ಗೇಲ್ ತಾನು ಬಹಳ ಸಮಯದಿಂದ ಬಯೋಬಬಲ್ನಲ್ಲಿದ್ದೇನೆ ಮತ್ತು ಟಿ 20 ವಿಶ್ವಕಪ್ಗೆ ಮುಂಚಿತವಾಗಿ ತನಗೆ ವಿರಾಮ ತೆಗೆದುಕೊಳ್ಳಲು ಬಯಸುತ್ತೇನೆ, ಅಲ್ಲದೆ, ಟಿ 20 ವಿಶ್ವಕಪ್ನಲ್ಲಿ ವೆಸ್ಟ್ ಇಂಡೀಸ್ಗೆ ರಿಫ್ರೆಶ್ ಆಗಬೇಕಿದೆ ಎಂದು ಹೇಳಿದ್ದಾರೆ. ಪಂಜಾಬ್ ಕಿಂಗ್ಸ್ ಐಪಿಎಲ್ 2021 ಅಂಕ ಪಟ್ಟಿಯಲ್ಲಿ 8 ಅಂಕಗಳೊಂದಿಗೆ 6 ನೇ ಸ್ಥಾನದಲ್ಲಿದೆ. ಪ್ಲೇಆಫ್ ತಲುಪುವ ಭರವಸೆ ಇನ್ನೂ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ, ಗೇಲ್ ಈ ರೀತಿ ಕೈ ಕೊಟ್ಟಿರುವುದು ಅವರಿಗೆ ದೊಡ್ಡ ಹೊಡೆತವಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ವಿಶ್ವದಾದ್ಯಂತ ಫ್ರ್ಯಾಂಚೈಸ್ ಕ್ರಿಕೆಟ್ನಲ್ಲಿ ಕ್ರಾಂತಿಯುಂಟು ಮಾಡಿದೆ. 3 ಗಂಟೆಗಳ ಕ್ರಿಕೆಟ್ ಉತ್ಸಾಹವು ಆಟಗಾರರ ಭಾಗವಹಿಸುವಿಕೆಗಾಗಿ ಲಕ್ಷಾಂತರ ಡಾಲರ್ಗಳನ್ನು ಗಳಿಸುವುದರೊಂದಿಗೆ ಭಾರಿ ಅನುಸರಣೆಯನ್ನು ಹೊಂದಿದೆ. ಆದಾಗ್ಯೂ, 2020 ರಲ್ಲಿ ಅನಿರೀಕ್ಷಿತ ಸಂದರ್ಭಗಳು ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಮುಂದೂಡಲು ಒತ್ತಾಯಿಸಿದೆ. ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ 21 ದಿನಗಳ ಲಾಕ್ಡೌನ್ ಕಾರಣ ಐಪಿಎಲ್ ಅನ್ನು ಏಪ್ರಿಲ್ 15 ರವರೆಗೆ ಮುಂದೂಡಲಾಗಿದೆ ಮತ್ತು ಈಗ ಅದನ್ನು ಮತ್ತಷ್ಟು ಮುಂದೂಡಬಹುದು.
ಭಾರತದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಭಾನುವಾರ ಟ್ವಿಟರ್ಗೆ ಕ್ರಿಸ್ ಗೇಲ್ ಹಿಂದಿಯಲ್ಲಿ ಡೈಲಾಗ್ ಹೇಳಲು ಪ್ರಯತ್ನಿಸುತ್ತಿರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ.ಯುವರಾಜ್ ಸಿಂಗ್ ಅವರು ಹಂಚಿಕೊಂಡಿರುವ ವೀಡಿಯೊದಲ್ಲಿ, ಕ್ರಿಸ್ ಗೇಲ್ ಅವರು ಹಿಂದಿ ಸಂಭಾಷಣೆ ನೀಡಲು ಪ್ರಯತ್ನಿಸುತ್ತಿದ್ದಂತೆ ವಿಫಲರಾಗುವುದನ್ನು ಕಾಣಬಹುದು. ಟ್ವಿಟ್ಟರ್ ನಲ್ಲಿ ವೀಡಿಯೋ ಹಂಚಿಕೊಂಡು 'ಕಾನ್ಫಿಡೆನ್ಸ್ ಮೇರಾ ! ಕಬರ್ ಬನೇಗಿ ತೇರಿ ಚೆನ್ನಾಗಿ ಹೇಳಿದಿರಿ ಕಾಕಾ' ಎಂದು ಬರೆದುಕೊಂಡಿದ್ದಾರೆ.
2019 ರ ಐಸಿಸಿ ಕ್ರಿಕೆಟ್ ವಿಶ್ವಕಪ್ನ 19 ನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿ ಪಾಯಿಂಟ್ಸ್ ಟೇಬಲ್ನಲ್ಲಿ ಎರಡನೇ ಸ್ಥಾನಕ್ಕೆ ಏರಿತು, ಅದು 4 ಪಂದ್ಯಗಳಲ್ಲಿ ಆರು ಅಂಕಗಳನ್ನು ಗಳಿಸಿದೆ. ಅದೇ ಸಂಖ್ಯೆಯ ಪಂದ್ಯಗಳನ್ನು ಆಡಿದ ವೆಸ್ಟ್ ಇಂಡೀಸ್ ಕೇವಲ ಮೂರು ಅಂಕಗಳೊಂದಿಗೆ 6 ನೇ ಸ್ಥಾನದಲ್ಲಿದೆ.
ವೆಸ್ಟ್ ಇಂಡೀಸ್ ನ ಸ್ಪೋಟಕ ಆಟಗಾರ ಕ್ರಿಸ್ ಗೇಲ್ ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ ನಂತರ ಅವರ ಸ್ಥಾನವನ್ನು ಕನ್ನಡಿಗ ಕೆ.ಎಲ್.ರಾಹುಲ್ ತುಂಬುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.