಯೇಕ ಹೋರಾಟ ಅಂತ ಕಂಪ್ಲೆಂಟ್
ಏಟಿಗೆ ಎದಿರೇಟು ನೀಡುತ್ತಾ ಬಣ ರಾಜಕೀಯದಲ್ಲಿ ಮೇಲುಗೈ ಸಾಧಿಸಲು ಬಿಜೆಪಿಯೊಳಗೆ ಬಲ ಪ್ರದರ್ಶನ ಶುರುವಾಗಿದೆ. ಅತ್ತ ಯತ್ನಾಳ್ ಟೀಂ ವಕ್ಫ್ ವಿಚಾರ ಮುಂದಿಟ್ಟು ಹೋರಾಟ ನಡೆಸುತ್ತಾ ಹೈಕಮಾಂಡ್ ಅಂಗಳಕ್ಕೆ ಹೋಗಲು ಸಜ್ಜಾಗಿದ್ದರೆ, ಇತ್ತ ವಿಜಯೇಂದ್ರ ಬೆಂಬಲಿಗರು ಸಭೆ ಸೇರಿ ಯತ್ನಾಳ್ ಉಚ್ಚಾಟನೆಗೆ ಆಗ್ರಹಿಸಿದ್ದಾರೆ. ಅದೇನ್ ದಾಖಲೆ ಇದೆ ಬಿಡುಗಡೆ ಮಾಡಿ ಎಂದು ವಿಜಯೇಂದ್ರ ಸಹ ಸವಾಲು ಹಾಕಿದ್ದಾರೆ.
ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ತೊಡೆತಟ್ಟಿರುವ ಯತ್ನಾಳ್ ಟೀಂ ನಡೆಸುತ್ತಿದ್ದ ವಕ್ಫ್ ಹೋರಾಟ ಬೆಳಗಾವಿಯಲ್ಲಿ ಅಂತ್ಯ ಗೊಂಡಿದೆ. ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ ಜೊತೆಗೆ ಸಭೆ ನಡೆಸಿದ ಯತ್ನಾಳ್, ಇದು ಕೇವಲ ಟ್ರೇಲರ್... ಪಿಕ್ಚರ್ ಅಬಿ ಬಾಕಿ ಹೈ ಎಂದು ಹೇಳಿದ್ರು. ಅಲ್ಲದೆ ವಕ್ಫ್ ಹೋರಾಟದ ವರದಿ ಜೆಪಿಸಿಗೆ ನೀಡಲು ದೆಹಲಿಗೆ ಹಾರಿದ್ದಾರೆ. ಹೈಕಮಾಂಡ್ ಭೇಟಿಯಾಗಿ ವಿಜಯೇಂದ್ರ ವಿರುದ್ಧ ದೂರು ನೀಡಲಿದ್ದಾರೆ.
ವಕ್ಫ್ ಮಂಡಳಿ ಆಸ್ತಿ ವಿವಾದ ಭುಗಿಲೆದ್ದಾಗಿನಿಂದ ರಾಜ್ಯ ಬಿಜೆಪಿ ನಾಯಕರಿಂದ ಅಂತರ ಕಾಯ್ದುಕೊಳ್ಳುವ ಜತೆಗೆ ಪಕ್ಷದ ಹೆಸರಿನಲ್ಲೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತ್ಯೇಕವಾಗಿ ಹೋರಾಟ ನಡೆಸುತ್ತಿರುವುದು ಬಿಜೆಪಿಗೆ ತೀವ್ರ ಇರುಸು ಮುರುಸು ತಂದಿದೆ.
ಉತ್ತರ ಕರ್ನಾಟಕದವರಿಗೆ ಒಗಟು ಮಾತಿನ ಅರ್ಥ ಗೊತ್ತಾಗಲ್ಲ
ಅದು ಸಿ.ಟಿ.ರವಿ, ವಿಜಯೇಂದ್ರ ಅವರಿಗೆ ಮಾತ್ರ ಗೊತ್ತಾಗುತ್ತೆ
ಥೋ.. ಬಿಡ್ರಿ ನಾವು ಬಿಜೆಪಿ ಅವರಿಗಾಗಿ ಹೋರಾಟ ಮಾಡ್ತಿಲ್ಲ
ವಿಜಯೇಂದ್ರ ವಿರುದ್ಧ ಯಾದಗಿರಿಯಲ್ಲಿ ಯತ್ನಾಳ್ ಹೇಳಿಕೆ
ಜೆಡಿಎಸ್ ಗೆ ಮರುಜನ್ಮ ಕೊಟ್ಟಿದ್ದೇವೆ ಎಂಬ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿಕೆ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು; ಯಾರಿಗೆ ಯಾರು ಮರುಜನ್ಮ ಕೊಟ್ಟಿದ್ದಾರೆ ಎಂದು ಬೀದಿಯಲ್ಲಿ ಚರ್ಚೆ ಮಾಡೋಕೆ ಆಗಲ್ಲ ಅವರು ಹೇಳಿದ್ದಾರೆ.
