ದೆಹಲಿಯಲ್ಲಿ ಜಗದಾಂಬಿಕಾ ಪಾಲ್ ಭೇಟಿಯಾದ ಯತ್ನಾಳ್ ಟೀಂ
ರಾಜ್ಯದಲ್ಲಿ ನಡೆದ ವಕ್ಪ್ ಹೋರಾಟದ ವರದಿ ಸಲ್ಲಿಸಿದ ರೆಬಲ್ಸ್ ಟೀಂ
ಜಗದಾಂಬಿಕಾ ಪಾಲ್, ಜಂಟಿ ಸದನ ಸಮಿತಿ ಅಧ್ಯಕ್ಷ
ವಕ್ಪ್ ಪ್ರಕರಣದಲ್ಲಿ ನಡೆದಿರುವ ಘಟನೆಗಳು, ನೋಟೀಸ್ ಜಾರಿ,
ಹೋರಾಟ ಬೆಳವಣಿಗಳ ಬಗ್ಗೆ ಮಾಹಿತಿಹೊಂದಿರುವ ವರದಿ
ಪಕ್ಷ ವಿರೋಧಿ ಹೇಳಿಕೆ, ನಡೆಯನ್ನು ತೋರುತ್ತಿದ್ದೀರಿ. ಪಕ್ಷದ ವಿರುದ್ಧ ವಿನಾಕಾರಣ ಸುಳ್ಳು ಆರೋಪ. ಇದು ಪಕ್ಷದ ಚೌಕಟ್ಟು, ನಿಯಮವನ್ನು ಮೀರಿದೆ. ನೋಟಿಸ್ಗೆ ತಕ್ಷಣವೇ ಉತ್ತರ ನೀಡುವಂತೆ ಸೂಚನೆ . 10 ದಿನದೊಳಗೆ ಉತ್ತರ ನೀಡುವಂತೆ ಸೂಚನೆ.
ರಾಜ್ಯ ಸರಕಾರವು ಸ್ವಾಮೀಜಿಗಳ ವಿರುದ್ಧ ಎಫ್ಐಆರ್ ದಾಖಲು ಮಾಡಿ ಅವರಿಗೆ ತನಿಖೆಗೆ ಬರಲು ಒತ್ತಾಯಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.
ಏಟಿಗೆ ಎದಿರೇಟು ನೀಡುತ್ತಾ ಬಣ ರಾಜಕೀಯದಲ್ಲಿ ಮೇಲುಗೈ ಸಾಧಿಸಲು ಬಿಜೆಪಿಯೊಳಗೆ ಬಲ ಪ್ರದರ್ಶನ ಶುರುವಾಗಿದೆ. ಅತ್ತ ಯತ್ನಾಳ್ ಟೀಂ ವಕ್ಫ್ ವಿಚಾರ ಮುಂದಿಟ್ಟು ಹೋರಾಟ ನಡೆಸುತ್ತಾ ಹೈಕಮಾಂಡ್ ಅಂಗಳಕ್ಕೆ ಹೋಗಲು ಸಜ್ಜಾಗಿದ್ದರೆ, ಇತ್ತ ವಿಜಯೇಂದ್ರ ಬೆಂಬಲಿಗರು ಸಭೆ ಸೇರಿ ಯತ್ನಾಳ್ ಉಚ್ಚಾಟನೆಗೆ ಆಗ್ರಹಿಸಿದ್ದಾರೆ. ಅದೇನ್ ದಾಖಲೆ ಇದೆ ಬಿಡುಗಡೆ ಮಾಡಿ ಎಂದು ವಿಜಯೇಂದ್ರ ಸಹ ಸವಾಲು ಹಾಕಿದ್ದಾರೆ.
ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ತೊಡೆತಟ್ಟಿರುವ ಯತ್ನಾಳ್ ಟೀಂ ನಡೆಸುತ್ತಿದ್ದ ವಕ್ಫ್ ಹೋರಾಟ ಬೆಳಗಾವಿಯಲ್ಲಿ ಅಂತ್ಯ ಗೊಂಡಿದೆ. ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ ಜೊತೆಗೆ ಸಭೆ ನಡೆಸಿದ ಯತ್ನಾಳ್, ಇದು ಕೇವಲ ಟ್ರೇಲರ್... ಪಿಕ್ಚರ್ ಅಬಿ ಬಾಕಿ ಹೈ ಎಂದು ಹೇಳಿದ್ರು. ಅಲ್ಲದೆ ವಕ್ಫ್ ಹೋರಾಟದ ವರದಿ ಜೆಪಿಸಿಗೆ ನೀಡಲು ದೆಹಲಿಗೆ ಹಾರಿದ್ದಾರೆ. ಹೈಕಮಾಂಡ್ ಭೇಟಿಯಾಗಿ ವಿಜಯೇಂದ್ರ ವಿರುದ್ಧ ದೂರು ನೀಡಲಿದ್ದಾರೆ.
ವಕ್ಫ್ ಮಂಡಳಿ ಆಸ್ತಿ ವಿವಾದ ಭುಗಿಲೆದ್ದಾಗಿನಿಂದ ರಾಜ್ಯ ಬಿಜೆಪಿ ನಾಯಕರಿಂದ ಅಂತರ ಕಾಯ್ದುಕೊಳ್ಳುವ ಜತೆಗೆ ಪಕ್ಷದ ಹೆಸರಿನಲ್ಲೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತ್ಯೇಕವಾಗಿ ಹೋರಾಟ ನಡೆಸುತ್ತಿರುವುದು ಬಿಜೆಪಿಗೆ ತೀವ್ರ ಇರುಸು ಮುರುಸು ತಂದಿದೆ.
ಉತ್ತರ ಕರ್ನಾಟಕದವರಿಗೆ ಒಗಟು ಮಾತಿನ ಅರ್ಥ ಗೊತ್ತಾಗಲ್ಲ
ಅದು ಸಿ.ಟಿ.ರವಿ, ವಿಜಯೇಂದ್ರ ಅವರಿಗೆ ಮಾತ್ರ ಗೊತ್ತಾಗುತ್ತೆ
ಥೋ.. ಬಿಡ್ರಿ ನಾವು ಬಿಜೆಪಿ ಅವರಿಗಾಗಿ ಹೋರಾಟ ಮಾಡ್ತಿಲ್ಲ
ವಿಜಯೇಂದ್ರ ವಿರುದ್ಧ ಯಾದಗಿರಿಯಲ್ಲಿ ಯತ್ನಾಳ್ ಹೇಳಿಕೆ
R. Ashoka: ಅನ್ವರ್ ಮಾಣಿಪ್ಪಾಡಿ ಸಮಿತಿಯ ವರದಿಯ ಆಧಾರದ ಮೇಲೆ ವಕ್ಫ್ ಜಮೀನು ಕಬಳಿಸಿದವರಿಗೆ ಬಿಜೆಪಿ ಸರ್ಕಾರ ನೋಟಿಸ್ ನೀಡಿತ್ತು. ಒಂದು ವೇಳೆ ತಪ್ಪಾಗಿ ರೈತರಿಗೆ ನೋಟಿಸ್ ನೀಡಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಈಗಿನ ಕಾಂಗ್ರೆಸ್ ಸರ್ಕಾರ ಕ್ರಮ ಕೈಗೊಳ್ಳಲಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ನನಗೆ ವಕ್ಫ್ ಬೋರ್ಡ್ ಜಾಗ ತಗೊಂಡಿದ್ದಾರೆ ಅಂತಿದ್ದಾರೆ
ನಿಮಗೆ ಗಂಡಸ್ತನ ಇದ್ರೆ ನನ್ ಮೇಲೆ ತನಿಖೆ ಮಾಡಿಸಿ
