PM Kisan: ನವದೆಹಲಿಯ ಪುಸಾ ಕ್ಯಾಂಪಸ್ನಲ್ಲಿ ನಡೆಯುತ್ತಿರುವ ಎರಡು ದಿನಗಳ "ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನ 2022" ಕಾರ್ಯಕ್ರಮದಲ್ಲಿ ಪಿಎಂ ಕಿಸಾನ್ ಯೋಜನೆಯ 12ನೇ ಕಂತಾಗಿ ರೈತರ ಖಾತೆಗಳಿಗೆ 16 ಸಾವಿರ ಕೋಟಿ ರೂ. ಹಣವನ್ನು ವರ್ಗಾಯಿಸಲಾಯಿತು.
ಅತಿವೃಷ್ಟಿಯ ಹೊಡೆತಕ್ಕೆ ಸಿಲುಕಿದ ರೈತಾಪಿ ವರ್ಗಕ್ಕೆ ಈಗ ಮತ್ತೆ ಗಾಯದ ಮೇಲೆ ಬರೆ ಬಿದ್ದಿದೆ. ಸಾಲಸೋಲ ಮಾಡಿ ರೈತರು ಬೆಳೆ ಬೆಳೆದಿದ್ದು, ಅತಿಯಾದ ಮಳೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಯಾದಗಿರಿ ರೈತರ ಸ್ಥಿತಿ.
ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಸೆ.26ರಂದು ಬೆಳಗ್ಗೆ 11ಗಂಟೆಗೆ ರ್ಯಾಲಿ ಆರಂಭವಾಗಲಿದೆ. ಕೆ.ಎಸ್.ಆರ್. ರೈಲ್ವೆ ನಿಲ್ದಾಣದಿಂದ ವಿಧಾನಸೌಧವರೆಗೂ ಬೃಹತ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ.
ರಾಜ್ಯದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯ ಪರಿಣಾಮ ತರಕಾರಿ ಬೆಲೆ ಮೇಲೆ ಪ್ರಭಾವ ಬೀರುತ್ತದೆ. ತಿಂಗಳ ಆರಂಭದಲ್ಲಿಯೇ ತರಕಾರಿ ಬೆಲೆ ಏರಿಳಿತವಾಗಿದ್ದು, ಜನರಲ್ಲಿ ಕೊಂಚ ಅಸಮಾಧಾನ ಮೂಡಿಸಿತ್ತು.
ರಾಜ್ಯದ ನಾನಾ ಭಾಗಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ತರಕಾರಿ ಬೆಳೆಯಲ್ಲಿ ವ್ಯತ್ಯಾಸ ಬೀರಿದೆ. ಇನ್ನು ಜಿಎಸ್ಟಿ ನೂತನ ಕಾನೂನಿಂದ ಬಳಲಿ ಹೋಗಿದ್ದ ಸಾರ್ವಜನಿಕರಿಗೆ ಈ ದರ ಏರಿಕೆ ಮತ್ತಷ್ಟು ಸಂಕಷ್ಟ ನೀಡಿದೆ.
ಹಸಿಮೆಣಸು, ಆಲೂಗಡ್ಡೆ, ನೆಲ್ಲಿಕಾಯಿ, ತೆಂಗಿನಕಾಯಿ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿದೆ. ಕಳೆದ ದಿನ ಯಥಾಸ್ಥಿತಿಯಲ್ಲಿದ್ದ ಬೆಲೆ ಇಂದು ಏರಿಳಿತವಾಗಿದೆ. ಈ ಬೆಲೆ ಏರಿಕೆಯು ಸಾರ್ವಜನಿಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
Government Schemes for Farmers: ರೈತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಹಲವು ಹೆಜ್ಜೆಗಳನ್ನು ಇಡುತ್ತಿದೆ. ಇನ್ನೊಂದೆಡೆ ರೈತರನ್ನು ಉದ್ದೇಶಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೀಡಿರುವ ಒಂದು ಹೇಳಿಕೆಯಿಂದ ರೈತರಿಗೆ ಭಾರಿ ಲಾಭ ಉಂಟಾಗುವ ಸಾಧ್ಯತೆ ಇದೆ.
ರೈತರಿಂದ ಸಿಎಂ ಬೊಮ್ಮಾಯಿ ನಿವಾಸಕ್ಕೆ ಮುತ್ತಿಗೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ರೈತರ ಬೃಹತ್ ರ್ಯಾಲಿ .. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಲಿರುವ ಸಾವಿರಾರು ರೈತರು
By accepting cookies, you agree to the storing of cookies on your device to enhance site navigation, analyze site usage, and assist in our marketing efforts.