ಮಾನನಷ್ಟ ಪ್ರಕರಣ ಕ್ಕೆ ತಡೆ ಕೋರಿ ಶಾಸಕ ಯತ್ನಾಳ್ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.ಇದೇ ವೇಳೆ ಕೀಳು ಅಭಿರುಚಿಯ ಹೇಳಿಕೆಯನ್ನ ಪ್ರಶ್ನಿಸಿ ಶಾಸಕರನ್ನು ತರಾಟೆಗೆ ತೆಗೆದುಕೊಂಡಿದೆ.
ಇಂಧನ ಏರಿಕೆ ವಿಷಯದಲ್ಲಿ ಸುಳ್ಳಿನ ಸರಮಾಲೆ/ತಪ್ಪು ಮಾಹಿತಿಯನ್ನು ಬಿತ್ತರಿಸುವುದು ಕಾಂಗ್ರೆಸ್ ಪಕ್ಷದ ಕಪಟ ನಾಟಕವಾಗಿದೆ ಎಂದು ಬಿಜೆಪಿ ಪಕ್ಷದ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಕುಟುಂಬದ ಬಗ್ಗೆ ವೈಯಕ್ತಿಕ ನಿಂದನೆಯ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಬಸವನಗೌಡ ಯತ್ನಾಳ್ ಅವರಿಗೆ ರಾಜ್ಯ ಕಾಂಗ್ರೆಸ್ ತಿರುಗೇಟು ನೀಡಿದೆ.ಯತ್ನಾಳ್ ಅವರನ್ನ ಸ್ವತಃ ಬಿಜೆಪಿಯೇ ಎತ್ತಿ ಮೂಲೆಗೆ ಎಸೆದಿದೆ.. ಬಸವನಗೌಡ ಅವರ ಬಾಯಿ ಬಚ್ಚಲು ಎಂದು ಬಿಎಸ್ ವೈ ಬಣದ ನಾಯಕರೇ ಹೇಳುತ್ತಿದ್ದಾರೆ. ಯತ್ನಾಳ್ ಅವರ ಮಾನಸಿಕ ಹಾಗೂ ಬಾಯಿ ಚಿಕಿತ್ಸೆಗೆ ಕಾಂಗ್ರೆಸ್ ಸರ್ಕಾರ ಉಚಿತ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಲು ಸಿದ್ಧ.. ಇದು ಕಾಂಗ್ರೆಸ್ ನ ಗ್ಯಾರಂಟಿ ಎಂದು ಕೆಪಿಸಿಸಿ ಟ್ವೀಟ್ ಮಾಡಿದೆ.
₹40,000 crore scam: ಸಚಿವ ಮಧು ಬಂಗಾರಪ್ಪರವರದ್ದು ವಯಕ್ತಿಕ ವ್ಯವಹಾರಕ್ಕೆ ಸಂಬಂಧಿಸಿದ ವಿಚಾರ, ಅವರು ಸಾರ್ವಜನಿಕರ ತೆರಿಗೆಯ ಹಣವನ್ನು ಲಾಪಟಾಯಿಸಿಲ್ಲ, ತಮ್ಮ ಇಲಾಖೆಯಲ್ಲಿ ಅವ್ಯವಹಾರ ಮಾಡಿಲ್ಲ, ಸರ್ಕಾರಕ್ಕೆ ಸಂಬಂಧಿಸಿದಂತೆ ಯಾವುದೇ ಹಗರಣ ನಡೆಸಿಲ್ಲ, ಸರ್ಕಾರದ ಹಣಕ್ಕೆ ನಷ್ಟ ಉಂಟುಮಾಡಿಲ್ಲವೆಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.