ಬಿಜೆಪಿ ವಿರುದ್ಧ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಕಿಡಿ
ವಕ್ಫ್ ಬೋರ್ಡ್ ಮಾಡಿದ್ದು ಬ್ರಿಟಿಷರು, ಕಾಂಗ್ರೆಸ್ಸಿಗರಲ್ಲ
400 ವರ್ಷಗಳಿಂದ ವಕ್ಪ್ ಬೋರ್ಡ್ ಇದೆ, ಯಾರೂ ಮಾಡಿಲ್ಲ
ರಾಜಕೀಯ ಭೀಷ್ಮನಂತೆ ತಾತನ ತಂತ್ರಗಾರಿಕೆ,ಪಾರ್ಥನಂತೆ ಅಪ್ಪನ ಕಾರ್ಯವೈಕರಿ.ಘಟಾನುಘಟಿ ರಾಜಕೀಯ ಧುರೀಣರ ಮಾರ್ಗದರ್ಶನದಲ್ಲಿ ಈ ಬಾರೀ ನಿಖಿಲ್ ಕುಮಾರಸ್ವಾಮಿ ಸೋಲಿನ ವನವಾಸದಿಂದ ಹೊರ ಬರ್ತಾರೆ ಅಂತ ವಿಶ್ಲೇಷಣೆ ಮಾಡಲಾಗಿತ್ತು.ಆದ್ರೆ ಫಲಿತಾಂಶ ಎಲ್ಲವೂ ಉಲ್ಟಾ ಆಗಿದೆ.ತಾತ ಭೀಷ್ಮನ ಅನುಭವದ ಮುಂದೆಯೇ ಸೈನಿಕ ದಳಪತಿಗಳ ಕೋಟೆ ಬೇದಿಸಿ ಪಟ್ಟಾಭಿಷೇಕ ಮಾಡಿಸಿಕೊಂಡಿದ್ದಾನೆ.
BJP State President: ರಾಜ್ಯ ಬಿಜೆಪಿ ʼಮನೆಯೊಂದು ಎರಡು ಬಾಗಿಲುʼ ಆಗಿರುವುದು ಎಲ್ಲರಿಗೂ ತಿಳಿದ ವಿಚಾರ. ಹಿಂದೂ ಫೈರ್ ಬ್ರಾಂಡ್ ಎಂದು ಕರೆಯಲ್ಪಡುವ ಬಸನಗೌಡ ಪಾಟೀಲ್ ಯತ್ನಾಳ್ ಈ ಹಿಂದೆ ಚಿಕ್ಕೋಡಿಯಲ್ಲಿ ಮಾತನಾಡಿ, "ರಾಜ್ಯದಲ್ಲಿ ಬಿಜೆಪಿ ಹೀನಾಯವಾಗಿ ಸೋಲಿರುವ ಬಗ್ಗೆ ರಾಜ್ಯಾಧ್ಯಕ್ಷರನ್ನು ಕೇಳಬೇಕು. ಅವರ ಬಿಜೆಪಿ ಪಕ್ಷದ ನೇತೃತ್ವವನ್ನು ಜನರು ಒಪ್ಪಿಸಿದ್ದಾರೆ ಇಲ್ಲೋ ಎಂಬುದು ಗೊತ್ತಿಲ್ಲ. ಬಿಜೆಪಿಗೆ ಹೀನಾಯ ಸೋಲು ನಿರೀಕ್ಷೆ ಮಾಡಿರಲಿಲ್ಲ" ಎಂದಿದ್ದಾರೆ.
KERALA BYPOLLS 2024: ಕೇರಳ ರಾಜ್ಯದಲ್ಲಿ ಪಾಲಕ್ಕಾಡ್ ಮತ್ತು ಚೇಲಕ್ಕರ ವಿಧಾನಸಭಾ ಕ್ಷೇತ್ರಗಳ ಚಣಾವಣೆ ನಡೆದಿತ್ತು, ಇದರ ಜೊತೆಗೆ ವಯನಾಡು ಲೋಕಾಸಭಾ ಕ್ಷೇತ್ರದ ಚಣಾವಣೆ ಕೂಡ ನಡೆದಿತ್ತು. ಇದೀಗ ಇಂದೇ ವಯನಾಡು ಲೋಕಾಸಭಾ ಕ್ಷೇತ್ರದ ಫಲಿತಾಂಶ ಹೊರಬಿದ್ದಿದೆ ಇದರೊಂದಿಗೆ ಪ್ರಿಯಾಂಕ ವಾದ್ರಾ ಅವರ ಭವಿಷ್ಯ ಬಯಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.