ಕ್ರಿಕೆಟ್ ನಲ್ಲಿ ರಾಹುಲ್ ದ್ರಾವಿಡ್ ರನ್ನು ಭಾರತದ ಗೋಡೆ ಎಂದು ಕರೆಯಲಾಗುತ್ತದೆ. ಇದಕ್ಕೆ ಪೂರಕ ಎನ್ನುವಂತೆ ರಾಹುಲ್ ದ್ರಾವಿಡ್ ಮೈದಾನದಲ್ಲಿ ವೇಗದ ಬೌಲರ್ ಗಳನ್ನೂ ನೀರಿಳಿಸುತ್ತಿದ್ದ ರೀತಿ ಮತ್ತು ಸುದೀರ್ಘವಾಗಿ ಬ್ಯಾಟಿಂಗ್ ಮಾಡುವ ಮೂಲಕ ತಂಡವನ್ನು ಅಪಾಯದಿಂದ ಕಾಪಾಡುವ ಪರಿ ಇವೆಲ್ಲವೂ ಅವರನ್ನು ಒಬ್ಬ ಆಟಗಾರನಾಗಿ ವಿಭಿನ್ನ ಸ್ಥಾನದಲ್ಲಿ ನಿಲ್ಲಿಸುತ್ತವೆ.
BCCI Strict action Against Star Players: ಟೀಂ ಇಂಡಿಯಾಕ್ಕೆ ಸಂಬಂಧಿಸಿದಂತೆ ಒಂದು ದೊಡ್ಡ ಸುದ್ದಿ ಹೊರಬಿದ್ದಿದೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಹೀನಾಯ ಸೋಲಿಗೆ ಬಿಸಿಸಿಐ ಸಿಟ್ಟಾಗಿದೆ ಎಂದು ವರದಿಯಾಗಿದೆ. ಇದರ ಭಾಗವಾಗಿ ತಂಡದಲ್ಲಿರುವ ಬಹುತೇಕ ಹಿರಿಯ ಆಟಗಾರರು ಟೆಸ್ಟ್ ಮಾದರಿಯಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ನಂಬಲಾಗಿದೆ.
Smriti Mandhana: ಭಾರತ ಮಹಿಳಾ ತಂಡ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿದೆ. ಅಹಮದಾಬಾದ್ನಲ್ಲಿ ಮಂಗಳವಾರ ನಡೆದ ಸರಣಿ ನಿರ್ಣಾಯಕ ಪಂದ್ಯವಾಗಿದ್ದ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್ಗಳ ಜಯ ಸಾಧಿಸಿದೆ. ಟೀಂ ಇಂಡಿಯಾ ಉಪನಾಯಕಿ ಸ್ಮೃತಿ ಮಂಧಾನ 122 ಎಸೆತಗಳಲ್ಲಿ 10 ಬೌಂಡರಿ ಭಾರಿಸಿ ಶತಕ ಗಳಿಸುವ ಮೂಲಕ ಟೀಂ ಇಂಡಿಯಾ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
IND vs NZ 3rd Test: ನ್ಯೂಜಿಲೆಂಡ್ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ಸರಣಿ ಸೋಲು ಕಂಡಿರುವ ಟೀಂ ಇಂಡಿಯಾ ಅಂತಿಮ ಸಮರಕ್ಕೆ ಸಿದ್ಧವಾಗುತ್ತಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶುಕ್ರವಾರದಿಂದ (ನವೆಂಬರ್ 1) ಆರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಕಣಕ್ಕಿಳಿಯಲಿದೆ. ಅನಿರೀಕ್ಷಿತವಾಗಿ ಮೊದಲೆರಡು ಟೆಸ್ಟ್ಗಳಲ್ಲಿ ಸೋತಿದ್ದ ಟೀಂ ಇಂಡಿಯಾ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿಯನ್ನು 0-2 ಅಂತರದಲ್ಲಿ ಕಳೆದುಕೊಂಡಿದೆ.
ಶುಭಮನ್ ಗಿಲ್ ವಾಪಸಾತಿಯಿಂದಾಗಿ ರಾಹುಲ್ ಮತ್ತು ಸರ್ಫರಾಜ್ ಅವರಲ್ಲಿ ಒಬ್ಬರು ಹೊರಗುಳಿಯಬೇಕಾಗಬಹುದು ಎನ್ನುವ ಮಾತು ಕೇಳಿ ಬರುತ್ತಿದೆ. ರಾಹುಲ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.
