IND VS SL 3rd T20 : ಭಾರತ ಮತ್ತು ಶ್ರೀಲಂಕಾ ನಡುವೆ ಇಂದು ಟಿ20 ಸರಣಿಯ ಮೂರನೇ ಪಂದ್ಯ ಸೂರ್ಯ ಕುಮಾರ್ ಯಾದವ್ ಅವರ ನೇತೃತ್ವದಲ್ಲಿ ನಡೆಯುತ್ತಿದ್ದು, ಭಾರತ ತಂಡ ಶ್ರೀಲಂಕಾಗೆ 138 ರನ್ ಗಳ ಗೆಲುವಿನ ಗುರಿಯನ್ನು ನೀಡಿತ್ತು ಭಾರತ ತಂಡ ಸೂಪರ್ ಓವರ್ ನಲ್ಲಿ ಆಡುವ ಮೂಲಕ ಗೆಲುವನ್ನು ಸಾಧಿಸಿತು.
Gautam Gambhir: ಕಳೆದ ಕೆಲವು ದಿನಗಳಿಂದ ಭಾರತೀಯ ಕ್ರಿಕೆಟ್ ನಲ್ಲಿ ಭಾರೀ ಬದಲಾವಣೆಗಳು ಆಗುತ್ತಿರುವುದು ಗೊತ್ತೇ ಇದೆ. ರಾಹುಲ್ ದ್ರಾವಿಡ್ ಕೋಚ್ ಅಧಿಕಾರಕ್ಕೆ ವಿದಾಯ ಹೇಳಿದ ನಂತರ ಗೌತಮ್ ಗಂಭೀರ್ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಮತ್ತೊಂದೆಡೆ, ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಪಾಂಡ್ಯ ಟಿ20 ನಾಯಕರಾಗಿ ಆಯ್ಕೆಯಾಗುತ್ತಾರೆ ಎಂಬ ನಿರೀಕ್ಷಿಸಲಾಗಿತ್ತು, ಆದರೆ ಸೂರ್ಯಕುಮಾರ್ ಯಾದವ್ ಅವರಿಗೆ ತಂಡದನಾಯಕತ್ವವನ್ನು ನೀಡಲಾಯಿತು. ಹಾರ್ದಿಕ್ಗೆ ಕನಿಷ್ಠ ಉಪನಾಯಕನ ಜವಾಬ್ದಾರಿಯನ್ನೂ ನೀಡಿಲ್ಲ.
Sunil Gavaskar: ಟಿ20 ವಿಶ್ವಕಪ್ ಫೈನಲ್ನಲ್ಲಿ ಸೂರ್ಯಕುಮಾರ್ ಯಾದವ್ ಅವರ ಅಮೋಘ ಕ್ಯಾಚ್ ಪಡೆಯುವ ಮೂಲಕ ಟೀಂ ಇಂಡಿಯಾ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದೀಗ ಈ ಕ್ಯಾಚ್ ವಿವಾದಕ್ಕಿಡಾಗಿದೆ. ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
T20 World Cup 2024: ಗುರುವಾರ (ಜೂನ್ 27) ನಡೆದ ಟಿ20 ವಿಶ್ವಕಪ್ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನುಸಿದ ಸೋಲಿಸುವ ಮೂಲಕ ಟೀಮ್ ಇಂಡಿಯಾ ವಿಶ್ವದ ಅತ್ಯುತ್ತಮ ತಂಡಗಳಲ್ಲಿ ಒಂದು ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ. ಈ ಮೂಲಕ ಬರೋಬ್ಬರಿ 10 ವರ್ಷಗಳ ನಂತರ ಟೀಮ್ ಇಂಡಿಯಾ ವಿಶ್ವಕಪ್ ಪಂದ್ಯದಲ್ಲಿ ಫೈನಲ್ಸ್ ಪ್ರವೇಶಿಸಿದೆ.
T20 world cup 2024: ಸೂಪರ್ 8ರ ಪಂದ್ಯಾವಳಿ ಶುರುವಾಗುವ ಮುನ್ನವೇ ಭಾರತ ತಂಡಕ್ಕೆ ದೊಡ್ಡ ಅಘಾತ ಎದುರಾಗಿದೆ. ಸ್ಟಾರ್ ಬ್ಯಾಟರ್ ಅಭ್ಯಾಸದ ವೇಳೆ ಗಾಯಗೊಂಡಿದ್ದು ಇವರು ಪಂದ್ಯ ಆಡುತ್ತಾರಾ ಅಥವ ಇಲ್ಲವಾ ಎನ್ನುವ ಅನುಮಾನ ಶುರುವಾಗಿದೆ.
What Is Sports Hernia: ಭಾರತ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟ್ಸ್ಮನ್ ಸೂರ್ಯ ಕುಮಾರ್ ಯಾದವ್ ಅವರು ಸ್ಪೋರ್ಟ್ಸ್ ಹರ್ನಿಯಾದಿಂದ ಬಳಲುತ್ತಿದ್ದಾರೆ. ಈ ಕಾಯಿಲೆ ಹರ್ನಿಯಾನಂತೆಯೇ ಇರುತ್ತದೆ. ಆದರೆ ಸ್ಪೋರ್ಟ್ಸ್ ಹರ್ನಿಯಾ ಹೆಚ್ಚಾಗಿ ಕ್ರೀಡಾಪಟುಗಳಲ್ಲಿ ಕಂಡುಬರುತ್ತದೆ. (Health News In Kannada)
ಮುಂಬರುವ ದಿನಗಳಲ್ಲಿ ಟೀಂ ಇಂಡಿಯಾ ನಾಯಕನಾಗಲು ತಾವೇ ದೊಡ್ಡ ಸ್ಪರ್ಧಿ ಎಂಬುದನ್ನು ಸೂರ್ಯಕುಮಾರ್ ಯಾದವ್ ಸಾಬೀತು ಮಾಡಿದ್ದಾರೆ. ಅವರ ನಾಯಕತ್ವದಲ್ಲಿ,ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಯಲ್ಲಿ ಟೀಮ್ ಇಂಡಿಯಾವನ್ನು 4-1 ಅಂತರದಲ್ಲಿ ಜಯಗಳಿಸಿದೆ.
ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿ ಮುಕ್ತಾಯದ ಬೆನ್ನಲ್ಲೇ ಇದೇ ನವೆಂಬರ್ 23ರಿಂದ ಆರಂಭವಾಗಿರುವ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಭಾರತದ ಸ್ಫೋಟಕ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ಗೆ ತಂಡದ ಸಾರಥ್ಯ ನೀಡಲಾಗಿದೆ.
Shubman Gill Absence : ಅನಾರೋಗ್ಯದ ಕಾರಣ ಶುಭಮನ್ ಗಿಲ್ ಮೊದಲ ಪಂದ್ಯದಂತೆ ಅಫ್ಘಾನಿಸ್ತಾನ ವಿರುದ್ಧದ (IND vs AFG) ಮುಂದಿನ ಪಂದ್ಯವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಟೀಂ ಇಂಡಿಯಾದ ಈ ಸ್ಪೋಟಕ ಆಟಗಾರ ಈ ಬಾರಿಯ ವಿಶ್ವಕಪ್ನಲ್ಲಿ ರನ್ ಗಳ ಮಳೆ ಸುರಿಸಬಹುದು ಎಂದು ಅಂದಾಜಿಸಲಾಗಿದೆ. ಈ ಆಟಗಾರ ಈಗ ಟೀಂ ಇಂಡಿಯಾದ ನೆಚ್ಚಿನ ಆಟಗಾರ. ಇದಕ್ಕೆ ಕಾರಣ ಈ ಬ್ಯಾಟ್ಸ್ಮನ್ನ ಅತ್ಯುತ್ತಮ ಪ್ರದರ್ಶನ.
ಆರ್ಆರ್ಆರ್ ಸಿನಿಮಾ ಅಶ್ವಮೇಧದ ಕುದುರೆಯಂತೆ ಒಂದರ ಮೇಲೊಂದು ದಾಖಲೆ ಬರೆಯುತ್ತ ಸಾಗುತ್ತಿದೆ. ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ರಾಜಮೌಳಿ ನಿರ್ದೇಶನದ ಚಿತ್ರ ಇತ್ತೀಚೆಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದುಕೊಂಡು ಇತಿಹಾಸ ಸೃಷ್ಟಿಸಿತು. ಅತ್ಯುತ್ತಮ ಒರಿಜಿನಲ್ ಹಾಡಿಗಾಗಿ ಈ ಪ್ರಶಸ್ತಿ ಬಂದಿತ್ತು. ನಾಟು ನಾಟು ಹಾಡಿಗೆ ಸಂಗೀತ ನೀಡಿದ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ತಂಡದ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು.
ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅದ್ಭುತ ಆಟ ಪ್ರದರ್ಶಿಸಿದರು. ಮೈದಾನದ ಪ್ರತೀ ಮೂಲೆಗಳಿಗೂ ಬಾಲ್ ಎಸೆಯುತ್ತಿದ್ದ ಸೂರ್ಯಕುಮಾರ್ ಯಾದವ್ 33 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಒಳಗೊಂಡ 50 ರನ್ ಗಳಿಸಿದ್ದಾರೆ. ಅವರ ಇನ್ನಿಂಗ್ಸ್ನಿಂದಾಗಿ ಟೀಂ ಇಂಡಿಯಾ ಅದ್ಭುತ ಸ್ಕೋರ್ ಮಾಡಲು ಸಾಧ್ಯವಾಯಿತು.
Ind vs SL: ಶ್ರೀಲಂಕಾ ವಿರುದ್ಧದ ಟಿ20 ಸರಣಿಯಿಂದ ಟೀಮ್ ಇಂಡಿಯಾದ ದೊಡ್ಡ ಮ್ಯಾಚ್ ವಿನ್ನರ್ ಹೊರಬಿದ್ದಿದ್ದಾರೆ. ಇದು ಟೀಂ ಇಂಡಿಯಾಗೆ ಇದುವರೆಗಿನ ದೊಡ್ಡ ಹಿನ್ನಡೆಯಾಗಿದೆ. ಭಾರತ ಮತ್ತು ಶ್ರೀಲಂಕಾ ನಡುವಿನ 3 ಪಂದ್ಯಗಳ ಟಿ20 ಸರಣಿ ನಾಳೆಯಿಂದ ಅಂದರೆ ಫೆಬ್ರವರಿ 24 ರಿಂದ ಲಕ್ನೋದಲ್ಲಿ ಆರಂಭವಾಗಲಿದೆ.
ಇದು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ಸತತ ಒಂಬತ್ತನೇ ಜಯವಾಗಿದ್ದು, ಪೂರ್ಣಾವಧಿ ನಾಯಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ಸತತ ಆರನೇ ಟಿ20 ಗೆಲುವಾಗಿದೆ. ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 17 ರನ್ ಗಳಿಂದ ಸೋಲಿಸಿದ ಭಾರತ 3-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.