ಬಸನಗೌಡ ಪಾಟೀಲ್ ಯತ್ನಾಳ್ ಅವರ 40 ಸಾವಿರ ಕೋಟಿ ರೂ.ಆರೋಪ ರಾಜ್ಯ ಬಿಜೆಪಿಯನ್ನ ತಲ್ಲಣಗೊಳಿಸಿದೆ. ಇಂದು ನಡೆದ ಬಿಜೆಪಿ ಹಿರಿಯ ನಾಯಕರ ಸಭೆಯಲ್ಲೂ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಎಷ್ಟರ ಮಟ್ಟಿಗೆ ಅಂದರೆ ಸರ್ಕಾರದ ವಿರುದ್ಧದ ಹೋರಾಟಕ್ಕೂ ಇದು ಅಡ್ಡಿಯಾಗಿದೆ. ಲೋಕಸಭಾ ಚುನಾವಣೆಯ ಮೇಲೂ ಇದರ ಪರಿಣಾಮ ಬೀರಲಿದೆ.ಆದ್ದರಿಂದ ಇಂದಿನ ಬಿಜೆಪಿ ಸಭೆಯಲ್ಲಿ ಯತ್ನಾಳ್ ಬಗ್ಗೆಯೇ ಹೆಚ್ಚು ಚರ್ಚೆ ನಡೆದಿದೆ.
ವಿಜಯಪುರ ಬಿಜೆಪಿ ಶಾಸಕ ಬಸನಗೌಡ್ ಯತ್ನಾಳ್ ಬಿಜೆಪಿ ಅವಧಿಯಲ್ಲಿ ನಡೆದಿರುವ ಕೋವಿಡ್ ಹಗರಣಗಳ ದಾಖಲಾತಿಗಳನ್ನು ವಿಚಾರಣಾ ಆಯೋಗದ ಮುಂದಿರಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ 40 ಸಾವಿರ ಕೋಟಿ ಕೋವಿಡ್ ಹಗರಣ ನಡೆದಿದೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಕೇವಲ ಬಾಯಿ ಮಾತಲ್ಲಿ ಹೇಳಿದರೆ ಸಾಲದು. ತಮ್ಮ ಬಳಿ ಇರುವ ಮಾಹಿತಿ ಹಾಗೂ ದಾಖಲೆಗಳನ್ನ ಜಸ್ಟಿಸ್ ಕುನ್ನಾ ಅವರ ತನಿಖಾ ಆಯೋಗಕ್ಕೆ ನೀಡಲಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
Rs 40000 crore scam during covid 19: ನಾನು ಪ್ರಧಾನಿ ಮೋದಿಯವರಿಗಾಗಿ ಕೆಲಸ ಮಾಡುತ್ತಿದ್ದೇನೆ. ಹೀಗಾಗಿ ನನಗೆ ನೋಟಿಸ್ ಕೊಟ್ಟು ಪಕ್ಷದಿಂದ ಉಚ್ಚಾಟಿಸಿ ನೋಡಲಿ. ಆಗ ಇವರೆಲ್ಲರ ಬಣ್ಣ ಬಯಲು ಮಾಡುತ್ತೇನೆ’ ಅಂತಾ ಪರೋಕ್ಷವಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರ ವಿರುದ್ಧ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
BJP vs BJP: ಕಳ್ಳನ ಹುಳುಕು ಮತ್ತೊಬ್ಬ ಕಳ್ಳನಿಗೆ ಮಾತ್ರ ಗೊತ್ತಿರುತ್ತದೆ ಎಂಬಂತೆ ಬಿಜೆಪಿಯ ಭ್ರಷ್ಟಾಚಾರದ ಜಾತಕ ಯತ್ನಾಳ್ ಕೈಯ್ಯಲ್ಲಿದೆ. ಯತ್ನಾಳ್ ಅದೆಷ್ಟೇ ಪಕ್ಷ ವಿರೋಧಿ ಹೇಳಿಕೆ ಕೊಟ್ಟರೂ ಕ್ರಮ ಕೈಗೊಳ್ಳುವ ಧೈರ್ಯ ತೋರದಿರುವುದು ಇದೇ ಕಾರಣಕ್ಕಾ ಬಿಜೆಪಿ? ಎಂದು ಕಾಂಗ್ರೆಸ್ ಟೀಕಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.