ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಅಧ್ಯಕ್ಷ ಡಾ.ಕೆ. ಶಿವನ್ (K Sivan) ಅವರು ಜಿಎಸ್ಎಲ್ವಿ-ಎಫ್ 10/ಇಒಎಸ್ -03 ಕಾರ್ಯಾಚರಣೆಯನ್ನು ಕ್ರಯೋಜೆನಿಕ್ ಹಂತದಲ್ಲಿ (Cryogenic Stage) ತಾಂತ್ರಿಕ ವ್ಯತ್ಯಾಸದಿಂದಾಗಿ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.
ಅಂತರಿಕ್ಷದಲ್ಲಿ ಮಾನವನನ್ನು ಕಳುಹಿಸುವುದಕ್ಕೂ ಮುನ್ನ ಎರಡು ಬಾರಿ ರೋಬೋಟ್ ( ಮಾನವ ರೀತಿ ಕಾಣಿಸುವ ಹ್ಯೂಮನೈಡ್ ಮಾಡೆಲ್ ) ಅನ್ನು ಕಳುಹಿಸಲು ಭಾರತೀಯ ಬಾಹ್ಯಾಕಾಶ ಸಂಸ್ಥೆ ISRO ಸಿದ್ಧತೆ ನಡೆಸಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮುಖ್ಯಸ್ಥ ಕೆ.ಶಿವನ್ ಬುಧವಾರ (ಜನವರಿ 1) ಕೇಂದ್ರವು ಚಂದ್ರಯಾನ್ -3 ಕಾರ್ಯಾಚರಣೆಗೆ ಅನುಮೋದನೆ ನೀಡಿದೆ ಮತ್ತು ಇಸ್ರೋ ವಿಜ್ಞಾನಿಗಳು ಪ್ರಸ್ತುತ ಈ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ಚಂದ್ರಯಾನ-3 ರ ಅಂದಾಜು ವೆಚ್ಚ ಸುಮಾರು 250 ಕೋಟಿ ಆಗಲಿದೆ ಎಂದು ಶಿವನ್ ಹೇಳಿದ್ದಾರೆ.
Cartosat-3 ಉಪಗ್ರಹವು ಮೂರನೇ ತಲೆಮಾರಿನ ಸುಧಾರಿತ ಉಪಗ್ರಹವಾಗಿದ್ದು, ಉತ್ತಮ ಗುಣಮಟ್ಟದ ಛಾಯಾಚಿತ್ರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನು 509 ಕಿಲೋಮೀಟರ್ ಎತ್ತರದಲ್ಲಿರುವ ಕಕ್ಷೆಯಲ್ಲಿ 97.5 ಡಿಗ್ರಿಗಳಷ್ಟು ಹೊಂದಿಸಲಾಗುವುದು.
ಚಂದ್ರಯಾನ-2 ಆರ್ಬಿಟರ್ ಅತ್ಯಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ, ವಿಕ್ರಮ್ ಲ್ಯಾಂಡರ್ ನಿಂದ ಇನ್ನೂ ಯಾವುದೇ ಸಿಗ್ನಲ್ ಸಿಕ್ಕಿಲ್ಲ ಎಂದು ಇಸ್ರೋ ಮುಖ್ಯಸ್ಥ ಕೆ.ಶಿವನ್ ತಿಳಿಸಿದ್ದಾರೆ.
ಚಂದ್ರನ ಮೇಲ್ಮೈಗಿಂತ 2.1 ಕಿ.ಮೀ ದೂರದಲ್ಲಿದ್ದಾಗ ಬಾಹ್ಯಾಕಾಶ ಏಜೆನ್ಸಿಯೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿರುವ ಚಂದ್ರಯಾನ-2 ರ ವಿಕ್ರಮ್ ಲ್ಯಾಂಡರ್ ಇರುವ ಸ್ಥಳ ಪತ್ತೆಯಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಖ್ಯಸ್ಥ ಕೆ.ಶಿವನ್ ಭಾನುವಾರ ಹೇಳಿದ್ದಾರೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಚಂದ್ರಯಾನ್ -2 ಮಂಗಳವಾರ ಬೆಳಿಗ್ಗೆ 9 ಗಂಟೆ 2 ನಿಮಿಷಕ್ಕೆ ಸರಿಯಾಗಿ ಭೂಮಿಯ ಕಕ್ಷೆಯಿಂದ ಚಂದ್ರನ ಕಕ್ಷೆಗೆ ಇಳಿದಿದೆ ಎಂದು ಇಸ್ರೋ ವಿಜ್ಞಾನಿಗಳು ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.