IND vs NZ: ಪ್ರತಿಕೂಲ ಪರಿಸ್ಥಿತಿಗಳ ಹೊರತಾಗಿಯೂ, ಬಾಂಗ್ಲಾದೇಶ ತಂಡದಿಂದ ಅಬ್ಬರಿಸಿ ಗೆದ್ದಿದ್ದ ಭಾರತ ತಂಡ, ನ್ಯೂಜಿಲೆಂಡ್ ವಿರುದ್ದದ ಟೆಸ್ಟ್ ಪಂದ್ಯದಲ್ಲಿ ಸೋತಿದೆ. ಕಿವೀಸ್ ತಂಡ ಎಂಟು ವಿಕೆಟ್ಗಳಿಂದ ಸರಣಿ ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
KL Rahul: ಬೆಂಗಳೂರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ಎಂಟು ವಿಕೆಟ್ಗಳಿಂದ ಸೋತಿತ್ತು. ಮೊದಲ ಇನಿಂಗ್ಸ್ನಲ್ಲಿ 46 ರನ್ಗಳಿಗೆ ಕುಸಿದಿದ್ದರೂ, ಎರಡನೇ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ ದಿಟ್ಟ ಹೋರಾಟ ನಡೆಸಿ ಪೈಪೋಟಿಗೆ ಇಳಿದಿತ್ತು. ಆದರೆ ಕಿವೀಸ್ ವಿರುದ್ಧ ಉತ್ತಮ ಆಟ ಆಡಲಾಗದೆ, ಭಾರತ ತಂಡ ಎದುರಾಳಿ ತಂಡದ ಎದುರು ಮಂಡಿಯೂರಿತ್ತು.
Rohit Sharma: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಅಭಿಮಾನಿಯೊಬ್ಬ ವಿಚಿತ್ರ ಪ್ರಶ್ನೆ ಕೇಳಿದ್ದಾನೆ. IPL 2025 ರ ಮೆಗಾ ಹರಾಜಿನ ಹಿನ್ನೆಲೆಯಲ್ಲಿ, ನೀವು ಯಾವ ತಂಡಕ್ಕೆ ಹೋಗುತ್ತೀರಿ? ಎಂದು ರೋಹಿತ್ಗೆ ಕೇಳಿದರು. ನಿನೆಗೆ ನಾನು ಯಾವ ತಂಡ ಸೇರುವುದು ಬೇಕು ಎಂದು ರೋಹಿತ್ ಶರ್ಮಾ ಅಭಿಮಾನಿಯನ್ನು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಅಭಿಮಾನಿ ಆರ್ಸಿಬಿ ತಂಡದ ಹೆಸರು ಸೂಚಿಸಿದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
IND vs NZ: ನ್ಯೂಜಿಲೆಂಡ್ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ಸರಣಿಯನ್ನು ಟೀಂ ಇಂಡಿಯಾ ಸೋಲಿನೊಂದಿಗೆ ಆರಂಭಿಸಿದೆ. ಬೆಂಗಳೂರಿನಲ್ಲಿ ಭಾನುವಾರ ಕೊನೆಗೊಂಡ ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಆತಿಥೇಯ ಭಾರತವನ್ನು 8 ವಿಕೆಟ್ ಗಳಿಂದ ಸೋಲಿಸಿತು. ಪವಾಡ ಮಾಡುತ್ತೇನೆ ಎಂದುಕೊಂಡ ಭಾರತದ ಸ್ಪಿನ್ನರ್ಗಳು ಕೈ ಚಿಲ್ಲುವ ಮೂಲಕ ಪಂದ್ಯವನ್ನು ಸೋಲಿನತ್ತಾ ಕೊಂಡಯ್ದರು. ಸುಮಾರು 36 ವರ್ಷಗಳ ನಂತರ ನ್ಯೂಜಿಲೆಂಡ್ ಭಾರತದ ನೆಲದಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದಿದೆ. 1988ರಲ್ಲಿ ಕೊನೆಯ ಬಾರಿಗೆ ನ್ಯೂಜಿಲೆಂಡ್ ಟೆಸ್ಟ್ ಗೆದ್ದಿತ್ತು.
India vs New Zealand, 1st Test Match: ಟೀಂ ಇಂಡಿಯಾದ ಇನ್ನಿಂಗ್ಸ್ನ 81ನೇ ಓವರ್ನಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಅಂಪೈರ್ಗಳು ಹೊಸ ಚೆಂಡು ನೀಡಿದ ಬಳಿಕವೇ ಭಾರತ ಪರವಿದ್ದ ಪಂದ್ಯವು ಕಿವೀಸ್ ಪರ ವಾಲಿತು ಎನ್ನಲಾಗಿದೆ. ಈ ವೇಳೆ ಭಾರತ ಕೇವಲ 3 ವಿಕೆಟ್ ನಷ್ಟಕ್ಕೆ 400 ರನ್ ಗಳಿಸಿತ್ತು.
Sarfaraz Khan Century: ನ್ಯೂಜಿಲೆಂಡ್ ವಿರುದ್ಧದ 2ನೇ ಇನ್ನಿಂಗ್ಸ್ನಲ್ಲಿ ಸರ್ಫರಾಜ್ ಖಾನ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದು, ಶತಕ ಬಾರಿಸುವ ಮೂಲಕ ಭಾರತದ ಮಾಜಿ ಬ್ಯಾಟ್ಸ್ಮನ್ ಶಿಖರ್ ಧವನ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
IND vs NZ, 1st Test: ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಪಂತ್ ಟೀಂ ಇಂಡಿಯಾವನ್ನು ಸಂಕಷ್ಟದಿಂದ ಪಾರು ಮಾಡುವಲ್ಲಿ ಯಶಸ್ಸಿಯಾಗಿದ್ದರು. ಕ್ರೀಸ್ನಲ್ಲಿದ್ದ ಕಾಲ ಸ್ಫೋಟಕ ಆಟವಾಡಿದ ಅವರು 105 ಎಸೆತಗಳಲ್ಲಿ 9 ಬೌಂಡರಿ, 5 ಸಿಕ್ಸರ್ ಇದ್ದ 99 ರನ್ ಗಳಿಸಿದರು.
Sarfaraj khan: ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್ ಸರ್ಫರಾಜ್ ಖಾನ್ ಅಪರೂಪದ ಸಾಧನೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಸರ್ಫರಾಜ್ ಖಾನ್ ಶತಕ ಸಿಡಿಸಿ ಸಾಧನೆ ಮಾಡಿದ್ದಾರೆ. 110 ಎಸೆತಗಳಲ್ಲಿ ಶತಕ ಪೂರೈಸಿದರು. ಇದು ಟೆಸ್ಟ್ ಮಾದರಿಯಲ್ಲಿ ಸರ್ಫರಾಜ್ ಖಾನ್ ಅವರ ಮೊದಲ ಶತಕವಾಗಿದೆ. ಶುಭಮನ್ ಗಿಲ್ ಗಾಯಗೊಂಡ ನಂತರ ಅನಿರೀಕ್ಷಿತವಾಗಿ ತಂಡಕ್ಕೆ ಬಂದ ಸರ್ಫರಾಜ್ ಖಾನ್ ಮೊದಲ ಇನ್ನಿಂಗ್ಸ್ನಲ್ಲಿ ಡಕೌಟ್ ಆಗಿದ್ದರು. ಎರಡನೇ ಇನ್ನಿಂಗ್ಸ್ನಲ್ಲಿ ನಿರ್ಣಾಯಕ ಸಮಯದಲ್ಲಿ ಶತಕ ಸಿಡಿಸಿ ಅಪರೂಪದ ಸಾಧನೆ ಮಾಡಿದರು.
Smriti Mandanna: ಕರ್ನಾಟಕದ ಹೆಮ್ಮೆಯ ಸ್ಮೃತಿ ಮಂದಣ್ಣ ಹೊಸ ಮೈಲುಗಲ್ಲು ಒಂದನ್ನು ಸೃಷ್ಟಿಸಿದ್ದಾರೆ. ಭಾರತದ ಅತೀ ಹೆಚ್ಚು ರನ್ ಕಲೆಹಾಕಿದ ಮಹಿಳಾ ಆಟಗಾರರ ಪಟ್ಟಿಯಲ್ಲಿ ಸ್ಮೃತಿ ಮಂದಣ್ಣ ಹೆಸರು ಸೇರಿಕೊಂಡಿದೆ.
ಮದುವೆ ಮಂಟಪದಲ್ಲಿ ಇಂಡೋ -ಕಿವೀಸ್ ಸೆಮಿ ಫೈನಲ್ ವೀಕ್ಷಣೆ
ಆರತಕ್ಷತೆಗೆ ಬಂದವರಿಗೆ LED ಮೂಲಕ ಪಂದ್ಯವೀಕ್ಷಣೆಗೆ ಅವಕಾಶ
ನಿನ್ನೆ SSK ಕಲ್ಯಾಣ ಮಂಟಪದಲ್ಲಿ ಕ್ರಿಕೆಟ್ ಪ್ರೇಮಿಗಳ ಮದುವೆ
ತುಮಕೂರು ಜಿಲ್ಲೆ ಪಾವಗಡದ ಎಸ್ಎಸ್ಕೆ ಕಲ್ಯಾಣ ಮಂಟಪ
ಸೌಂದರ್ಯ, ಕಾರ್ತಿಕ್ ಮದುವೆಯಲ್ಲಿ ಸೆಮಿ ಫೈನಲ್ ವೀಕ್ಷಣೆ
ಕಿವೀಸ್ ವಿರುದ್ಧ ಇಂಡಿಯಾಗೆ ಐತಿಹಾಸಿಕ ಗೆಲುವು
ವಿಶ್ವಕಪ್ ಫೈನಲ್ಗೆ ‘ಭಾರತ’ ಗ್ರ್ಯಾಂಡ್ ಎಂಟ್ರಿ
ಮೊಹಮ್ಮದ್ ಶಮಿ ದಾಳಿಗೆ ಕಿವೀಸ್ ಉಡೀಸ್
ಸತತ 6ನೇ ವಿಕೆಟ್ಗಳ ಪಡೆದು ಮಿಂಚಿದ ಶಮಿ
ಇತ್ತ ಬ್ಯಾಟಿಂಗ್ನಲ್ಲಿ ವಿಶ್ವದಾಖಲೆ ಬರೆದ ವಿರಾಟ್
Shoaib Akhtar Statement on IND vs NZ Semi Final: ಪಾಕಿಸ್ತಾನದ ದಂತಕಥೆ ಶೋಯೆಬ್ ಅಖ್ತರ್ ಅವರು ನ್ಯೂಜಿಲೆಂಡ್ ತಂಡದ ಬೌಲಿಂಗ್ ಬಗ್ಗೆ ಕಮೆಂಟ್ ಮಾಡಿದ್ದಾರೆ. “ನ್ಯೂಜಿಲೆಂಡ್ ತಂಡದಿಂದ ಬೌಲಿಂಗ್ ಉತ್ತಮವಾಗಿಲ್ಲ. ಟಾಸ್ನಲ್ಲಿಯೇ ನ್ಯೂಜಿಲೆಂಡ್ ಹೊರಬಿದ್ದಿದ್ದು ಸತ್ಯ” ಎಂದು ಹೇಳಿದ್ದಾರೆ.
Virat and Anushka flying kiss : ಸೆಮಿಫೈನಲ್ನಲ್ಲಿ ವಿರಾಟ್ ಮತ್ತು ಟೀಂ ಇಂಡಿಯಾ ಆಡುತ್ತಿರುವುದನ್ನು ಅನುಷ್ಕಾ ವೀಕ್ಷಿಸುತ್ತಿರುವ ಹಲವಾರು ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಈ ವೇಳೆ ಶತಕ ಸಿಡಿಸಿದ ಬೆನ್ನಲ್ಲೆ ವಿರುಷ್ಕಾ ಪರಸ್ಪರ ಫ್ಲೈಯಿಂಗ್ ಕಿಸ್ಸ್ ನೀಡಿದ ಮುದ್ದಾದ ಕ್ಷಣ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.
Umpires For World Cup Semi-final 2023: ಭಾರತೀಯ ಕ್ರಿಕೆಟ್ ತಂಡವು ಪಂದ್ಯಾವಳಿಗಳಲ್ಲಿ ಎಲ್ಲಾ ಲೀಗ್ ಪಂದ್ಯಗಳನ್ನು ಗೆದ್ದಿದೆ. ಇನ್ನು 5 ಪಂದ್ಯಗಳನ್ನು ಗೆದ್ದ ನ್ಯೂಜಿಲೆಂಡ್ 4ನೇ ಸ್ಥಾನದಲ್ಲಿದೆ. ಮೊದಲ ಸೆಮಿ -ಫೈನಲ್ ಪಂದ್ಯ ಮೊದಲ ಮತ್ತು ನಾಲ್ಕನೇ ತಂಡಗಳ ನಡುವೆ ನಡೆದರೆ, ಎರಡನೇ ಸೆಮಿ -ಫೈನಲ್ ಎರಡನೇ ಮತ್ತು ಮೂರನೇ ಸ್ಥಾನದಲ್ಲಿರುವ ತಂಡಗಳ ನಡುವೆ ನಡೆಯಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.